ಬಾ ಹುಡುಗಿ,,,,,,,,,,,ಇಂದಾದರೂ ನಾವು ನಿಜವಾಗಿ ಪ್ರೇಮಿಸೋಣ.

ಬಾ ಹುಡುಗಿ,,,,,,,,,,,ಇಂದಾದರೂ ನಾವು ನಿಜವಾಗಿ ಪ್ರೇಮಿಸೋಣ.

ಪ್ರೇಮಿಗಳ ದಿನವೇ,
ನನ್ನ ಪ್ರೇಮವೆಲ್ಲ ಖಾಲಿಯಾಗಿದೆ ಹುಡುಗಿ,
ಎದೆಯನ್ನು ಬಿರುಬಿಸುಲಿಗೆ ಒಡ್ಡಿ,
ದೇಹವನ್ನು ಮಂಜಿನ ಹಂದರದೊಳಗೆ ಸಿಕ್ಕಿಸಿ,
ಇಷ್ಟು ದಿನ ನಮ್ಮಿಬರ ಸಲ್ಲಾಪಕ್ಕೆ ಸಹಕರಿಸಿದರಲ್ಲ 
ಆ ಯೋಧರು,,,,,, 
ಅವರಿಗೆ ಮುಡಿಪಾಗಿಟ್ಟಿದ್ದೇನೆ, ನನ್ನೊಡಲ ಸಂಪೂರ್ಣ ಪ್ರೇಮವನ್ನು.

ನಿನಗೆಂದು ಬೊಗಸೆ ತುಂಬ ಪ್ರೀತಿ ತುಂಬಿಕೊಂಡು 
ಕಾಯುತ್ತಿದ್ದ ಆ ದಿನ,,,, ಕ್ಷುಲ್ಲಕ ಕಾರಣಕ್ಕೆ ನೀ ಬರಲೇಇಲ್ಲ,,,,,
ಆ ದಿನವೂ ಯಾವ ಕಾರಣವನೂ ಕೊಡದೆ,
ಕಾಯುತ್ತಿದ್ದರು ಆ ಯೋದರು, ನಮ್ಮೊಡಲ ಪ್ರೇಮವನ್ನು,
ಅವರ ಮನದನ್ನೆಯನ್ನು ನಮಗಾಗಿ ಒಂಟಿಯಾಗಿಸಿ,
ನನ್ನ-ನಿನ್ನ ಪ್ರೇಮ ಸಾಟಿಯೇ ಅವರ ಧೈತ್ಯ ತ್ಯಾಗದೆದುರು ?

ಹೊಟ್ಟೆ ಬಿರಿಯುವಷ್ಟು ತಿಂದು, ಕಣ್ಣಿಗೆ ಕಂಡದ್ದನ್ನು ಅನುಭವಿಸಿ,
ಅದಕ್ಕೆಲ್ಲ ಪ್ರೇಮವೆಂಬ ಹೆಸರು ಕಟ್ಟಿ 
ಮೆರೆದವಲ್ಲ ಪ್ರಿಯೆ ನಾವು, ಬೆಂಗಳೂರಿನ ಸ್ವಚ್ಚ ರೋಡಿನೊಳಗೆ,
ಅದೇ ಸಮಯದಲ್ಲಿ, 
ಮಂಜಿನ ಆಳದಲ್ಲಿ, ಮರುಭೂಮಿಯ ತಪ್ಪಲಲ್ಲಿ ಅದೆಷ್ಟು ಜೀವಗಳು, 
ಬದುಕಿಗಾಗಿ ಹೊಡೆದಾಟ ನಡೆಸಿರಬಹುದು,
ಆ ಯೋಧರ ಬರುವಿಕೆಗೆ ಅವಿರತವಾಗಿ ಕಾದ 
ಮಗು, ಹೆಂಡತಿ, ತಾಯಿ ಇವರದ್ದಲ್ಲವೇ ನೈಜ ಪ್ರೇಮ ?

ತೊಡೆಗೆ ಅಂಟುವ ನಿನ್ನ ಪ್ಯಾಂಟುಗಳಿಗೆ, ಅದರ ಉದ್ದ ಅಗಲದ ಅಳತೆಗೆ,
ಗಂಟೆಗಟ್ಟಲೆ, ನಾನು-ನೀನು ಕಂಡ ಕಂಡ ತಂಪು ಮಾಲುಗಳಲ್ಲಿ ಅಲೆದು 
ಸುಸ್ತಾಯಿತೆಂದು, ಎರಡೆರಡು ಲೋಟ ಕಬ್ಬಿನ ಹಾಲು ಕುಡಿದು ಗಡದ್ದಾಗಿ ಮಲಗಿದೆವಲ್ಲ,,,
ಆಗೆಲ್ಲ ಆ ಯೋಧರು ಉಸಿರು ಕಟ್ಟಿ, ಭೂಮಿಯ ಕೆಳಗೆ 
ತುಂಡು ಆಮ್ಲಜನಕಕ್ಕೆ ಎಡೆಬಿಡದೆ ಉಸಿರಾಡಿದರಲ್ಲ, 
ಅವರದ್ದಲ್ಲವೇ ನೈಜ ಪ್ರೇಮ, ನಮ್ಮನ್ನೂ, ದೇಶವನ್ನೂ ಕಾಪಾಡುವ ಪ್ರೇಮ.

ಪ್ರೇಮಕ್ಕೊಂದು ಕಳಂಕ ನಾವ್ಯಾಕಾಗಬೇಕು ಇಂದು,,,,
ಬಾ ಇಲ್ಲಿ,,,,,,, ನನ್ನ ಪಕ್ಕದಲ್ಲಿ,,,,,
ಕೈ ಮುಗಿದು, ಪ್ರಾರ್ಥಿಸೋಣ,
ನಮ್ಮಂತೆ ಕೊಟ್ಯಾಂತರ ಪ್ರೇಮಿಗಳ ಎದೆಯನ್ನು, 
ಜೀವ ಪಣಕ್ಕಿಟ್ಟು ಕಾಪಾಡಿದ ಯೋಧರ ಪ್ರೇಮ ಸಫಲವಾಗಲಿ ಎಂದು.

ಬಾ ಹುಡುಗಿ,,,,,,,,,,,
ಕೊನೆ ಪಕ್ಷ ಇಂದಾದರೂ ನಾವು ನಿಜವಾಗಿ ಪ್ರೇಮಿಸೋಣ.

-ಜೀ ಕೇ ನ

Comments