ಭೂಮಿಗೊಂದು ತಲೆದಿಂಬು ಬೇಕು,

ಭೂಮಿಗೊಂದು ತಲೆದಿಂಬು ಬೇಕು,

ಭೂಮಿಗೊಂದು ತಲೆದಿಂಬು ಬೇಕು,
ಅವಿರತವಾಗಿ ದುಡಿದ ಸುಸ್ತು ಕಳೆಯಲು,
ಓ ಸೂರ್ಯನೇ,
ನೀನೂ ಒಂದೈದು ವರ್ಷ ಹುಟ್ಟಲೇ ಬೇಡ,
ಮಲಗಿಬಿಡು ಹಾಯಾಗಿ,,,,
ಚಂದ್ರ ನಿನಗ್ಯಾಕೆ ಕೋಪ,
ನೀನೂ ಹೋಗಿ ಬಾ ಮಡದಿಯ ಊರಿಗೆ,
ಅವಳ ಕೆನ್ನೆಗೆ ಮುತ್ತಿಕ್ಕಿ,
ಬರಸೆಳೆದು ಬಿಗಿದಪ್ಪಿ ಅದೆಷ್ಟು ದಿನವಾಯಿತು ಅಲ್ಲವೇ ?
ನಮ್ಮ ಬಗ್ಗೆ ಚಿಂತಿಸಬೇಡಿ!
ಸಾವಿರ ವರ್ಷಗಳಿಂದ,
ಭುವಿ-ಇತ್ತ ಮಡಿಲನು ಇನ್ನಷ್ಟು ಬಗೆದೆವು ನಾವು,,,
ಸೂರ್ಯನಿತ್ತ ಬೆಳಕಲಿ ಕುತಂತ್ರ ಮಾಡಿ ಕೆಟ್ಟ ನಗು ನಕ್ಕೆವು
ಚಂದ್ರನ ಬೆಳಕಲ್ಲಿ ಅನಾಚಾರಗಳ ಸುರಿಮಳೆಗೈದೆವು,,,
ಆದರೂ ನಿಮಗ್ಯಾಕೆ ನಮ್ಮ ಚಿಂತೆ,,,,
ಅಗೋ ದೂರದಲ್ಲಿ,
ಅದೆಷ್ಟು ನಕ್ಷತ್ರಗಳು ಮುನಿಸಿಕೊಂಡು ಓಡಿ ಹೋಗಿವೆ!
ನೀವೂ ಮುನಿಸಿಕೊಳ್ಳಿ ನಮ್ಮ ಮೇಲೊಮ್ಮೆ,,,,
ಕತ್ತಲೆಯ ಕೂಪಕ್ಕೆ ತಳ್ಳಿ, ಒಂದಿನಿತೂ ಅನ್ನ ನೀಡದೆ.
ನಿಮ್ಮೊಡಲ ಬಗೆದ ತಪ್ಪಿಗೆ, ಶಿಕ್ಷೆಯಾಗಬೇಕು ನಮಗೆ,
ರೈತರೆಲ್ಲ ಕಷ್ಟಪಟ್ಟು ದುಡಿದ,
ಅನ್ನವನ್ನು ಅರ್ಧಂಬರ್ಧ ತಿಂದು.
ಮೆದು ಹಾಸಿಗೆಯ ಮೇಲೆ,
ದಡಿಯ ಮೈಯನ್ನು ಹಚ್ಚಿ ಗಾಡವಾಗಿ ನಿದ್ರಿಸಿ.
ಬಗೆಬಗೆಯ ಹಸಿವಿಗೆ ಅನ್ಯರಿಗೆ ಬೆಂಕಿ ಇಕ್ಕಿದ,
ನಮ್ಮ ಮೇಲೆ ನಿಮಗೆ ಇಷ್ಟೊಂದು ಒಲವು ಬೇಡ.
ಭುವಿ ತಾಯಿಯೇ ನೋಡಲ್ಲಿ,
ನವಿಲು ಕುಣಿಯಲು, ಕೋಗಿಲೆ ಹಾಡಲು, ಗುಬ್ಬಿ ಹಾರಲು,
ನೀ ಹೆತ್ತ ಕಾಡುಗಳಲ್ಲಿ,
ಹೆಂಡ ಕುಡಿದು-ಕುಡಿದು ಬೀಗುತ್ತಿದ್ದಾರೆ ನನ್ನಂತ ಮಾನವರು,
ಮತ್ತ್ಯಾಕೆ ಮರುಕ ನಮ್ಮ ಮೇಲೆ,,,
ನೀ ಮಲಗಿಬಿಡು ಒಂದಷ್ಟು ವರ್ಷ ತಲೆದಿಂಬನ್ನು ಇಟ್ಟು,
ಸರಿ ಹೋಗಬಹುದೇನೋ ನಾವು !!

Comments