ಒಗ್ಗರಣೆ ಘಾಟು( ಚಟಾಕಿ )

ಒಗ್ಗರಣೆ ಘಾಟು( ಚಟಾಕಿ )

ಒಂದಿನ ಇದ್ದಕ್ಕಿದ್ದಂತೆ ನನ್ನ ತಲೆಯಲ್ಲಿ ಒಂದು ವಿಚಾರ ವಕ್ಕರಿಸಿಕೊಂಡು ಬಿಡ್ತು; ಆಕಾಶದಲ್ಲಿ ಮಿಂಚು ಬರುತ್ತಲ, ಹಾಗೆ. ಆದರೆ ಮಿಂಚು ತಕ್ಷಣ ಮಾಯವಾಗಿ ಹೋಗುತ್ತದೆ. ಈ ವಿಚಾರ ಕುಳಿತಲ್ಲಿ ನಿಂತಲ್ಲಿ ಮಿದುಳು ತಿನ್ನೋದಕ್ಕೆ ಶುರುವಾಯಿತು. ಬೇಕಿತ್ತ ನನ್ನ ತಲೆಗೆ ಇದು. ಮೊದಲೆ ಅಧ೯ಂಬರ್ದ ತಿಳುವಳಿಕೆ. ಯಾರಲ್ಲು ಕೇಳಲು ಭಯ, ಹೇಳಲು ಭಯ.
ಎಷ್ಟೋ ದಿನ ಮುಚ್ಚಿಟ್ಟುಕೊಂಡಿದ್ದೆ. ಈ ಮುಚ್ಚಿಡೊ ಸ್ವಭಾವ ಮೊದಲಿಂದಲೂ ಅಂಟಿಕೊಂಡು ಬಂದಿದೆ‌. ಅದೊಂತರ ಸ್ವಭಾವ. ಬಿಡಿ ನಿಮಗ್ಯಾಕೆ. ನನ್ನದು ಅದು, ನನಗೇ ಇರಲಿ.
ಅದೇ ಕಂಣ್ರೀ” ನಮ್ಮಲ್ಲಿ ಮಹಿಳಾ ಬರಹಗಾರರು ಯಾಕಿಷ್ಟು ಕಡಿಮೆ? ಯಾಕೆ ಬರೆಯುತ್ತಿಲ್ಲ? “ಹೀಗೆ ಏನೇನೊ ಮಹಿಳಾ ಮನೋಮಣಿಗಳ ಕುರಿತು ತಲೆ ಹೊಡಕೊತಾ ಇತ್ತು. ಛೆ, ಬಿಟ್ಟಾಕು ಈ ವಿಚಾರ. ನಿನಗ್ಯಾಕೆ ಬೇಕು ಬೇಡದ ಉಸಾಪರಿ. ತೆಪ್ಪಗೆ ಓದಿಕೊಂಡು ಬರೆದುಕೊಂಡು ಇರಬಾರದಾ? ” ಅಂತ ಎಷ್ಟು ಸಾರಿ ಹೇಳಿದಿನಿ ನನ್ನ ತಲೆಗೆ‌. ಉಹೂ, ಬಿಡವಲ್ಲದು.
ಆದರೆ ಈಗ ಸ್ಪಷ್ಟವಾಗಿ ಗೊತ್ತಾಗುತ್ತಿದೆ, “ಯಾಕೆ ಮಹಿಳಾ ಬರಹಗಾರರು ಕಮ್ಮಿ “ಅಂತ.
ಅದೆ ಕಂಣ್ರೀ, ಈ ಬರೆಯೊ ಮೂಡು ಅದ್ಯಾವಾಗ ದಾಳಿ ಇಡುತ್ತೊ ಗೊತ್ತಾಗೊಲ್ಲ. ಸುಯ್ಯಂತ ಒಳ್ಳೆ ರಾಕೆಟ್ ತರ. ಶಬ್ದಗಳ ಹಿಂಡು ಒಳ್ಳೆ ಜೇನು ನೊಣ ಮುತ್ತಿಕೊಂಡ ಹಾಗೆ ಮುತ್ತಿಕೊಳ್ಳುತ್ತವೆ ರಾಣಿ ಜೇನನ್ನ. ಆ ಟೈಮಲ್ಲಿ ಬರೆಯುವ ಮಹಿಳಾ ಕೈ ಬಿಡುವಿರಬೇಕಲ್ಲ! ಯಾವಾಗ ನೋಡಿದರೂ ಕೆಲಸ, ತಾಪತ್ರಯಗಳ ಸುರಿಮಳೆ. ಎಲ್ಲ ಮುಗಿಸಿ ಇನ್ನೇನು ಬರೆಯೋಣ ಅಂತ ಕೂತರೆ ಸಿಗಬೇಕಲ್ಲ ವಿಚಾರಗಳು, ಶಬ್ಧಗಳು. ಅದು ಆಗಲೆ ಗಂಡನ ಸೇವೆಯಲ್ಲೊ, ಮಕ್ಕಳ ಟಿಫಿನ್ ಬಾಕ್ಸನಲ್ಲೊ ಕಳೆದುಹೋಗಿಬಿಟ್ಟಿರುತ್ತೆ. ಬರಿ ಪೇಪರ ಮುಂದಿಟ್ಟುಕೊಂಡಿದ್ದೇ ಬಂತು.
ಹೀಂಗಾಗಿ ಕಳೆದು ಹೋದ ಬರಹ ಸಿಗದೆ, ತಲೆಗೆ ಬಂದಿದ್ದು ಕೂಡಲೆ ಬರೆಯೋಕು ಆಗದೆ ಮಹಿಳಾ ಲೇಖಕರ ಸೀಟು ಅದೆಷ್ಟು ಖಾಲಿ ಉಳಿದುಕೊಂಡುಬಿಟ್ಟಿದೆ ನೋಡಿ‌.
ಇನ್ಮೇಲೆ ಹಾಗಾಕೋಕೆ ಬಿಡಬೇಡಿ. ಗಂಡಸರಿಗೇನು ಮೂಡ ಬಂದಾಗೆಲ್ಲ ಕೂತು ಬರೆದುಬಿಡ್ತಾರೆ, ಹಾಗೆ ಪರಿಶೀಲಿಸಿ ಪತ್ರಿಕೆಗೆ ಕಳಿಸಿಯೂ ಬಿಡ್ತಾರೆ. ಈಗೇನು ಎಲ್ಲರ ಕೈನಲ್ಲೂ ಟಚ್ ಸ್ಕ್ರೀನು, ಲ್ಯಾಬಟಾಪ ಇತ್ಯಾದಿ‌.
ಆದರೆ ನಮ್ಮ ಮಹಿಳೆಯರು ಕೆಲವರು ಇನ್ನೂ ಅದೆ ಪೆನ್ನು, ಅದೆ ಮಕ್ಕಳು ಪರೀಕ್ಷೆ ಮುಗಿದ ಮೇಲೆ ಬಿಟ್ಟಿರ್ತಾರಲ್ಲ ಅಲ್ಲೊಂದು ಇಲ್ಲೊಂದು ಖಾಲಿ ಹಾಳೆ‌. ನಂಗೇನು ಅದೇ ಸಾಕು, ನಾ ಏನು ಬರೆಯೋದು ಅಷ್ಟ್ರಲ್ಲೇ ಇದೆ.
ಎಲ್ಲ ಕೆಲಸಕ್ಕೆ ಕಿಮ್ಮತ್ತು ಕೊಟ್ಟು ಬರೆಯುವ ಕೈ ಕಟ್ಟಾಕಿ ಪ್ರತಿಭೆನೇ ಬಿಟ್ಟಾಕಿರ್ತಾರಲ್ಲ. ಇನ್ನೆಲ್ಲಿ ಸಿಗಬೇಕು ಮಣ್ಣು. ಇದ್ದಿದ್ಲರಲ್ಲೆ ಮನೆ ಕಟ್ಟುವವರು‌.
ನೋಡಿ, ನಾ ಒಂದು ಗುಟ್ಟು ಹೇಳ್ತೀನಿ ನಿಮಗೆ. ಒಂದೊಳ್ಳೆ ಟಚ್ ಸ್ಕ್ರೀನ್ ಮೊಬೈಲೊ, ಅಥವಾ ಟ್ಯಾಬ ತಗೊಂಡು ಗಂಡನ ಹತ್ತಿರನೊ ಅಥವಾ ಈಗೇನು ಚಿಳ್ಳೆಪಿಳ್ಳೆಗೂ ಗೊತ್ತು ಈ ಆನ್ಲೈನ್ ಆಟ, ಕಲಿತು ನೋಡಿ. ಮೊಬೈಲ್ ಡೈರಿ ಸೆಟ್ ಮಾಡಕಳಿ. ಇದಕೇನು ಇಂಟರನೆಟ್ ಬೇಡ ಕರೆಂಟೂ ಬೇಡ. ಮೊಬೈಲು ಮಾತ್ರ ಚಾಜ೯ ಆಗಿದ್ರೆ ಸಾಕು. ಎರಡು ಬೆರಳು ಸಾಕಪ್ಪ ಅಕ್ಷರ ಒತ್ತೊದಕ್ಕೆ. ಕೂತಲ್ಲಿ ,ನಿಂತಲ್ಲಿ ,ಮಲಗದಲ್ಲಿ, ಅಡಿಗೆ ಮಾಡುವಾಗ ಹೊರಗೆ ಹೋದಲ್ಲಿ ಎಲ್ಲೆಂದರಲ್ಲಿ ಚಟಕ, ಪಿಟಕ ಅಂತ ಅಕ್ಷರಗಳ ಗುಂಪು, ಶಬ್ದಗಳ ಸಾಲು ಹರಿಸಿಬಿಡಬಹುದು. ದಾರದಲ್ಲಿ ನೇತಾಕಬುಡಿ ಕೊರಳಿಗೆ. ಅದೇ ಕಂಣ್ರೀ ಮೊಬೈಲು. ಹೌದು ಕಂಣ್ರೀ ಒಗ್ಗರಣೆ ಹಾಕಿದಷ್ಟು ಸುಲಭ.
ನೋಡಿ ಗಂಡಸರ ಮೂಗಿಗೆ ಹೇಂಗೆ ಘಾಟು ಹೊಡಿತದೆ. ಮತ್ತ್ಯಾಕೆ ತಡ ಒಂದು ಕೈ ನೋಡೇ ಬಿಡ್ರಲ್ಲ!
ಅಲ್ಲಾ ಸ್ವಾಮಿ, ನಾವೇನು ನಿಮ್ಮ ಬರಹ ಕದೀತಿಲ್ಲ. ನಿಮ್ಮ ಪಾಡಿಗೆ ನೀವು ಬರಿರಿ. ನಮ್ಮ ಮಹಿಳಾ ಬರಹಗಾರರು ತಮ್ಮಲ್ಲಿರುವ ಪ್ರತಿಭೆ ಹೊರಗೆ ತರಲಿ ಬಿಡಿ. ನಾವೂ ನಮ್ಮ ಮಹಿಳಾ ಬರಹಗಾರರ ಸಂಖ್ಯೆ ಜಾಸ್ತಿ ಮಾಡಿಕೊಂಡು ಕನ್ನಡ ನಾಡನ್ನು ಸಂಭ್ರಧ್ಧಿಗೊಳಿಸ್ತೀವಿ. ಓಕೆ ನಾ?:)

Comments

Submitted by nageshamysore Sun, 03/20/2016 - 17:25

ಬರೀರಿ ಬರೀರಿ.. :-)

ಬರೆದಷ್ಟು ಹೆಚ್ಚುತ್ತೆ ಬರೆಯೋರ ಮಗ್ಗಿ
ಬರ್ದಿದ್ದೆಲ್ಲಾ ಬೆಳೆ ಕನ್ನಡಕ್ಕೆ ಸುಗ್ಗಿ !