ದೇಹದ ಸುಃಖ

ದೇಹದ ಸುಃಖ

ವೈಶಾಖ ಮಾಸದ ಸೆಕೆಗೆ
ಉಲಿಯುವುದು ಮನ
ಅಪ್ಪಿದೆದೆಯ ಕುಪ್ಪಸವ
ಬಿಚ್ಚಿ ಬಿಸಾಕಲೆ
ಸುತ್ತಿಕೊಂಡ
ಐದು ಮೊಳ ಸೀರೆ
ಲಾಡಿಯ ಲಂಗದಿ
ಅಂಟಿಕೊಂಡ ದೇಹ
ಬೆವರುಗುಳ್ಳೆಯ ನವೆಗೆ
ತೊನಲಿ ಬಸವಳಿದು
ಬೇಡಾ ಬೇಡಾ ಬೇಡಾ
ಈ ಸೆಕೆ ಬಿಸಿಲು.
ಆಶಾಡದ ಗಾಳಿಗೆ
ಉಲಿಯುವುದು ಮನ
ತಲೆ ತುಂಬ ಕಿವಿ ಬಿಡದೆ
ಸುತ್ತು ರುಮಾಲು
ಹೊರಗಡೆ ಅಡಿ ಇಡದೆ
ಮಳೆಯಿಂದ ತೊಯ್ಯದೆ
ಗುಬ್ಬಚ್ಚಿಯ ಗೂಡಲಿ
ಬೆಚ್ಚಗೆ
ಕರಿ ಕಂಬಳಿ ಹೊದ್ದು
ಮಲಗು ಇದ್ದರೆ
ಬಿಸಿ ಬಜ್ಜಿ
ಕೋಡುಬಳೆ ಮೆದ್ದು
ಬೇಡಾ ಬೇಡಾ ಬೇಡಾ
ಕಿವಿಗಡಚಿಕ್ಕುವ ಸಿಡಿಲು ಗುಡುಗು.
ಮಾಗಿಯ ಮಾಸದ ಚಳಿಗೆ
ಉಲಿಯುವುದು ಮನ
ಬಿಸಿ ನೀರ ಜಳಕ
ದಪ್ಪನೆಯ
ಬೆಚ್ಚನೆಯ ಮೇಲಂಗಿ
ಹೊದ್ದ ರೇಶಿಮೆ ಶಾಲು
ಬಿಚ್ಚದಿರು ಗಪ್ಪನೆ
ಸುತ್ತಿಕೊಂಡಿರಲಿ ಬಿಡು
ಗಡ ಗಡ ನಡುಕ ದೇಹ
ಕೊರೆಯುವ ಚಳಿಗೆ
ಮೈ ಮರಗಟ್ಟುವುದು
ಬೇಕು ಬೇಕು ಬೇಕು
ಬೆಚ್ಚನೆಯ ಇನಿಯನ ಕಾವು.
ಯಾವ ಕಾಲವ
ಸಹಿಸುವೆ ಹೇಳು?
ಆದಿಯೂ ಕಷ್ಟ
ಮಧ್ಯವೂ ಕಷ್ಟ
ಅಂತ್ಯವೂ ಕಷ್ಟ
ಸತ್ತು ಸುಡುಗಾಡು
ಸೇರುವ ಈ ದೇಹ
ಸಹಿಸಲಾರದು
ಸದಾ ಸುಃಖವೇ ಬೇಕು
ಬೇಕು ಬೇಕು ಬೇಕೆಂದು
ಹಪಹಪಿಸಿ ಬದುಕೆಲ್ಲ
ಇದರ ಸೇವೆ
ಹಸಿವೆ, ನಿದ್ರೆ, ವಾಸಕ್ಕೆ
ಅಣತಿಯನಿತ್ತು
ದುಡಿದೆತ್ತಿನ ಗಾಡಿಯ ಪಯಣ
ದಾರಿ ಮುಗಿಯುವುದಿಲ್ಲ
ತೃಪ್ತಿ ಎಂಬುದಿಲ್ಲ
ಉಸಿರ ಹೊತ್ತ
ಈ ನಶ್ವರ ದೇಹಕ್ಕ

 

 

Comments