ಪ್ರಣಯ ರಾಜನ ಪ್ರಯೋಗ !

ಪ್ರಣಯ ರಾಜನ ಪ್ರಯೋಗ !

ಪ್ರಣಯ ರಾಜನ ಪ್ರಯೋಗ. ಮುಸ್ಲಿಂ ಪಾತ್ರದಲ್ಲಿ ಶ್ರೀನಾಥ್. 73 ರಲ್ಲೂ ಅಭಿನಯದ ತುಡಿತ. ಚಿತ್ರರಂಗಕ್ಕೆ ಬಂದು ಈಗ 50 ವರ್ಷ ಆಗುತ್ತಿದೆ. ಈ ವಯಸಲ್ಲಿ  ಶ್ರೀನಾಥ್ ಸಿಲುಕಿದ್ದಾರೆ ‘ಸುಳಿ’ಯಲ್ಲಿ.ಯಾಕೆ.? ಏನೂ..?
------
ಪ್ರಣಯರಾಜ ಶ್ರೀನಾಥ್. ಚಿತ್ರರಂಗಕ್ಕೆ ಬಂದು 50 ವರ್ಷ ಆಗುತ್ತಿದೆ. ವಯಸ್ಸು 73. ಈ ವಯಸಲ್ಲೂ ಅಭಿನಯಿಸೋ ಆಸಕ್ತಿ ಇದೆ. ಬಾಲಿವುಡ್ ನ ಅಮಿತಾಭ್ ಥರವೇ ಪ್ರಯೋಗ ಮಾಡೋ ಆಸೆ ಇದೆ. ಅದು ಈಗ ಸಾಕಾರ ಕೂಡ ಗೊಂಡಿದೆ. ಪುಟ್ಟಣ್ಣ ಅವರ ಶಿಷ್ಯ ಪಿ.ಎಚ್.ವಿಶ್ವನಾಥ್ ನಿರ್ದೇಶಕರು. ಕಥೆ ಕೂಡ ಅವರದ್ದೇ. ಚಿತ್ರ ಸಿದ್ಧಗೊಂಡಿದೆ. ಇದೇ ಮೇ-20 ಕ್ಕೆ ತೆರೆ ಕಾಣುತ್ತಿದೆ. ಈ ಸಂದರ್ಭದಲ್ಲಿ ಬರೆಯಬೇಕು ಅನಿಸಿತು. ಸಿನಿಮಾ ನೋಡೊ ಅವಕಾಶವೂ ಸಿಕ್ಕಿತ್ತು. ಚಿತ್ರ ನೋಡುವಾಗ ಆದ ಅನುಭವ ಹಂಚಿಕೊಳ್ಳೊ ಸಣ್ಣ ಪ್ರಯತ್ನ. ಮೊದಲ ಸಾಲು ಇಷ್ಟ ಆದರೆ, ಮುಂದೆ ಓದಿ.

ಪ್ರಣಯರಾಜ ಶ್ರೀನಾಥ್. ತೃಪ್ತರಾಗಿದ್ದಾರೆ. 49 ವರ್ಷ ಚಿತ್ರ ಜೀವನದಲ್ಲಿ ಮೊದಲ ಚಿತ್ರಕ್ಕೆ ಸಿಕ್ಕ ತೃಪತ್ತಿ 73 ನೇ ವಯಸ್ಸಿಗೆ ಸಿಕ್ಕಿದೆ. ಅದು ಅಷ್ಟು ಸುಲಭಕ್ಕೆ ಸಿಕ್ಕಿಲ್ಲ. ‘ಸುಳಿ’ಯೊಳಗೆ ಸಿಕ್ಕ ಮೇಲೆನೇ ಅದು ದಕ್ಕಿದೆ. ಪಿ.ಎಚ್.ವಿಶ್ವನಾಥ್ ರಂತಹ ಮಹಾನ್ ನಿರ್ದೇಶಕರ ಕೈಯಲ್ಲಿ ,ಕಲ್ಪನೆಯಲ್ಲಿ ಶ್ರೀನಾಥ್ ಮೋಲ್ಡ್ ಆಗಿದ್ದಾರೆ. ಈ ಇಳಿವಯಸ್ಸಿನಲ್ಲಿ. ಅದು ಅಂತಿಂತ ಬದಲಾವಣೆ ಅಲ್ಲವೇ ಅಲ್ಲ. ಈಗಾಗಲೇ ನೀವೂ ನೋಡಿರೋ ಫೋಟೋ ಆ ಸತ್ಯವನ್ನ ಬಿಚ್ಚಿಡುತ್ತವೆ.

ಶ್ರೀನಾಥ್ ಮುಸ್ಲಿಂ ಪಾತ್ರ ಮಾಡಿದ್ದಾರೆ. ಬುಡನ್ ಸಾಬ್ ಹೆಸರು ಆ ಪಾತ್ರಕ್ಕಿದೆ. ಬಿಳಿ ಗಡ್ಡ. ತೆಲೆ ಮೇಲೊಂದು ಟೋಪಿ. ಸದಾ ಕಡ್ಲೆ ಬೀಜ ತೀನೋ (ಶೇಂಗಾ) ಅಭ್ಯಾಸ. ಬುಡನ್ ಸಾಬ್​ ಮನೆಯಲ್ಲಿ ಪ್ರಾಯಕ್ಕೆ ಬಂದ ಮೂವರು ಹೆಣ್ಮಕ್ಕಳಿದ್ದಾರೆ. ಮೊದಲನೇಯವಳು ಶಬಾನಾ.ಮೂಕಿ. ಸಲೀನಾ,ಸದಿಯಾ ಇನ್ನಿಬ್ಬರು ಮಕ್ಕಳು. ಜೀವನ ಸಾಗಿಸೋಕೆ ಕತ್ತೆಗಳಿವೆ. ಕತ್ತೆಗಳ ಮೇಲೆ ಸಾಮಗ್ರಿಗಳನ್ನ ಹೊತ್ತು ತರೋದು. ತಂದು ಗುಡ್ಡುಗಾಡು ಹಳ್ಳಿಯಲ್ಲಿರೋ ಜನಕ್ಕೆ ಕೋಡೋದು. ಅದರ ಬದಲಾಗಿ ಅವರು ಕೊಟ್ಟ ಮಸಾಲೆ ಪದಾರ್ಥಗಳನ್ನ ಸಿಟಿಗೆ ತೆಗೆದುಕೊಂಡು ಹೋಗಿ ಮಾರೋದು. ಅದರಿಂದ ಬಂದ ದುಡ್ಡಿನಿಂದ ಜೀವನ ಸಾಗಿಸೋದು.

ಬುಡನ್ ಸಾಬ್ ಇರೋದೆ ಹೀಗೆ.ಯಾವುದೇ ನಿರೀಕ್ಷೆಯಿಲ್ಲ. ಇನ್ನಾವುದೇ ಜಿಹಾದಿ ಕೆಚ್ಚು ಇಲ್ಲ. ಎಲ್ಲ ಧರ್ಮಿಯರೊಂದಿಗೆ ಬೆರೆಯೋದೆ ಬುಡೆನ್ ಸಾಬ್ ಕ್ಯಾರೆಕ್ಟರ್. ಕಷ್ಟಪಟ್ಟು ಮೊದಲ ಮಗಳೂ ಶಬಾನಾ ಮತ್ತು ಎರಡನೇ ಮಗಳ ಮದುವೆ ಮಾಡ್ತಾನೇ ಬುಡೆನ್ ಸಾಬ್. ಮದುವೆ ನಂತರ ಒಂದು ಘಟನೆ ನಡೆದು ಹೋಗುತ್ತದೆ. ಅದು ಮೊದಲ ಮಗಳ ಗಂಡನ ವಿಚಾರದಲ್ಲಿಯೇ. ಅದುವೇ ಚಿತ್ರದ ಕ್ಲೈಮ್ಯಾಕ್ಸ್ ಕೂಡ. ಸುಳಿ ಎಂದು ಚಿತ್ರಕ್ಕೆ ಇಟ್ಟ ಹೆಸರಿಗೆ ಅರ್ಥ ಸಿಗೋದು ಅಲ್ಲಿಯೇ. ಅದೇನೂ ಅಂತ ಹೇಳೋದಿಲ್ಲ. ತೆರೆ ಮೇಲೆನೆ ನೀವೇ ಎಕ್ಸಪಿರಿಯನ್ಸ್ ಮಾಡಿ.

ಸುಳಿ ಚಿತ್ರದಲ್ಲಿ ಶ್ರೀನಾಥ್ ವೊಬ್ಬರೇ ವೆಲ್​ ನೋನ್ ಕಲಾವಿದರು. ಇತರ ಪಾತ್ರಗಳನ್ನ ಹೊಸಬರೇ ನಿರ್ವಹಿಸಿದ್ದಾರೆ. ರಂಗಭೂಮಿ ನಂಟಿರೋರೇ ಆ ಪಾತ್ರಳಿಗೆ ಜೀವ ತುಂಬಿದ್ದಾರೆ. ಹಾಗಾಗಿಯೇ ಸುಳಿ ಚಿತ್ರ ಹೊಸ ತನದೊಂದಿಗೆ ನಮ್ಮತನವನ್ನೂ ಕಟ್ಟಿಕೊಡುತ್ತದೆ. ಅದ್ಭುತ ಕತೆ ಹೊಂದಿರೋ ಈ ಚಿತ್ರಕ್ಕೆ ಆರ್.ಮಂಜುನಾಥ್ ಅವರ ಕ್ಯಾಮೆರಾ ವರ್ಕ್ ತುಂಬಾ ಚೆನ್ನಾಗಿದೆ. ಚನ್ನಕೇಶವ ನಾ. ದಾಮೋದರಶೆಟ್ಟಿ ಅವರ ಸಂಭಾಷಣೆ ಶುದ್ಧ ಕನ್ನಡದಿಂದ ಕೂಡಿದೆ. ಮುಸ್ಲಿಂ ಫ್ಯಾಮಿಲಿಯ ಕಥೆ ಇದ್ದಾಗಿದ್ದರೂ, ಕನ್ನಡ ಮಾತನಾಡುತ್ತವೇ ಪಾತ್ರಗಳು. ಅಲಲ್ಲಿ ಉರ್ದು ಪದಗಳು ಬರೋದು ಪಾತ್ರಗಳ ನೇಚರ್.

ಸುಳಿ ಚಿತ್ರವನ್ನ ಶ್ರೀನಾಥ್ ತಮ್ಮ ಬ್ಯಾನರ್ ನಲ್ಲಿಯೇ ನಿರ್ಮಿಸಿದ್ದಾರೆ. ಪತ್ನಿ ಗೀತಾ ಶ್ರೀನಾಥ್ ನಿರ್ಮಾಪಕಿ. ಶ್ರೀನಾಥ್ ಸ್ನೇಹಿತರಾದ ಟಿ.ಎಸ್.ಸತ್ಯನಾರಾಯಣ ಚಿತ್ರ ನಿರ್ಮಾಣಕ್ಕೆ ಕೈಜೋಡಿಸಿದ್ದಾರೆ. ಸುಳಿಯಲ್ಲಿ ಸುಮಾರು ವಿಚಾರಗಳು ವ್ಯಕ್ತವಾಗಿವೆ. ಗಂಭೀರ ಸಂಗತಿಯೂ ಮನವರಿಕೆ ಆಗುತ್ತದೆ. ಸುಳಿ ಚಿತ್ರದ ಕಥೆಯಲ್ಲಿ ಗಟ್ಟಿತನ ಇದೆ. ಚೆಂದದ ಅನುಭವವೂ ಆಗುತ್ತದೆ. ಶ್ರೀನಾಥ್ ಅವರ ಈ ಪ್ರಯೋಗ ಎಲ್ಲರಿಗೂ ಇಷ್ಟವಾಗುತ್ತದೆ. ಗುಡ್ ಲಕ್ ಶ್ರೀನಾಥ್ ಸರ್.
-ರೇವನ್ ಪಿ.ಜೇವೂರ್​

Comments