ಭಾರ್ಗವೀ ಸ್ತುತಿ

ಭಾರ್ಗವೀ ಸ್ತುತಿ

ಚಿತ್ರ

ರಕ್ಕಸರ ಹಗೆ ಹರಿಯ ಆ ಸೊಬಗಿನೆದೆಯಲ್ಲಿ
ಕರಿಮೋಡದಲಿ ಹೊಳೆವ ಸುಳಿಮಿಂಚಿನಂತೆ
ಮೆರೆವ ತಾಯೇ ಸಕಲ ಲೋಕದಲಿ ನೀ ಮಾನ್ಯೆ
ಒಳ್ಳಿತನು ತೋರೆನಗೆ ಭಾರ್ಗವನ ಕುವರಿ
 
ಸಂಸ್ಕೃತ ಮೂಲ: (ಆದಿಶಂಕರರ ಕನಕಧಾರಾ ಸ್ತೋತ್ರದಿಂದ)
 
कालाम्बुदालिललितोरसिकैटभारेः
धाराधरे स्फुरति या तटिदङ्गनेव ।
मातुः समस्तजगतां महनीयमूर्तिः
भद्राणि मे दिशतु भार्गवनंदनायाः ॥
 
ಕಾಲಾಂಬುದಾಲಿಲಲಿತೋರಸಿಕೈಟಭಾರೇಃ
ಧಾರಾಧರೇಸ್ಫುರತಿಯಾತಟಿದಂಗನೇವ |
ಮಾತುಃ ಸಮಸ್ತಜಗತಾಂ ಮಹನೀಯಮೂರ್ತಿಃ
ಭದ್ರಾಣಿಮೇ ದಿಶತು ಭಾರ್ಗವನಂದನಾಯಾಃ ||
 
-ಹಂಸಾನಂದಿ
 
ಕೊ:  ಕೆಲವು ವರ್ಷಗಳಿಂದಲೂ ಆದಿ ಶಂಕರರ ಹುಟ್ಟಿದದಿನ - ಶಂಕರ ಜಯಂತಿ, ವೈಶಾಖ ಶುದ್ಧ ಪಂಚಮಿಯಂದು, ಶಂಕರರ ಯಾವುದಾದರೂ ಪದ್ಯವನ್ನು ಅನುವಾದಿಸುವ ಪ್ರಯತ್ನ ಮಾಡಿದ್ದೇನೆ. ಹಾಗಾಗಿ, ಅದೇ ಸಾಲಿನಲ್ಲಿ ಇವತ್ತಿಗೂ ಒಂದು ಅನುವಾದ.
 
ಕೊ.ಕೊ: ಮೂಲ ಪದ್ಯವು ಶಂಕರರ ಪ್ರಸಿದ್ಧವಾದ ಕನಕಧಾರಾ ಸ್ತೋತ್ರದಲ್ಲಿದೆ. ಇದೇ ಸ್ತೋತ್ರದ ಇನ್ನು ಕೆಲವು ಪದ್ಯಗಳು ನಾನು ಅನುವಾದಿಸಿರುವುದನ್ನು ಇಲ್ಲಿ ಚಿಟಕಿಸಿ ಓದಬಹುದು.
 
ಕೊ.ಕೊ.ಕೊ: ಮೂಲವು ವಸಂತತಿಲಕ ವೃತ್ತದಲ್ಲಿದೆ. ಅನುವಾದವು ಚೌಪದಿಯಲ್ಲಿದೆ, ಆದರೆ ಪ್ರಾಸವನ್ನು ಪಾಲಿಸಿಲ್ಲ.
 
ಚಿತ್ರ: ೧೧ನೇ/೧೨ನೇ ಶತಮಾನದ ವಿಷ್ಣು ಮತ್ತು ಲಕ್ಷ್ಮಿ ವಿಗ್ರಹ.  ಈ ವಿಗ್ರಹದ ಬಗ್ಗೆ ಹೆಚ್ಚಿನ ಮಾಹಿತಿ ಕೆಳಗಿನ ಕೊಂಡಿಗಳಲ್ಲಿವೆ.
 
http://www.thehindu.com/…/us-returns-ido…/article5577461.ece
 
http://www.rediff.com/…/slide-show-1-signs-of…/20140115.htm…)

Rating
No votes yet