ತಿಥಿ ಹಿಂದಿನ ಕಥೀ !

ತಿಥಿ ಹಿಂದಿನ ಕಥೀ !

ತಿಥಿ ಹಿಂದಿನ ಕಥೀ !ಮೇಕಿಂಗ್ ಆಫ್​ ತಿಥಿ.ನೊದೆಕೊಪ್ಲು ಗ್ರಾಮದ ಉತ್ಸಾಹ.ಸಿಂಕ್ ಸೌಂಡ್​ನ ಚಮತ್ಕಾರ್.ರಾಮ್​-ಈರೇಗೌಡರ ಶ್ರಮ. ಕನ್ನಡಕ್ಕೆ ಸಿಕ್ಕಿದೆ ಅದ್ಭುತ ತಿಥಿ.ಪ್ರೇಕ್ಷಕರಿಗೆ ಅದ್ಭುತ ತಿಥಿಊಟ.ಬೆಂಗಳೂರಲ್ಲಿ ಓಡ್ತಿದೆ ಹೌಸ್ ಫುಲ್.ತಿಥಿ ಚಿತ್ರದ ಮೇಕಿಂಗ್ ಮಸ್ತಿ !
------
ಕನ್ನಡಿಗರ ಬಾಯಿಯಲ್ಲಿ ಈಗ ತಿಥಿ ಚಿತ್ರದ ಕಥೀ ಕೇಳ್ತಿದೆ. ಎಲ್ಲೆ ಹೋಗಲಿ. ಇನ್ನೇಲ್ಲಿ ಇರಲಿ. ಸಿನಿಮಾ ವಿಷ್ಯ ಬಂದ್ರೆ, ತಿಥಿ ಸಖತ್ ಆಗಿದೆ. ತಿಥಿ ಸೂಪರ್ ಸಿನಿಮಾ. ಒಮ್ಮೆ ಟ್ರೈ ಮಾಡಿ ಅನ್ನೋರೆ. ಅಷ್ಟು ಪ್ರಭಾವ ಬೀರಿರೋ ತಿಥಿ ಚಿತ್ರದ ಹಿಂದಿನ ಕಥೀನು ಸೂಪರ್ ಆಗಿದೆ. ಬನ್ನಿ ನೋಡೋಣ. ಓದೋಣ.

ಕನ್ನಡ ತಿಥಿ. ಹೆಮ್ಮೆ ಹಿಂದಲೇ ಹೇಳಬೇಕು. ರಿಮೇಕು ಅಲ್ಲ. ಸ್ವಮೇಕು ಅಲ್ಲ. ನೈಜತೇನೆ ಇಲ್ಲಿ ನೀಟಾಗಿ ದೃಶ್ಯ ರೂಪ ಪಡೆದಿದೆ. ಸಿಂಕ್ ಸೌಂಡ್ ಚಿತ್ರದ ಶಕ್ತಿ. ನೈಜ ಸಂಭಾಷಣೆನೇ ಜೀವಾಳ. ಎಲ್ಲೂ ನಾಟಕೀಯತೆ ಇಲ್ಲ. ಪಾತ್ರಗಳು ಇಲ್ಲಿ ಅಭಿನಯಿಸಿಲ್ಲ. ಬಿಹೇವ್ ಮಾಡಿವೆ.

ತಿಥಿ ಚಿತ್ರಕ್ಕೆ ಪ್ರಶಸ್ತ್ರಿಗಳ ಸುರಿಮೆಳೆ ಆಗಿದೆ.ರಾಷ್ಟ್ರೀಯ ಪ್ರಶಸ್ತಿನೂ ದಕ್ಕಿದೆ. ಮೊನ್ನೆ ಮೇ-6 ಕ್ಕೆ ತೆರೆಗೆ ಬಂದಾಗ, ಜನ ಕೂಡ ಸ್ವೀಕರಿಸಿದ್ದಾರೆ. ಹೌಸ್​ ಫುಲ್ ಆಗಿ ಚಿತ್ರ ಓಡ್ತಿದೆ.ಆದರೆ, ಈಗ ನಾವು ಹೇಳೋಕೆ ಹೊರಟ್ಟಿರೋದು ತಿಥಿ ಹಿಂದಿನ ಕಥೀ. ಇಲ್ಲಿರೋ ಫೋಟೋಗಳು ಆ ಸತ್ಯ ತೆರೆದಿಡುತ್ತೆ. ನೋಡಿ.

ತಿಥಿ ರಾಮ್ ರೆಡ್ಡಿ ನಿರ್ದೇಶನದ ಚಿತ್ರ.  ಚಿತ್ರಕಥೆ-ಸಂಭಾಷಣೆ. ಇವು ರಾಮ್ ಗೆಳೆಯ ಈರೇಗೌಡರದ್ದು.ಆದರೆ, ಅವರ ಕನಸನ್ನ ಸಾಕಾರಗೊಳಿಸಿರೋದು ನೊದೆಕೊಪ್ಲು ಊರಿನ ಸಾಮಾನ್ಯ ಜನ. ಅವರ ಬದುಕಿನ ಉತ್ಸಾಹ ಮೇಕಿಂಗ್ ನಲ್ಲಿ ನೀವು ಕಂಡಿದ್ದೀರಿ. ಇನ್ನೊಂದಿಷ್ಟು ಫೋಟೋಗಳಿವೆ.ನೋಡಿ ಬಿಡಿ. ಮುಂದೆ ಬೇರೆ ವಿಚಾರ ಇದೆ.ಹೇಳ್ತಿವೆ.

ಕನ್ನಡಿಗರ ತಿಥಿ ಚಿತ್ರ ಪ್ರಾಮಾಣಿಕವಾಗಿದೆ. ನೈಜವಾಗಿಯೂ ಬಂದಿದೆ. ಅದನ್ನ ಸೆರೆ ಹಿಡಿದ ಕ್ಯಾಮೆರಾಮನ್ ಕೆಲಸ ನಿಜಕ್ಕೂ ಪ್ರಶಂಸನೀಯ.ಕನ್ನಡಿಗರ ಕಥೆಯನ್ನ ಕನ್ನಡಿಗರಿಗೆ ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಆದರೆ, ಈ ಜಾಣ ನಮ್ಮವರಲ್ಲ. ದೂರದ ಹಾಲೆಂಡ್​ ನವ್ರು. ಬನ್ನಿ, ಅವರನ್ನೂ ಮೀಟ್ ಮಾಡಿಸುತ್ತವೆ. ಈಗಲೇ.

ತಿಥಿ ಚಿತ್ರ ತುಂಬಾ ಆಪ್ತ ಅನಿಸುತ್ತದೆ. ಅದೇ ಊರಲ್ಲಿದ್ದೇವೇನೋ ಅನ್ನೊ ಭಾವ ಮೂಡಿ ಬಿಡುತ್ತದೆ.. ಹಾಗೆ ಅನಿಸಲು ಸೌಂಡ್ ಕಾರಣ. ಅದು ಬರಲೇಬೇಕು ಅಂತ ಮೂರು ತಿಂಗಳ ಕಾಲ ಚಿತ್ರದ ಈರೇಗೌಡರು ಮತ್ತು ನಿಕಿಲ್ ಶ್ರಮಿಸಿದ್ದಾರೆ. ಆಯಾ ಜಾಗಕ್ಕೇನೆ ಹೋಗಿ, ಸೌಂಡ್ ಗಳನ್ನ  ಕ್ಯಾಪ್ಚರ್ ಮಾಡಿದ್ದಾರೆ. ಸೌಂಡ್ ಡಿಸೈನರ್ ನಿತಿನ್ ಲುಕ್ಕೂಸ್ (Nithin Lukose) ಅವುಗಳನ್ನ ಅದ್ಭುತವಾಗಿ ಡಿಸೈನ್ ಮಾಡಿದ್ದಾರೆ. ಅದುವೇ ನಿಮ್ಮನ್ನ ಚಿತ್ರ ನೋಡುವಾಗ ಮತ್ತಷ್ಟು ಇನ್ನಷ್ಟು ಆಪ್ತವಾಗಿಸುತ್ತದೆ.

ತಿಥಿ ಚಿತ್ರದ ಕ್ಯಾಮೆರಾ ವರ್ಕ್ ಸೂಪರ್ ಆಗಿದೆ. ಚಿತ್ರದ ಕ್ಯಾಮೆರಾ ಹಿಂದಿನ ಆ ಕಲಾಕಾರ್  ಹೆಸರು ಡೋರಾನ್ ಟೆಂಪರ್ಟ್ (Doron Tempert) ಹಾಲೆಂಡ್ ನವ್ರು. ತಿಥಿ ಕಥೆ ಬರೆಯೋವಾಗಲೇ ತಂಡ ಸೇರಿಕೊಂಡೋರು. ಊರು ಗೊತ್ತಿಲ್ಲ. ಸಂಸ್ಕೃತಿ ಗೊತ್ತಿಲ್ಲ. ಕರ್ನಾಟಕಕ್ಕೆ ಕಾಲಿಟ್ಟಿದ್ದಾರೆ. ಮಂಡ್ಯ ಜಿಲ್ಲೆಯ  ನೊದೊಕೊಪ್ಲುಗೂ ಬಂದಿದ್ದಾರೆ. ಅಲ್ಲಿ ಡೋರಾನ್ ಟೆಂಪರ್ಟ್  ಗೆ ಆದ ಅನುಭವ ಸೂಪರ್.
ಮಂಡ್ಯದ ತಿಂಡಿ. ಮಂಡ್ಯದ ಊಟ. ಮಂಡ್ಯ ಭಾಷೆ ಹಿಡಿಸಿದೆ.ಜನ ಅಲ್ಲಿ ತೋರಿದ ಪ್ರೀತಿನೂ ಮೆಮೆರೇಬಲ್. ಅದರ ನಡುವೆನೇ, ಡೋರಾನ್ ಕನ್ನಡದ ಒಂದಷ್ಟು ಪದಗಳನ್ನೂ ಕಲೆತಿದ್ದಾರೆ. ಅವುಗಳನ್ನ ಅಲ್ಲಿರೋವಾಗಲೇ ಪ್ರಯೋಗವನ್ನೂ ಮಾಡಿದ್ದಾರೆ. ಅವು ಹಿಂಗಿವೆ.
-ಊಟ ಆಯ್ತಾ
-ಹೋಗೋ
-ಇಲ್ಲಿ ಬಾ
- ಸ್ವಲ್ಪ ಈಕಡೆ-ಸ್ವಲ್ಪ ಆ ಕಡೆ

ತಿಥಿ ಚಿತ್ರದ ಬ್ಯಾಂಡ್ ಮ್ಯೂಸಿಕ್ ನಿಜಕ್ಕೂ ಸೂಪರ್. ಇಡೀ ಚಿತ್ರದಲ್ಲಿ ಇದು ಬೇರೆ ಫ್ಲೆವರ್ ನ್ನೇ ಕೊಡುತ್ತದೆ. ಚಿತ್ರದ ಈರೇಗೌಡರು ಅಲ್ಲಿಯ ಬ್ಯಾಂಡ್​ ಗೆ ಡೈರೆಕ್ಷನ್ ಕೊಟ್ಟು ಟ್ಯೂನ್ ಕ್ಯಾಪ್ಚರ್ ಮಾಡಿದ್ದಾರೆ.ಅದು ಈಗ ತಿಥಿ ಚಿತ್ರದ ಸಿಗ್ನೇಚರ್ ಟ್ಯೂನ್ ಆಗಿದೆ. ಪ್ರತಿ ಸಲ ಕೇಳಿದಾಗಲೂ ಖುಷಿ ಹೊರಹೊಮ್ಮುತ್ತದೆ.
ತಿಥಿ ನಮಗೆ ಈ ವಿಶೇಷತೆಗಳಿಗೇನೆ ಇಷ್ಟವಾಗುತ್ತದೆ. ತನ್ನ ಅದ್ಭುತ ಭಾವಗಳನ್ನ ನಮಲ್ಲೂ ಉಳಿಸಿ ಬಿಡುತ್ತವೆ. ಅದು ತಿಥಿ ಚಿತ್ರಕ್ಕಿರೋ ಶಕ್ತಿ.
-ರೇವನ್ ಪಿ.ಜೇವೂರ್
 

Comments

Submitted by Geeta G. Hegde Thu, 05/26/2016 - 14:57

ಜೇವೂರವರೆ "ತಿಥಿ" ವಿವರಣೆ ಓದಿ ಖುಷಿಯಾಯಿತು಼. ಎಲ್ಲಿ ನೋಡಿದ್ರೂ ತಿಥಿದೆ ಕಥೆ. ಯಾಕೆ ಅಂತ ಗೊತ್ತಾಯಿತು. Thanks.