ಸಲ್ಮಾನ್ ದಿ ಪೈಲ್ವಾನ್​...!

ಸಲ್ಮಾನ್ ದಿ ಪೈಲ್ವಾನ್​...!

ಸಲ್ಮಾನ್ ದಿ ಪೈಲ್ವಾನ್. ಹರಿಯಾಣ ಸುಲ್ತಾನ. ತೆರೆ ಮೇಲೆ. ಸುಲ್ತಾನ್ ಒಬ್ಬ ಪೈಲ್ವಾನ್. ನಿಜ ಜೀವನದಲ್ಲಿ ಹಲವರಿದ್ದಾರೆ. ತೆರೆ ಮೇಲೆ ಆತನನ್ನ  ಅಭಿನಯಿಸಿದ್ದು ಸಲ್ಮಾನ್. ಒಬ್ಬ ಪೈಲ್ವಾನ ಜೀವನ ಅಷ್ಟು ಸರಳವಲ್ಲ. ಅಕಾಡದಲ್ಲಿದ್ದಾಗ ಸುತ್ತಲೂ ಜನ ಕೂಗುತ್ತಾರೆ. ಹುರಿದುಂಬಿಸುತ್ತಾರೆ. ಹಾಕೋ ಪಟ್ಟುಗಳು ಕಂಡು ಖುಷಿ ಪಡುತ್ತಾರೆ.

ಆದರೆ, ಅದೇ ಪಟ್ಟುಗಳು ಹುಚ್ಚು ಹಿಡಿಸುತ್ತವೆ. ನಿಜ ಜೀವನದಲ್ಲಿ. ಜೀವನ ಹಾಕೋ ಪಟ್ಟುಗಳಿಗೆ ಅದೆಂತಹದ್ದೇ ಪೈಲ್ವಾನ್ ಇದ್ದರೂ ಸರಿ. ಚಿತ್ ಆಗೋದೇ.ಇದು ಸತ್ಯ ಕೂಡ. ನಮ್ಮಲ್ಲಿಯೇ ಇರೋ ಅನೇಕ ಪೈಲ್ವಾನರು ಈಗ ಹೆಸರು ಮಾತ್ರ. ಅವರು ಅಭ್ಯಾಸ ಮಾಡಿದ ಗರಡಿ ಮನೆಗಳೂ ಈಗ ನಶಿಸಿ ಹೋಗಿವೆ. ಅಲ್ಲಿ-ಇಲ್ಲಿ ಕೆಲವು ಇವೆ.

ಸುಲ್ತಾನ್ ಚಿತ್ರದ ಟ್ರೈಲರ್ ಅಂತಹ ಪೈಲ್ವಾರನ್ನ ನೆನಪಿಸುತ್ತದೆ. ದುರಂತ ಕಂಡ ಪೈಲ್ವಾನರು, ನಿಜ ಜೀವನದಲ್ಲಿ ಚಿತ್ ಆದ ಕಥೆ ಹೇಳ್ತಿದೆ.ಹರಿಯಾಣದಲ್ಲಿ ಸುಲ್ತಾನ್ ಎಂಬ ಪೈಲ್ವಾನ್ ಇದ್ದ. ಆತ ಓಲಂಪಿಕ್ಸ್ ನಲ್ಲಿ ಗೋಲ್ಡ್ ಮೆಡಲೂ ಗೆದ್ದವ. ಅದೇ ಖುಷಿಯಲ್ಲಿಯೇ ಬೀಗಿದ್ದು ಆಯ್ತು. ಹೀಗೆ ಕಥೆ ಇರುತ್ತದೆ. ಆದರೆ, ಸುಲ್ತಾನ್ ಪಾತ್ರ ನಿಜ ಜೀವನದಲ್ಲಿ ಇಲ್ಲವೇ ಇಲ್ಲ. ಇದು ಕಾಲ್ಪನಿಕ ಪಾತ್ರ ಎಂಬೋದು ನಿರ್ದೇಶಕರ Ali ಅಲಿ ಅಬ್ಬಾಸ್ ಝಫರ್​ (Abbas Zafar)ಸ್ಪಷ್ಪ ಅಂಬೋಣ.ಆ ಪಾತ್ರಕ್ಕೆ ಜೋಡಿ ಬೇಕಲ್ಲವೇ. ಆರ್ಫಾ ಹೆಸರಿನ ಹರಿಯಾಣದ ಲೇಡಿ ಕುಸ್ತಿಪಟುವನ್ನ ಜೋಡಿ ಮಾಡಲಾಗಿದೆ. ಡಾಕ್ಟರ್ ಗೆ ಡಾಕ್ಟರ್ ಮೇಲೆ ಲವ್ ಆಗುತ್ತದೆ. ಪೈಲ್ವಾನ್​ ಗೆ ಕುಸ್ತಿ ಆಡೋ ಹುಡುಗಿನೇ ಜೋಡಿಯಾಗ್ತಾಳೆ. ಅನ್ನೋದು ಇಲ್ಲಿಯ ಇಂಟ್ರಸ್ಟಿಂಗ್ ವಿಚಾರ. ದುರಂತದ ಮುನ್ಸೂಚನೆಯನ್ನ ಸುಲ್ತಾನ್​ ಗೆ ನೀಡೋದು ಅದೇ ಪೈಲ್ವಾನ್ ಹುಡುಗಿನೇ.

ಸುಲ್ತಾನ್ ಚಿತ್ರದಲ್ಲಿ ಒಂದು ನೋವು ಇದೆ. 40 ವಯಸ್ಸು ದಾಟಿದ ಪೈಲ್ವಾನ್ ಏನೂ ಮಾಡಲು ಆಗೋದಿಲ್ಲ. ಆತನ ಕಥೆ ಅಲ್ಲಿಗೆ ಮುಗಿತು ಅನ್ನೋದು ಒಂದು ಹಂತ. ಇನ್ನೊಂದು ಹಂತ ಅದೇ ಪೈಲ್ವಾನ್, ಫಿನಿಂಕ್ಸ್​ ಥರ ಎದ್ದು ಬಂದು ರಿಂಗ್ ನಲ್ಲಿ ಹೊಡೆದಾಡೋದು ಸ್ಫೂರ್ತಿದಾಯಕ ಕಥೆ. ಎರಡೂ  ಅಂಶಗಳು ಸದ್ಯ ಟ್ರೈಲರ್​ ನಲ್ಲಿವೆ. ನೋಡಿ. ನಿಮಗೂ ನಿಮ್ಮ ಊರಿನ, ನಿಮ್ಮೊಳಗಿನ ಪೈಲ್ವಾನ್ ನೆನಪಿಗೆ ಬರ್ತಾನೆ. ನೀವೂ ಪೈಲ್ವಾನ ಆಗೋಕೆ ಹೊರಟ್ಟಿದ್ದರೆ. ಎಚ್ಚರಿಕೆಯ ಗಂಟೆಯನ್ನೂ ಕೊಡ್ತಾನೆ.
-ರೇವನ್ ಪಿ.ಜೇವೂರ್