' ಶಿವ ಅಶಿವ '
ಶಿವ ಶುಭದ ಸಂಕೇತ
ಆಶಿವ ಅಶುಭದ ಸಂಕೇತ
ಸೌಂದರ್ಯ ಮತ್ತು
ಕಲಾ ಸಂಬಂಧ
ಶಿವದೊಡನೆ ಮಾತ್ರ
ಒಂದನ್ನು ಶಿವ ಎಂದು
ಭಾವಿಸಿದರೆ
ಅದರ ವೈರುಧ್ಯ ಆಶಿವ
ಒಂದು ವಸ್ತು ಮತ್ತು
ಘಟನೆಗಳು ಕೇವಲ
ಶಿವ ಅಶಿವಗಳಾಗುವುದಿಲ್ಲ
ಪರೀಕ್ಷೆಗೆ ಯಾವುದೇ
ಮಾನದಂಡಗಳಿರುವುದಿಲ್ಲ
ಒಂದು ವಸ್ತು
ಕೆಲವರಿಗೆ ಶಿವವಾದರೆ
ಕೆಲವರಿಗೆ ಅದು ಅಶಿವ
ಶಿವದ ಪ್ರಬೇಧಗಳು ಮೂರು
ವಿಶ್ವಾಸಶಿವ ಆನಂದಶಿವ
ಸಾಧನಾಶಿವ ಕಲೆ
ಶಿವ ಅಶಿವ ಎರಡೂ ಹೌದು
ಅವು ಕಲೆಯಂಬ ನಾಣ್ಯದ
ಎರಡು ಮುಖಗಳು
*
Rating
Comments
ಉ: ' ಶಿವ ಅಶಿವ '
ಶಿವಪ್ರಭೇದದ ಬಗ್ಗೆ ಇರುವ ಮೂರನೆಯ ಪಾದದ ಅರ್ಥ ಪೂರ್ಣವಾಗಿ ಆಗಲಿಲ್ಲ
ವಂದನೆಗಳು
ಪಾರ್ಥಸಾರಥಿ
ಉ: ' ಶಿವ ಅಶಿವ '
ಶಿವಪ್ರಭೇದದ ಬಗ್ಗೆ ಇರುವ ಮೂರನೆಯ ಪಾದದ ಅರ್ಥ ಪೂರ್ಣವಾಗಿ ಆಗಲಿಲ್ಲ
ವಂದನೆಗಳು
ಪಾರ್ಥಸಾರಥಿ
ಉ: ' ಶಿವ ಅಶಿವ '
ಪಾರ್ಥ ಸಾರಥಿಯವರಿಗೆ ವಂದನೆಗಳು
ಈ ಕವನದ ಕುರಿತು ತಾವು ಬರೆದ ಪ್ರತಿಕ್ರಿಯೆ ಓದಿದೆ, ಶಿವ ಒಂದು ಕ್ರಿಯೆ ಮತ್ತು ಚಟುವಟಿಕೆಯ ಸಂಕೇತ ಆ ಕ್ರಿಯೆ ಯಶಸ್ಸುಪಡೆಯಲು ಆ ಕ್ರಿಯೆಯಲ್ಲಿ ತೊಡಗಿ ಕೊಳ್ಳುವವರ ವಿಶ್ವಾಸ ಅದರಿಂದ ದೊರೆಯುವ ಆನಂದ ನಾವು ತಲುಪ ಬಹುದಾದಸಾಧನಾ ಮಟ್ಟಗಳು ಮುಖ್ಯ ಎನ್ನುವುದು ಒಂದಾದರೆ ಕಲೆ ಎನ್ನುವುದು ಕ್ರಿಯೆಯ ಭೌತಿಕ ರೂಪ ಈ ಕಲೆ ಎನ್ನುವುದು ಮೂರ್ತ ಮತ್ತು ಅಮೂರ್ತ ಎರಡೂ ಪರಿಕಲ್ಪನೆಯಲ್ಲಿ ಸಾಧ್ಯ ಎನ್ನುವುದು ನನ್ನ ಗ್ರಹಿಕೆ ಹೀಗಾಿ ಕಲೆ ಶಿವ ಮತ್ತು ಅಶೀವ ಎರಡೂ ಹೌದು ಕಾರಣ ಅವರಡೂ ಕಲೆ ಎಂಬ ನಾಣ್ಯದ ಎರಡು ಮುಖಗಳು ಎಂದು ಬರೆದೆ, ಪ್ರತಿಕ್ರಿಯೆಗೆ ಧನ್ಯವಾದಗಳು.