ಸಾಧನಾ ಸೋಪಾನಗಳು - ಪುಸ್ತಕದ ಲೋಕಾರ್ಪಣೆ




ಹಾಸನದ ವೇದಭಾರತೀ ಕಳೆದ 6 ವರ್ಷಗಳಿಂದ ಸಮಾಜಮುಖಿ ಕಾರ್ಯಗಳನ್ನು, ವೇದದ ವಿಚಾರಗಳ ಪ್ರಚಾರ, ಪ್ರಸಾರ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ವಾರ್ಷಿಕೋತ್ಸವದ ನಿಮಿತ್ತ ಪತಂಜಲಿ ಯೋಗ ಸಮಿತಿ, ವಿಶ್ವಹಿಂದೂ ಪರಿಷತ್ ಸಂಯುಕ್ತ ಆಶ್ರಯದೊಂದಿಗೆ ಈಗ ನಡೆಯುತ್ತಿರುವ ಕಾರ್ಯಕ್ರಮಗಳ ವಿವರ ಹೀಗಿದೆ:
ಸ್ಥಳ: ಪಿಡಬ್ಲ್ಯುಡಿ ಕಾಲೋನಿ ರಾಮಮಂದಿರೆದ ಸಮುದಾಯ ಭವನ, ಹಾಸನ.
ಬೊಜ್ಜು ನಿವಾರಣೆಗಾಗಿ ಯೋಗ ಶಿಬಿರಗಳು - 21 ರಿಂದ 28.8.2016ರವರೆಗೆ
ರಕ್ತದ ಒತ್ತಡ ಮತ್ತು ಮಧುಮೇಹದ ನಿಯಂತ್ರಣಕ್ಕಾಗಿ ಯೋಗ ಶಿಬಿರಗಳು: 21 ರಿಂದ 28.8.2016ರವರೆಗೆ
ಪ.ಪೂ. ಶ್ರೀ ಚಿದ್ರೂಪಾನಂದ ಸರಸ್ವತಿಯವರಿಂದ ಗೀತಾ ಜ್ಞಾನ ಯಜ್ಞ - 23 ರಿಂದ 28.8. 2016ರವರೆಗೆ
ಸಾಮೂಹಿಕ ಅಗ್ನಿಹೋತ್ರ - 28.8.2016 ಬೆ. 10.00ಕ್ಕೆ
ಇದೇ ಸಂದರ್ಭದಲ್ಲಿ ನನ್ನ "ಸಾಧನಾ ಸೋಪಾನಗಳು" ಪುಸ್ತಕದ ಲೋಕಾರ್ಪಣೆಯೂ ನಡೆಯಲಿದೆ.
ಎಲ್ಲರಿಗೂ ಅಕ್ಕರೆಯ, ಾದರದ ಸ್ವಾಗತ.
-ಕ.ವೆಂ.ನಾಗರಾಜ್.