ಕಾವೇರಿ ಹಾಗು ಕರ್ನಾಟಕ

ಕಾವೇರಿ ಹಾಗು ಕರ್ನಾಟಕ

 ಕಾವೇರಿ ಹಾಗು ಕರ್ನಾಟಕ
ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ. 
ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ ನಡುವೆ ಸೌಹಾರ್ದಯುತವಾಗಿ ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಯೊಂದಕ್ಕೆ ರಸ್ತೆಯಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮತ್ತೊಮ್ಮೆ ನಡೆಯಲಿದೆ. ...

ಆದರೆ ಇಂತಹ ಪರಿಸ್ಥಿತಿಗೆ ಯಾರು ಕಾರಣರು, ಈಗಿನ ಆಳುವ ಸರ್ಕಾರವೆ ? , ನ್ಯಾಯಾಲಯಗಳೆ ? ವಾದಮಂಡಿಸಲಾರದ ಕರ್ನಾಟಕದ ವಕೀಲರೆ ?
ಮೊದಲಿನಿಂದಲೂ ಇದೇ ನಡೆದು ಬಂದಿದೆ, 
ಕರ್ನಾಟಕದಲ್ಲಿ ಯಾವುದೆ ಸರ್ಕಾರವಿರಲಿ, ತನ್ನ ಪರವಾದ ವಾದವನ್ನು ಕೋರ್‍ಟಿನಲ್ಲಿ ಮಂಡಿಸಲು ಸೋಲುತ್ತಿದೆ, ನಾರಿಮನ್ ಎನ್ನುವ ವಕೀಲರ ಹೆಸರು ಹೇಳಬಹುದು, ಆದರೆ ಅವರು ಕರ್ನಾಟಕ ಸರ್ಕಾರದ ಪರವಾಗಿ ವಾದಿಸುವರು ಅಷ್ಟೆ, ಹಾಗಾಗಿ ನೇರ ಹೊಣೆ ಸರ್ಕಾರವೆ ಆಗಿರುತ್ತದೆ. ಆದರೆ ಸರ್ಕಾರ ತನ್ನ ಸೋಲನ್ನು ಮುಚ್ಚಿಡಲು , ಪ್ರಜೆಗಳ ಭಾವನೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ.
ಮುಖ್ಯಮಂತ್ರಿಗಳೆ ಹೇಳುವ ಹಾಗೆ ಸುಪ್ರೀಂಕೋರ್ಟ್ ನೀಡುವ ತೀರ್ಪನ್ನು ಗೌರವಿಸುವುದು ಸರ್ಕಾರಕ್ಕೆ ಅನಿವಾರ್ಯ, ಹಾಗಿದ್ದಲ್ಲಿ ಎಲ್ಲ ಪಕ್ಷಗಳು ಪ್ರಜೆಗಳನ್ನು ಏಕೆ ದಾರಿ ತಪ್ಪಿಸುತ್ತಿವೆ ? 
ರಕ್ತ ಕೊಟ್ಟರು ಸರಿ ನೀರು ಕೊಡುವದಿಲ್ಲ ಎನ್ನುವ ಭಾವನಾತ್ಮಕವಾದ ಹೇಳಿಕೆಯನ್ನು ಎಲ್ಲ ಪಕ್ಷಗಳ ಸರ್ಕಾರವು ಕೊಟ್ಟು ಪ್ರಜೆಗಳನ್ನು ಹುಚ್ಚೆಬ್ಬಿಸುತ್ತವೆ ದಾರಿ ತಪ್ಪಿಸುತ್ತಿವೆ ಅಲ್ಲವೆ? 
ಕಾಂಗ್ರೆಸ್ ಆಳುತ್ತಿದ್ದರೆ, ಕೋರ್ಟು ತೀರ್ಪನ್ನು ಬಿಜೆಪಿ ಹಾಗು ಜೇಡಿಎಸ್ ವಿರೋದಿಸುತ್ತವೆ, 
ಬಿಜಿಪಿ ಸರ್ಕಾರವಿದ್ದರೆ ಕಾಂಗ್ರೆಸ್ ಕೋರ್ಟು ತೀರ್ಪನ್ನು , ಸರ್ಕಾರದ ನಿಷ್ರ್ಕಿಯತೆ ವಿರೋದಿಸಿ ದರಣಿ ನಡೆಸುತ್ತಿತ್ತು, 
ಹಾಗೆ ಜೆಡಿಎಸ್ ಸರ್ಕಾರವಿದ್ದರೆ ಬಿಜೆಪಿ ಬಂದ್ ಆಚರಿಸುತ್ತ ಇತ್ತು. 
ತಮಾಷಿಯ ವಿಷಯವೆಂದರೆ ಮೂರು ಸರ್ಕಾರವಿದ್ದಾಗಲು ಕರ್ನಾಟಕದ ಪರವಾಗಿ ವಾದಿಸುವರು ಅದೇ ವಕೀಲರು ಎನ್ನುವ ಸತ್ಯ. 
ಮೂರು ಪಕ್ಷಗಳು ಜನರ ಭಾವನಾತ್ಮಕ ನಿಲುವನ್ನು, ಹಾಗು ಜನ ಶಕ್ತಿಯನ್ನು ದುರುಪಯೋಗ ಪಡಿಸುತ್ತಿದ್ದವು ಎನ್ನುವ ಸತ್ಯ.
ಕಾವೇರಿ ಒಂದೆ ಅಲ್ಲ ಯಾವುದೆ ವಿಷಯವಾಗಲಿ ನಾವು ಹೊಸ ದಿಕ್ಕಿನಿಂದ ಚಿಂತಿಸುವ ಕಾಲ ಬಂದಿದೆ, ಅಗತ್ಯ ಕಾಣಿಸುತ್ತಿದೆ, 
ನಾವು ಪ್ರಜೆಗಳಿಗೆ ಹತ್ತಿರವಾದ ಮತ್ತೊಂದು ವ್ಯವಸ್ಥೆಯನ್ನು ಕಂಡು ಹಿಡಿಯಬೇಕಾಗಿದೆ, ಈಗಿರುವ ಪ್ರಜಾಪ್ರಭುತ್ವ ಖಂಡಿತಕ್ಕು ಪ್ರಜೆಗಳಿಗಾಗಿ ಅಲ್ಲವೆ ಅಲ್ಲ

 

Rating
No votes yet