ಕಾವೇರಿ ... ಕಾವೇರಿ .... ಕಾವೇರಿ ..
ಕಾವೇರಿ ... ಕಾವೇರಿ .... ಕಾವೇರಿ ..
ಕರ್ನಾಟಕದಲ್ಲಿ ಕಾವೇರಿಯ ಗಲಾಟೆ ಮತ್ತೊಮ್ಮೆ ತಾರಕಕ್ಕೇರಿದೆ.
ನಾಡಿದ್ದು, ಸೆಪ್ಟೆಂಬರ್ ೯ ರಂದು ಕರ್ನಾಟಕ ಮತ್ತೊಮ್ಮೆ ಬಂದ್ ಆಚರಿಸಲಿದೆ.
ನ್ಯಾಯಯಲಗಳಲ್ಲಿ, ವಿಧಾನಸೌದದಲ್ಲಿ, ಎರಡು ಸರ್ಕಾರಗಳ ನಡುವೆ ಸೌಹಾರ್ದಯುತವಾಗಿ ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಬೇಕಾದ ಸಮಸ್ಯೆಯೊಂದಕ್ಕೆ ರಸ್ತೆಯಲ್ಲಿ ಪರಿಹಾರ ಹುಡುಕುವ ಪ್ರಯತ್ನ ಮತ್ತೊಮ್ಮೆ ನಡೆಯಲಿದೆ.
ನಾಳಿನ ಕರ್ನಾಟಕ ಬಂದ್, ಯಾವ ಪುರುಷಾರ್ಥಕ್ಕಾಗಿ ಯಾರು ಅರಿಯರು.
ಬೆಂಗಳೂರಿನ ರಸ್ತೆಗಳಲ್ಲಿ ನಡೆಯುವ ಈ ಪ್ರತಿಭಟನೆಯನ್ನು ಸುಪ್ರೀಂಕೋರ್ಟು ಗಮನಕ್ಕೆ ತಂದುಕೊಳ್ಳುವದಿಲ್ಲ .
ದಾಖಲೆ ಮತ್ತು ನ್ಯಾಯವಾದಿಗಳ ವಾದ ಅಷ್ಟೆ ಗಮನಿಸುತ್ತವೆ,
ಬೆಂಗಳೂರಿನ ರಸ್ತೆಯಲ್ಲಿ ನಡೆಯುವ ಈ ಪ್ರತಿಭಟನೆಯನ್ನು ಕೇಂದ್ರ ಸರ್ಕಾರ ಸಹ ಗಮನಕ್ಕೆ ತಂದುಕೊಳ್ಳುವದಿಲ್ಲ,
ಎರಡು ರಾಜ್ಯಗಳ ನಡುವಿನ ವ್ಯವಹಾರ ಎಂದು ತೀರ್ಮಾನಿಸುತ್ತದೆ.
ಬೆಂಗಳೂರಿನ ರಸ್ತೆಯಲ್ಲಿ ನಡೆಯುವ ಈ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ಸರ್ಕಾರ ಸಹ ಗಮನಕ್ಕೆ ತಂದುಕೊಳ್ಳುವದಿಲ್ಲ,
ಸುಪ್ರೀಂಕೋರ್ಟು ತೀರ್ಪಿನ ಪ್ರಕಾರ ನಡೆಯುವುದು ಅನಿವಾರ್ಯ ಎಂದು ಆಗಲೆ ಮುಖ್ಯಮಂತ್ರಿಗಳು ಸ್ವಷ್ಟ ಪಡಿಸಿದ್ದಾರೆ.
ಬೆಂಗಳೂರಿನ ರಸ್ತೆಯಲ್ಲಿ ನಡೆಯುವ ಈ ಪ್ರತಿಭಟನೆಯನ್ನು ಕರ್ನಾಟಕ ವಿರೋಧ ಪಕ್ಷ ಸಹ ಗಮನಕ್ಕೆ ತಂದುಕೊಳ್ಳುವದಿಲ್ಲ ,
ಅವಕ್ಕೆ ಇದು ಆಳುವ ಸರ್ಕಾರವನ್ನು ಇಕ್ಕಟ್ಟಿಗೆ ಸಿಕ್ಕಿಸುವ ಒಂದು ಸಣ್ಣ ಅವಕಾಶ.
ಬೆಂಗಳೂರಿನ ರಸ್ತೆಯಲ್ಲಿ ನಡೆಯುವ ಈ ಪ್ರತಿಭಟನೆಯನ್ನು ಕರ್ನಾಟಕ ಜನಸಾಮಾನ್ಯರು ಸಹ ಗಮನಕ್ಕೆ ತಂದುಕೊಳ್ಳುವದಿಲ್ಲ ,
ಅವರಿಗೆ ಇದು ಸರ್ಕಾರದ ರಾಜಕೀಯ ಪಕ್ಷಗಳ ಸಮಸ್ಯೆ ಮೇಲಾಗಿ ಅವರಿಗೆ ಏನು ಮಾಡಲಾಗದ ಅಸಹಾಯಕತೆ.
ಆದರು ನಾಡಿದ್ದು ಕರ್ನಾಟಕದಲ್ಲಿ ಈ ಬಂದ್ ನಡೆದೇ ನಡೆಯುತ್ತದೆ.
ಏಕೆಂದರೆ ಅದು ಹಾಗೆ,
ಏಕೆಂದರೆ ಇಲ್ಲಿ ಹಾಗೆ.