ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೩

ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೩

ಹೆಚ್ಚಿತು ತೀರ್ಥದ ತೀರ್ಥತ್ವ
ಶ್ರೀಕ್ಷೇತ್ರಗೋಕರ್ಣಕ್ಕೆ ಚಿತ್ತೈಸಿದ ಶ್ರೀಶಂಕರರು ಸಾರ್ವಭೌಮನ ಸನ್ನಿಧಿಗೆ ಬಂದರು. ಅಂದು ರಾವಣನಿಗೆ ಭಕ್ತಿಪರವಶನಾಗಿ ತನ್ನ ಆತ್ಮದ ಕುರುಹಾದ ಆತ್ಮಲಿಂಗವನ್ನು ಕರುಣಿಸಿದ್ದ ಪರಶಿವ ಇಂದು ಈ ರೂಪದಲ್ಲಿ ನಿಂತಿದ್ದ ಆತ್ಮಲಿಂಗದೆದುರು. ಅಂತರಂಗವನ್ನು ಬಹಿರಂಗದಲ್ಲೂ ಕಾಣುತ್ತಿದ್ದ. ಆದರೆ ಶಿವರೂಪದಲ್ಲಿ ಅಲ್ಲ, ಯತಿರೂಪದಲ್ಲಿ. ಒಳಗೆ ಶಿವನೇ ಆಗಿ, ಹೊರಗೆ ಶಂಕರರಾಗಿ ಆ ಮಹಾಬಲನನ್ನು ಅರ್ಚಿಸಿದರು.
ಗೋಕರ್ಣದ ವಿವಿಧ ದೇವತಾಸಾನ್ನಿಧ್ಯಗಳಿಗೆ ನಮಿಸಿದರು. ಕೋಟಿತೀರ್ಥದ ದಿವ್ಯಪರಿಸರಕ್ಕೆ ಬಂದರು.
"ಕೋಟಿತೀರ್ಥ". ಹೆಸರೇ ಸೂಚಿಸುವಂತೆ ತೀರ್ಥಕೋಟಿಗಳ ಸಮಾಗಮ. ಕೋಟಿಯೆಂದರೆ ಒಂದು ಕೋಟಿಯೆಂದಲ್ಲ. ಅಸಂಖ್ಯ ಎಂದರ್ಥ.
ಒಂದು ತೀರ್ಥವೇ ಸಾಕು ಜನ್ಮಪಾವನಕ್ಕೆ, ಮೈಮನಗಳ ದೋಷ ಕಳೆಯಲಿಕ್ಕೆ. ಹಾಗಿರುವಾಗ ಕೋಟಿತೀರ್ಥದ ಮಹಿಮೆ ಇನ್ನದೆಷ್ಟಿರಬಹುದು? ಮಹಿಮೆ ದೊಡ್ಡದೇ. ಶ್ರೀಶಂಕರರು ಅಲ್ಲಿಗೆ ಬಂದಿದ್ದೇ ಆ ಮಹಿಮೆಗೆ ಸಾಕ್ಷಿ. ಕೋಟಿತೀರ್ಥದ ಮಹತಿ ಹೆಚ್ಚಾಯಿತು ಇನ್ನಷ್ಟು, ಮತ್ತಷ್ಟು. ಯಾಕೆ? ಯಾಕೆಂದರೆ ಸಂತಸ್ಪರ್ಶವಾಯಿತಲ್ಲ. 'ತೀರ್ಥೀಕುರ್ವಂತಿ ತೀರ್ಥಾನಿ' - ತೀರ್ಥಗಳನ್ನೂ ಪವಿತ್ರಗೊಳಿಸುತ್ತಾರೆ ಮಹಾತ್ಮರು.  ತೀರ್ಥ ಸುತೀರ್ಥವಾಯಿತು, ಶ್ರೀಶಂಕರರ ನೋಟದಿಂದ, ಸ್ಪರ್ಶದಿಂದ, ಭಾವದಿಂದ.
{ಮುಂದಿನ ಹೆಜ್ಜೆ
ನಾಳೆಯ ಓದು...}
ಜಗದೀಶಶರ್ಮಾ ಸಂಪ
www.srisamsthana.org