ಸುಡೊಕು - ಒಂದು ಹೊಸ ಸೂತ್ರ ?
ಚಿತ್ರ
ಸುಡೊಕು -ಅಂಕಿಗಳ ಆಟ ನಿಮಗೆಲ್ಲ ಗೊತ್ತೇ ಇರಬೇಕು. ಈ ಆಟದ ನಿಯಮಗಳನ್ನು ವಿವರಿಸುವ ಅಗತ್ಯವಿಲ್ಲ ಅಲ್ಲವೇ ? ನಿಮಗೆ ಗೊತ್ತಿಲ್ಲವಾದರೆ , ಈ ಆಟದ ಬಗ್ಗೆ ಆಸಕ್ತಿ ಇದ್ದರೆ , ಒಂದು ಕಮೆಂಟ್ ಹಾಕಿ.
(ಅಂದ ಹಾಗೆ ಕನ್ನಡದಲ್ಲಿ , ಪುಸ್ತಕಗಳಲ್ಲಿ ಆಗಲೀ , ಅಂತರ್ಜಾಲ ದಲ್ಲಾಗಲೀ , ಏನಾದರೂ ಮಾಹಿತಿ ಇದೆಯೇ ? ಇಲ್ಲವಾದಲ್ಲಿ ಇಲ್ಲೇ ಒಂದು ಸರಣಿ ಶುರು ಹಚ್ಕೊಂಡರೆ ಹೇಗೆ ? )
ಇಲ್ಲಿ ನಾನು ಹಾಕಿರುವ ಚಿತ್ರವನ್ನು ನೋಡಿ. ಇದು ಇತ್ತೀಚಿನ times of india ದಿಂದ ತೆಗೆದುಕೊಂಡದ್ದು.
ಇಲ್ಲಿ A ಮತ್ತು B ಎಂದು ಗುರುತಿಸಿದ ಮನೆಗಳಲ್ಲಿ ಯಾವ ಅಂಕಿಗಳು ಬರುತ್ತವೆ ಎಂದು , ಬೇರೆ ಯಾವ ಅಂಕಿಗಳ ಗೊಡವೆಗೆ ಹೋಗದೇ ,ಹೇಳಬಹುದೇ ?
ನಾನು ತಕ್ಕ ಮಟ್ಟಿಗೆ ಅಂತರ್ಜಾಲದಲ್ಲಿ ಸುಡೊಕು ಬಿಡಿಸಲು ಸೂತ್ರಗಳ ಬಗ್ಗೆ ಹುಡುಕಾಟ ನಡೆಸಿದ್ದೇನಾದರೂ ಇಲ್ಲಿ ಹೇಳಿದಂತಹ ಸಂದರ್ಭ ಗಳಲ್ಲಿ ಬಳಕೆ ಮಾಡಬಹುದಾದ
ಸೂತ್ರವೊಂದು ನನಗೆ ತೋಚಿದ್ದು ಅದು ಎಲ್ಲಿಯೂ ಕಂಡು ಬಂದಿಲ್ಲ. ..
ಅದನ್ನು ತಿಳಿಯಲು ಒಂದೆರಡು ದಿನ ಕಾಯಿರಿ.
Rating