ಸುಡೊಕು - ಒಂದು ಹೊಸ ಸೂತ್ರ!
ಮೊನ್ನೆ ಸುಡೊಕು ಕುರಿತು ಒಂದು ಬ್ಲಾಗ್ ಬರೆದಿದ್ದೆ. ( ಈ ಕೊಂಡಿ ನೋಡಿ )
ಸುಡೊಕು ಬಿಡಿಸಲು ಅನೇಕ ವೇಳೆ ನೆರವಾಗುವ ಒಂದು ಸೂತ್ರ ನನಗೆ ಹೊಳೆದಿದ್ದು ಅದನ್ನು ಇಲ್ಲಿ ವಿವರಿಸುತ್ತಿದ್ದೇನೆ.
ಮೊದಲು ಸುಡೊಕು ಬಗೆಗೆ ಒಂಚೂರು ವಿವರಣೆ.
ಸುಡೊಕು ನಿಮ್ಮ ತರ್ಕ ಶಕ್ತಿಯನ್ನು ಒರೆಗೆ ಹಚ್ಚುವ ಒಂದು ಸಮಸ್ಯೆ. ಸಾಮಾನ್ಯವಾಗಿ ಅದರಲ್ಲಿ ಅಂಕಿಗಳನ್ನು ಬಳಸುತ್ತಾರೆ.
ಸಾಮಾನ್ಯವಾಗಿ 9×9 ಮನೆಗಳು ಅದರಲ್ಲಿ ಇರುತ್ತವೆ. ಅಂದರೆ 9 ಅಡ್ಡಸಾಲು , 9 ಉದ್ದಸಾಲು. 3×3 ಮನೆಗಳ 9 ಅಂಕಣಗಳು.
(ಚಿತ್ರ -1 ನೋಡಿ )
ಇವುಗಳಲ್ಲಿ ಪ್ರತಿಯೊಂದರಲ್ಲೂ , ಅಂದರೆ ಪ್ರತಿ ಅಡ್ಡಸಾಲಿನಲ್ಲೂ , ಪ್ರತಿ ಉದ್ದಸಾಲಿನಲ್ಲೂ , ಪ್ರತಿ ಅಂಕಣದಲ್ಲೂ , 1 ರಿಂದ 9 ರವರೆಗಿನ ಎಲ್ಲಾ ಅಂಕಿಗಳು ಒಂದು ಬಾರಿ ಮತ್ತು ಒಂದೇ ಬಾರಿ ಬರಬೇಕು. ಕೆಲವು ಅಂಕಿಗಳನ್ನು ಆಗಲೇ ಕೊಟ್ಟಿರುತ್ತಾರೆ. ಕೊಡದೆ ಇರುವ ಅಂಕಿಗಳನ್ನು ನಾವು ಕಂಡು ಹಿಡಿಯಬೇಕು.
ಈಗ ನಾನು ಕಂಡು ಹಿಡಿದಿದ್ದೇನೆ ಎಂದು ಕೊಂಡಿರುವ ಸೂತ್ರವನ್ನು ತಿಳಿಸುತ್ತೇನೆ. ಇದು ಈಗಾಗಲೇ ಎಲ್ಲಾದರೂ ನಿಮಗೆ ಕಂಡಿದ್ದರೆ ದಯವಿಟ್ಟು ತಿಳಿಸಿ.
ಈಗ ಚಿತ್ರ-2 ಅನ್ನು ನೋಡಿ. ಅದರಲ್ಲಿ ಮೊದಲ ಭಾಗವನ್ನು ಗಮನಿಸಿ.
ಇಲ್ಲಿ ಹಳದಿ ಮತ್ತು ಕಂದು ಬಣ್ಣದ ಭಾಗ ಸೇರಿದರೆ ಒಂದು ಅಂಕಣ ; ಇಲ್ಲಿ ಹಸಿರು ಮತ್ತು ಕಂದು ಬಣ್ಣದ ಭಾಗ ಸೇರಿದರೆ ಒಂದು ಅಡ್ಡಸಾಲು . ಅಲ್ಲವೇ ?
ನಾನು ಹೇಳಬಯಸುವ ಸೂತ್ರ ಏನೆಂದರೆ
ಇಂಥಲ್ಲಿ ಹಳದಿ ಮತ್ತು ಹಸಿರು ಮನೆಗಳಲ್ಲಿ ಬರುವ ಅಂಕಿಗಳು ಅವೇ ಆಗಿರುತ್ತವೆ.
ಅದೇಕೆ ?
ಕಂದು ಬಣ್ಣದ ಮನೆಗಳು ಈಗ ನಮ್ಮ ಗಮನದಲ್ಲಿರುವ ಅಂಕಣದಲ್ಲೂ , ಅಡ್ಡ ಸಾಲಿನಲ್ಲೂ ಇರುವದರಿಂದ
ಎರಡರಲ್ಲೂ ಬರಬೇಕಾದ ಎಲ್ಲ 9 ಅಂಕಿಗಳ ಎರಡು ಗುಂಪುಗಳಿಂದಲೂ ಅವನ್ನು ಬಿಟ್ಟು ಬಿಡಬಹುದು.
ಈಗ ಹಳದಿ ಮತ್ತು ಹಸಿರು ಮನೆಗಳಲ್ಲಿ 6 ಬೇರೆ ಬೇರೆ ಅಂಕಿಗಳು ಬಂದಿದ್ದರೆ ಹಳದಿ ಮನೆಗಳಲ್ಲಿ ಇಲ್ಲದ ಅಂಕಿಗಳು ಹಸಿರು ಮನೆಗಳಲ್ಲಿ ಸಿಗುತ್ತವೆ ಮತ್ತು ಹಸಿರು ಮನೆಗಳಲ್ಲಿ ಇಲ್ಲದ ಅಂಕಿಗಳು ಹಳದಿ ಮನೆಗಳಲ್ಲಿ ಸಿಗುತ್ತವೆ .
ಈಗ ಮೊನ್ನೆ ಕೊಟ್ಟ ಸಮಸ್ಯೆ ನೋಡಿ . ಚಿತ್ರ -4 ಅನ್ನೂ ನೋಡಿ. ನಿಮಗೆ ತಿಳಿಯುತ್ತದೆ .A ಮನೆಯಲ್ಲಿ 1 ಮತ್ತು B ಮನೆಯಲ್ಲಿ 9 ಬರುವದೆಂದು!
ಇದನ್ನು ತಿಳಿದು ಕೊಂಡಾಗ ಖಾಲಿ ಮನೆಗಳಲ್ಲಿ ಬರಬೇಕಾದ ಅಂಕಿಗಳನ್ನು ನಿರ್ಧರಿಸಲು ಸಹಾಯವಾಗುತ್ತದೆ.
ಇಂತಹ ಸಾಧ್ಯತೆ ಗಳನ್ನು ಎಲ್ಲೆಲ್ಲಿ ಪರಿಶೀಲಿಸಬೇಕೆಂದು ತಿಳಿಯಲು ಚಿತ್ರ 2 ಮತ್ತು 3 ನೋಡಿ.