ಶ್ರೀ ರಾಮಚಂದ್ರಾಪುರ ಮಠ ಸುವರ್ಣ ಇತಿಹಾಸ - ಹೆಜ್ಜೆ ೯
ಬಂದ ತಪೋರಾಮ
ವರದಮುನಿಗಳು ಶಂಕರರಿಗೆ ಹೀಗೆಂದರು- 'ಧರೆಗಿಳಿದ ಶಂಕರನೇ ತಾವು. ದುರ್ಮತಗಳ ಖಂಡನೆ ಮತ್ತು ಸನ್ಮತಗಳ ಉದ್ಧರಣ ನಿಮ್ಮ ಅವತಾರದ ಉದ್ದೇಶ. ಅದಕ್ಕೆ ಬದ್ಧದೀಕ್ಷಿತರಾದವರು ತಾವು. ವೇದವನ್ನು ಉಳಿಸಬಂದವರು; ಅಗ್ನಿಹೋತ್ರಗಳನ್ನು ಬೆಳೆಸಬಂದವರು.
ಕಲಿಯ ಪ್ರಭಾವ ಹೆಚ್ಚಾಗುತ್ತಿದೆ. ಆ ತಾಪ ನನ್ನನ್ನೂ ಸ್ಪರ್ಶಿಸೀತು. ಹಾಗಾಗಿ ಹಿಮಾಲಯಕ್ಕೆ ತೆರಳುವ ಮನಸ್ಸು ಮಾಡಿದ್ದೇನೆ. ಆದರೆ ನನಲ್ಲಿ ವಿಶಿಷ್ಟವಾದ ದೇವತಾಮೂರ್ತಿಗಳಿವೆ. ತಪೋರಾಮ, ಸೀತಾದೇವೀ ಮತ್ತು ಲಕ್ಷ್ಮಣನ ವಿಗ್ರಹಗಳು ಇವು. ಅಮಿತಮಹಿಮೆಯ ಸಾನ್ನಿಧ್ಯಗಳಿವು. ಇವುಗಳನ್ನು ನನ್ನ ಗುರುಗಳಾದ ಅಗಸ್ತ್ಯರು ಪೂಜಿಸುತ್ತಿದ್ದರು. ಈ ಮೂರ್ತಿಗಳ ಉಪಾಸನೆಯನ್ನು ಮುಂದುವರಿಸುವಂತೆ ಆದೇಶಿಸಿ, ನನಗೆ ಅನುಗ್ರಹಿಸಿದ್ದರು. ದಿವ್ಯಾಭರಣಗಳಿಂದ ಭೂಷಿತವಾದ ಈ ದಿವ್ಯವಿಗ್ರಹಗಳನ್ನು ನಿಮಗೆ ನೀಡುತ್ತೇನೆ ನಾನು.'
ಹೀಗೆಂದ ವರದಮುನಿಗಳು ಆ ಮೂರ್ತಿಗಳನ್ನು ಶ್ರೀಶಂಕರರಿಗೆ ನೀಡಿದರು. ಅವರು ನೀಡಿದ ಮೂರ್ತಿ ಅತ್ಯಂತ ಮನೋಹರವಾದದ್ದು. ತಪೋಮುದ್ರೆಯಲ್ಲಿದ್ದಾನೆ ಶ್ರೀರಾಮನಲ್ಲಿ. ವೀರಾಸನದಲ್ಲಿ ಆಸೀನನಾಗಿದ್ದಾನೆ. ಮುಖದಲ್ಲಿ ಮಂದಹಾಸ. ಕೈಯಲ್ಲಿ ಚಿನ್ಮುದ್ರೆ. ಅವನ ಬಲಭಾಗದಲ್ಲಿ ನಿಂತಿದ್ದಾನೆ ಲಕ್ಷ್ಮಣ. ಎಡಭಾಗದಲ್ಲಿ ಸೀತಾಮಾತೆಯ ಸಾನ್ನಿಧ್ಯವಿದೆ. ವರದಹಸ್ತಳಾಗಿ ಕುಳಿತಿದ್ದಾಳೆ ಜನಕತನಯೆ.
{ಮುಂದಿನ ಹೆಜ್ಜೆ
ನಾಳೆಯ ಓದು...}
ವಿದ್ವಾನ್ ಜಗದೀಶಶರ್ಮಾ ಸಂಪ
ಹಿಂದಿನ ಹೆಜ್ಜೆಗಳಿಗಾಗಿ:
www.srisamsthana.org