ಲೈಫ್ ಚುಟುಕಗಳು - ೨ - ಮೆಡಿಕಲ್ ಸೀಟು
ಪ್ರತಿಷ್ಟಿತ ಇಂಜಿನೀಯರಿಂಗ್ ಕಾಲೇಜೊಂದರ ಪ್ರಾಂಶುಪಾಲರಾದ ಗೆಳೆಯರೊಬ್ಬರು ತಮ್ಮ ಮಗಳಿಗೆ ಮೆಡಿಕಲ್ ಸೀಟು ಕೊಡಿಸಲೆಂದು ಆ ದಿನ ಊರಿಗೆ ಬಂದಿದ್ದರು. ಅವರು ಲೆಕ್ಕಕ್ಕೆ ಗೆಳೆಯರ ಬಳಗದಲ್ಲಿ ಎಲ್ಲರಿಗೂ “ಮೇಷ್ಟ್ರು”.
ಸಂಜೆ ಕಾಫಿಗೆ ಸಿಕ್ಕಾಗ ಮೇಷ್ಟ್ರು ತುಂಬಾ ಆಲೋಚನೆಯಲ್ಲಿ ಮುಳುಗಿದ್ದರು. ಜೊತೆಗೇ ಇದ್ದ ಇಂಜಿನೀಯರ್ ಸಾಹೇಬ್ರು, "ಏನ್ ಮೇಷ್ಟ್ರೇ, ಸಿಕ್ತಾ ಸೀಟು?" ಎಂದು ಇವರಿಗೆ ಕೇಳಿದರು.
"ಹೂಂ, ಸೀಟು ಸಿಗ್ತು. ಮಾಮೂಲಿಗಿಂತ ತುಂಬಾ ಜಾಸ್ತಿ ಕೊಡ್ಬೇಕಾಯ್ತು" ಎಂದರು.
“ಮತ್ತೇನು ಪ್ರಾಬ್ಲಂ? ಸೀಟಾಯ್ತಲ್ಲ.”
“ಸೀಟಾಯ್ತು. ಈಗ ನಾನೂ ಜಾಸ್ತಿ ತಗೋಬೇಕು. ಎಲ್ಲೆಲ್ಲಿಂದಾ ತೆಗೆಯೋದೂಂತ ಯೋಚ್ನೆ ಮಾಡ್ತಿದ್ದೆ” ಅಂದರು.
Comments
ಉ: ಲೈಫ್ ಚುಟುಕಗಳು - ೨ - ಮೆಡಿಕಲ್ ಸೀಟು
ನಿಜ ಸರ್, ಇದಕ್ಕೇ ಹೇಳೋದು, ಒಂದು ಗುಂಡಿ ತೆಗೆದು ಇನ್ನೊಂದು ಗುಂಡಿ ಮುಚ್ಚೋದು ಅಂತ!!
ಉ: ಲೈಫ್ ಚುಟುಕಗಳು - ೨ - ಮೆಡಿಕಲ್ ಸೀಟು
ಇದರದ್ದೇ ಇನ್ನೊಂದು ಕೊನೆ (ಎಂಡಿಂಗ್) ...
“ಸೀಟಾಯ್ತು. ಇನ್ನು ಪಾಸ್ ಮಾಡ್ಸೋದಕ್ಕೆ ಎಲ್ಲಿಂದ ಕೊಡೋದು ಅಂತ ಯೋಚನೆ” ಅಂದರು. :-)