ನಗೆ ಹನಿಗಳು ( ಹೊಸವು ? )

ನಗೆ ಹನಿಗಳು ( ಹೊಸವು ? )

(ನೀವು ಈಗಾಗಲೇ ಇವನ್ನು ಕೇಳಿದ್ದರೆ ತಪ್ಪದೆ ತಿಳಿಸಿ )
- ೧ -
-ನಾನು ಲಂಡನ್ ನಲ್ಲಿ ಇದ್ದ ಸಮಯದ ಮಾತು.......
-ಓಹ್ ! ಸಮಯ ಅಂದ ಕೂಡಲೆ ನೆನಪಾಯಿತು , ನೋಡಿ , ತುಂಬಾ ಸಮಯ ಆಗಿದೆ , ನಾನು ಬರ್ತೀನಿ,ಸಿಗೋಣ ಮತ್ತೆ .
- ೨ -
-ನಿನ್ನನ್ನು ನೋಡಿದಾಗಲೆಲ್ಲ ನನಗೆ ಅವನ ನೆನಪಾಗತ್ತೆ
- ಯಾಕೆ? ನಾನು ಅವನ ಹಾಗೆ ಇಲ್ವಲ್ಲ?
- ಇದೀಯ, ನೀನೂ ಅವನ ಹಾಗೆ ನನಗೆ 100 ರೂಪಾಯಿ ಕೊಡ ಬೇಕಿದೆ
- ೩-
- ಅವನು ತನ್ನ ಆಸ್ತಿ ಕಳೆದುಕೊಂಡಾಗಿನಿಂದ ಅವನ ಗೆಳೆಯರಲ್ಲಿ ಅರ್ಧ ಜನ ಅವನನ್ನು ಮರೆತೇಬಿಟ್ಟಿದ್ದಾರೆ!
- ಉಳಿದವರಾದರೂ ಅವನನ್ನ ಕೈ ಬಿಟ್ಟಿಲ್ಲವಲ್ಲ?
- ಅವರಿಗೆ ಅವನು ಆಸ್ತಿ ಕಳಕೊಂಡಿದ್ದು ಗೊತ್ತಿಲ್ಲವಲ್ಲ?
- ೪-
- ನಾವು ಈ ನಾಯಿ ಸಾಕಿದಾಗಿನಿಂದ ಮನೆ ಹತ್ರ ಯಾರೇ ಅವರಿಚಿತರು ಬಂದ್ರೂ ನಮಗೆ ಕೂಡಲೇ ಗೊತ್ತಾಗುತ್ತದೆ.
-ಹೌದಾ, ಇದು ಬೊಗಳುತ್ತಾ ಅವರ ಮೇಲೆ ಏರಿ ಹೋಗುತ್ತಾ ?
- ಇಲ್ರೀ, ಇದು ಆವಾಗ ನಮ್ ಸೋಫಾ ಕೆಳಗೆ ಅಡಗಿ ಕೂಡತ್ತೆ.

Rating
No votes yet

Comments