ನಗೆಹನಿಗಳು ( ಹೊಸವು ? ) -ಐದನೇ ಕಂತು

ನಗೆಹನಿಗಳು ( ಹೊಸವು ? ) -ಐದನೇ ಕಂತು

- ೧೭-

- ನಿನ್ನನ್ನು ಬಿಟ್ಟು ನಿಮ್ಮ ಓಣಿಯಲ್ಲಿ ಎಷ್ಟು ಜನ ಮುಠ್ಠಾಳರಿದ್ದಾರಯ್ಯ ?
- ಆಂ ? ಏನಂದೆ ? 'ನನ್ನನ್ನು ಬಿಟ್ಟು' ಅಂದ್ಯಾ ?
- ಸರಿ, ಸರಿ. 'ನಿನ್ನನ್ನು ಸೇರಿಸಿ' ಎಷ್ಟು ಜನ ಮುಠ್ಠಾಳರಿದ್ದಾರೆ?

- ೧೮-

ಚಿತ್ರಕಾರ - ಇದು ನಾನು ಬರೆದ ಹೊಸ ಚಿತ್ರ -"ಕೆಲಸ ಮಾಡುತ್ತಿರುವ ಕೆಲಸಗಾರರು"
ಗೆಳೆಯ- ಏನಿದು? ಯಾರೂ ಕೆಲಸ ಮಾಡುವ ಹಾಗೆ ಕಾಣುತ್ತಿಲ್ಲ ?
ಚಿತ್ರಕಾರ- ಹೌದು , ಇದು ವಾಸ್ತವ ಚಿತ್ರಣ.

- ೧೯-

ವಿಮರ್ಶಕ , ಕಲಾವಿದನಿಗೆ- ನಿನ್ನ ಈ ಪೇಂಟಿಂಗ್ ನೋಡಿದಾಗಲೆಲ್ಲ ಅದರ ಮುಂದೆ ನಿಂತು ಬಹಳ ವಿಚಾರ ಮಾಡುತ್ತೇನೆ. ……
- ಏನಂತ ? ನಾನು ಅದನ್ನು ಹೇಗೆ ಚಿತ್ರಿಸಿದೆ ಅಂತಲೇ ?
- ಅಲ್ಲ, ಯಾಕೆ ಚಿತ್ರಿಸಿದೆ ಅಂತ!

- ೨೦ -

- ಅವನು ನನಗೆ ಏನಂದ ಗೊತ್ತಾ ?
- ಹೋಗಲಿ ಬಿಡೋ , ಅವನಿಗೆ ಸ್ವಂತ ಬುದ್ಧಿಯಿಲ್ಲ; ಎಲ್ರೂ ಹೇಳೋದನ್ನೇ ಅವನೂ ಹೇಳ್ತಾನೆ.

Rating
No votes yet