ನಗೆಹನಿಗಳು ( ಹೊಸವು ?) - ಏಳನೇ ಕಂತು

ನಗೆಹನಿಗಳು ( ಹೊಸವು ?) - ಏಳನೇ ಕಂತು

-25-
- ಆ ಗಾಯಕ ಹಾಡಿದ್ದು ಬಹು ಜನಪ್ರಿಯ ಹಾಡಾ ?
- ಅದು ಜನಪ್ರಿಯ ಹಾಡು ಆಗಿತ್ತು , ಇವನು ಹಾಡುವ ಮೊದಲು!

-26-
ಮನೆಗೆ ಅತಿಥಿಯಾಗಿ ಬಂದ ಗಾಯಕ - ನಿಮಗಾಗಿ ಏನು ಹಾಡಲಿ ?
ಮನೆಯಾತ - ಏನಾದರೂ ಸರಿ , ಅಕ್ಕಪಕ್ಕದವರಿಗೆ ಕಿರಿಕಿರಿ ಆಗುವಂಥದ್ದು.

-27-
ಕವಿ ಹೆಂಡತಿಗೆ - ನಾನು ಇಲ್ಲಿ ಬರೆದಿಟ್ಟ ಕವನ ಎಲ್ಲಿ ಹೋಯಿತೇ , ಮಗು ಏನಾದರೂ ಹರಿದು ಹಾಕಿತೇ , ಎಲ್ಲೋ ಬಿಸಾಕಿತೇ , ಇಲ್ಲ . ಬೆಂಕಿಗೆ ಹಾಕಿತೇ ?
ಹೆಂಡತಿ -ರೀ , ಮೂರ್ಖರ ಹಾಗೆ ಮಾತಾಡಬೇಡಿ. ಮಗೂಗೆ ಎಲ್ಲಿ ಓದೋಕೆ ಬರುತ್ತದೆ?

-28-
-ಲಂಡನ್ ನಲ್ಲಿ ಪ್ರತಿ ಅರ್ಧ ಗಂಟೆಗೊಮ್ಮೆ ಒಂದು ವಾಹನ ಒಬ್ಬ ವ್ಯಕ್ತಿಯ ಮೇಲೆ ಹರಿದು ಹೋಗುತ್ತದಂತೆ .
- ಯಾರವನು ? ಅಯ್ಯೋ ಪಾಪ !ಅವನ ಗತಿ ಏನಾಗಬೇಡ?

Rating
No votes yet