ನಗೆಹನಿಗಳು ( ಹೊಸವು ?) - ಹದಿನಾರನೇ ಕಂತು

ನಗೆಹನಿಗಳು ( ಹೊಸವು ?) - ಹದಿನಾರನೇ ಕಂತು

-61-

- "ಗಂಡಸು , ಮನೆಯ ಯಜಮಾನ" ಪುಸ್ತಕ ನಿಮ್ಮಲ್ಲಿದೆಯೇ ?
-ಕತೆಪುಸ್ತಕಗಳ ವಿಭಾಗದಲ್ಲಿ ನೋಡಿ, ಸರ್

-62-

-ನಿನ್ನ ಗಂಡ ಸುರೇಶ ದಿನಾ ಮನೆಗೆ ತಡಮಾಡಿ ಬರ್ತಿದ್ನಲ್ಲ , ಅದನ್ನು ಹೇಗೆ ತಪ್ಪಿಸಿದೆ ?
-ಅವನು ತಡಮಾಡಿ ಮನೆಗೆ ಬಂದು ಬಾಗಿಲು ಬಡಿದಾಗಲೆಲ್ಲ "ಯಾರು? ರಮೇಶನಾ?" ಅಂತ ಕೇಳುವುದಕ್ಕೆ ಶುರು ಮಾಡಿದೆ .ಅಷ್ಟೇ

-63-

-ಅವರಿಬ್ಬರೂ ಮದುವೆ ತನಕ ಬಂದು ತಲುಪಿದ್ದು ಹೇಗೆ ?
-ಅದೇ ಹಳೆಯ ಕತೆ , ಮೊದಲು ಒಳ್ಳೆಯ ಸ್ನೇಹಿತರಾಗಿದ್ದರು , ಆಮೇಲೆ ಮನಸ್ಸು ಬದಲಾಯಿಸಿದರು.

-64-

- ಜೋರು ಮಳೆ ಶುರುವಾಗಿದೆ , ನನ್ನ ಹೆಂಡತಿ ಪೇಟೆಗೆ ಬೇರೆ ಹೋಗಿದ್ದಾಳೆ , ಚಿಂತೆಯಾಗಿದೆ.
- ಚಿಂತಿಸಬೇಡಿ , ಯಾವುದಾದರೂ ಅಂಗಡಿ ಒಳಗೆ ಹೋಗಿರ್ತಾರೆ , ಅಷ್ಟೇ.
- ಅದಕ್ಕೇ ನನಗೆ ಚಿಂತೆಯಾಗಿರೋದು.

Rating
No votes yet