ನಗೆಹನಿಗಳು ( ಹೊಸವು ?) - ಹದಿನೇಳನೇ ಕಂತು

ನಗೆಹನಿಗಳು ( ಹೊಸವು ?) - ಹದಿನೇಳನೇ ಕಂತು

-65-
-ರೀ , ಮಗಳಿಗೆ ಮುಂದಿನ ತಿಂಗಳು ಇಪ್ಪತ್ತೈದು ಆಗುತ್ತದೆ. ಬೇಗ ಗಂಡು ನೋಡಿ ಮದುವೆ ಮಾಡಬೇಕು.
-ಅವಸರ ಮಾಡಬೇಡ್ವೆ , ಒಳ್ಳೆಯ ಗಂಡಿಗಾಗಿ ಸ್ವಲ್ಪ ಕಾಯೋಣ.
-ನಮ್ಮ ಅಪ್ಪ-ಅಮ್ಮ ಹಾಗೆ ಕಾಯಲಿಲ್ವಲ್ಲ?

-66-
- ತುಂಬಾ ಬೇಜಾರಾಗಿದೆ , ಕಣಯ್ಯಾ . ನನ್ ಹೆಂಡತಿ ಯಾವಾಗಲೂ ತನ್ನ ಹಿಂದಿನ ಗಂಡನ ಬಗ್ಗೆ ಮಾತಾಡ್ತಾ ಇರ್ತಾಳೆ.
- ಅದು ಪರವಾಗಿಲ್ಲಯ್ಯಾ , ನನ್ ಹೆಂಡತಿ ಯಾವಾಗಲೂ ತನ್ನ ಮುಂದಿನ ಗಂಡನ ಬಗ್ಗೆ ಮಾತಾಡ್ತಾ ಇರ್ತಾಳೆ.

-67-
- ನಿನ್ನ ಹೆಂಡತಿ ಒಳ್ಳೆಯ ಮಾತುಗಾರ್ತಿ , ದಿನವಿಡೀ ಅವಳ ಮಾತು ಕೇಳಬಹುದು.
-ನೀನು "ಕೇಳಬಹುದು". ನಾನಾದರೋ "ಕೇಳಲೇಬೇಕು"!

-68-

-ಮದುವೆ ಅನ್ನೋದು ಆತ್ಮಹತ್ಯೆ ತಪ್ಪಿಸಲು ಒಳ್ಳೆಯ ಉಪಾಯ ಅಂತೆ !
-ಹೋಗಯ್ಯ , ಆತ್ಮಹತ್ಯೆನೇ ಎಷ್ಟೋ ಜನಕ್ಕೆ ಮದುವೆ ತಪ್ಪಿಸಲು ಒಳ್ಳೆಯ ಉಪಾಯ !!

Rating
No votes yet