ಅರ್ಧನಾರೀಶ್ವರ ಕಲ್ಪನಾ ಛಾಯೆಯಲಿ.....

ಅರ್ಧನಾರೀಶ್ವರ ಕಲ್ಪನಾ ಛಾಯೆಯಲಿ.....

ನರ ; ನಾರಿ
ರೂಪ-ಸ್ವರೂಪ
ಭಿನ್ನ-ವಿಭಿನ್ನ .
ಆದರೇನು
ಭಾವ : ಶಕ್ತಿಯ
ಅರ್ಧನಾರೀಶ್ವರ
ಕಲ್ಪನಾ ಛಾಯೆಯ
ವಿನೂತನ ಸಂಗಮ...

ಸ್ರೃಷ್ಠಿಯ ಕಣ ಕಣದಿ
ಆವರಿಸಿಹ ಮಮತಾ
ಮೂರ್ತಿ ಕೋಮಲೆ ,
ದೈವರೂಪಿ , ಜಗಜ್ಜನನಿ
ಯಂತೆ ಚಿತ್ರಿಸಿದವರೇ ಚಂಡಿ, ಚಾಮುಂಡಿಯೆಂದರು.
ಎಲ್ಲ ಅವರವರ ಭಾವಕ್ಕೆ
ಅವರವರ ನೇರಕ್ಕೆ...

ಹೊನ್ನು,ಮಣ್ಣು ,
ಹೆಣ್ಣ ಪಡೆವ ಭರದಿ
ಸುಮಂಗಲೆಯಾಗಿಸಿ,
ನಿತ್ಯ ಸುಮಂಗಲೆಯನ್ನಿಸಿ
ನಿನ್ನ ಅಸ್ಥಿತ್ವಕ್ಕೇ ಚ್ಯುತಿ
ತಂದ ವೀರಾಗ್ರಣಿ
ಮನುಕುಲ ತಿಲಕರು...

ಮಾನಾಪಮಾನದ
ಅಂಕುಶ ಶೋಭಿತೆ,
ದಿಕ್ಕಿಲ್ಲದ ಹಕ್ಕಿಲ್ಲದ
ದಾರಿಯಲಿ ನೀ ನಡೆದೆ..
ಆಡಿಸುವ ಕೈಗಳ
ಗೊಂಬೆಯಾದೆ.ಕುಣಿ
ಎನ್ನಲು ಕುಣಿದೆ ನಲಿದೆ.
ಅದೇ ಜಗದ ನಿಯಮವೆಂದೆ...

ಅರಿವು ತಿಳಿದೆದ್ದು
ಮರ್ಧನಕೆ ಕಾದಿಹ ಮದನಾರಿಯಂತಿರ್ಪ
ಉಗ್ರ ಸ್ವರೂಪಿ ಹೆಣ್ಣೇ
ನಿನ್ನ ರೂಪಕ್ಕೆಣೆಯಿಲ್ಲ ತಾಯೇ...

ಕಮಲ ಬೆಲಗೂರ್

Rating
Average: 5 (1 vote)