ನಗೆಹನಿಗಳು ( ಹೊಸವು ?) - ಇಪ್ಪತ್ತನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ತನೇ ಕಂತು

-77-

-ಅವಳ ಗಂಡ ಬರೀ ತನ್ನ ಹಣವನ್ನೆಲ್ಲ ಕಳಕೊಂಡಾಗ ಅವನು ಸತ್ತುಹೋದ ಅಂತ ಯಾಕೆ ಅವಳಿಗೆ ನೀನು ಹೇಳಿದೆ ?
-ಒಮ್ಮೆಲೇ ತೀರಾ ಆಘಾತಕಾರಿ ಸುದ್ದಿಯನ್ನು ಹೇಳುವುದು ಬೇಡ ಅಂತ.

-78-

-ನನ್ನ ಹೆಂಡತಿಗೆ ನೆನಪಿನ ಸಮಸ್ಯೆ ಇದೆ.
- ಅಂದರೆ ಬಹಳಷ್ಟು ಮರೆಯುತ್ತಾರಾ?
- ಇಲ್ಲ, ಬಹಳಷ್ಟು ನೆನಪಿಡುತ್ತಾಳೆ.

- ೭೯ -

ಗಂಡ- ಅಂತೂ ಇಂತೂ ಎಲ್ಲ ಸಾಲ ಇಂದಿಗೆ ತೀರಿತು.
ಹೆಂಡತಿ- ದೇವರು ದೊಡ್ಡವನು , ನಾವು ಇನ್ನು ಹೊಸ ಸಾಲ ಮಾಡಬಹುದು.

- ೮೦-

- ನಾಲ್ಕು ಮಕ್ಕಳ ವಿಧುರ ಮೂರು ಮಕ್ಕಳ ವಿಧವೆಯನ್ನು ಮದುವೆ ಆದನಂತೆ
- ಹಾಗಾದರೆ ಅದು ಮದುವೆ ಅಲ್ಲ, ಮರ್ಜರ್!

Rating
No votes yet