ನಗೆಹನಿಗಳು ( ಹೊಸವು ?) - ಇಪ್ಪತ್ತೊಂದನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ತೊಂದನೇ ಕಂತು

- ೮೧-

ಭಾಷಣಕಾರ ಹೇಳುತ್ತಿದ್ದ - ತಪ್ಪು ಮಾಡಿದಾಗ ತಪ್ಪೊಪ್ಪಿಕೊಳ್ಳುವವನು ಜಾಣ; ತಪ್ಪು ಮಾಡದೆ ಇದ್ದಾಗಲೂ ತಪ್ಪೊಪ್ಪಿಕೊಳ್ಳುವವನು ....
ಸಭೆಯಿಂದ ಯಾರೋ ಹೇಳಿದರು - ಮದುವೆಯಾದೋನು!

- ೮೨-

- ಸಮ್ಮ ಮನೆಯಲ್ಲಿ ನನ್ನ ಹೆಂಡತಿಯದೇ ಕೊನೆಯ ಮಾತು
- ನೀನು ಪುಣ್ಯವಂತ ಕಣಯ್ಯ , ನನ್ನ ಹೆಂಡತಿಯ ಮಾತಿಗೆ ಕೊನೆ ಎಂಬುದೇ ಇಲ್ಲ!

- ೮೩ -

- ರೀ, ಆತನ ಮದುವೆ ಆಗಿದೆಯೆ?
- ನನಗೆ ಗೊತ್ತಿಲ್ವೆ , ಅವನ ಮಾತೇ ಕಡಿಮೆ , ತನ್ನ ತೊಂದರೆಗಳನ್ನು ಎಂದೂ ಇನ್ನಿಬ್ಬರಿಗೆ ಹೇಳುವದಿಲ್ಲ

- ೮೪ -

- ನಾನು ಇವತ್ತು ರಾತ್ರಿ ನಿಮ್ಮಲ್ಲಿಗೆ ಊಟಕ್ಕೆ ಬರೋದು ನಿಮ್ಮ ಮನೆಯಾಕೆಗೆ ಗೊತ್ತು ತಾನೇ?
- ಓಹೋ, ಗೊತ್ತಿರದೆ ಏನು? ಬೆಳಿಗ್ಗೆ ತಾನೇ ಈ ಬಗ್ಗೆ ಒಂದು ಗಂಟೆ ಕಾಲ ಈ ಬಗ್ಗೆ ವಾದಿಸಿದ್ದೇನೆ

Rating
No votes yet