ನಗೆಹನಿಗಳು ( ಹೊಸವು ?) - ಇಪ್ಪತ್ತೆರಡನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ತೆರಡನೇ ಕಂತು

- ೮೫ -

- ನಾವು ನಮ್ಮ ಭಾಷೆಗೆ ತಾಯಿನುಡಿ ಅಂತ ಯಾಕೆ ಅಂತೀವಿ ?
- ಯಾಕಂದರೆ ನಮ್ಮ ತಂದೆಗೆ ಅದನ್ನು ಬಳಸುವ ಅವಕಾಶ ಸಿಗುವುದೇ ಇಲ್ಲ , ಅದಕ್ಕೆ!

- ೮೬ -

- ಶಾರದಮ್ಮನ ಪ್ರೀತಿಯ ಸಾಕು ನಾಯಿ ಕಾರಿನ ಕೆಳಗೆ ಸಿಕ್ಕು ಸತ್ತು ಬಿಟ್ಟಿದೆ. ಅವರಿಗೆ ಇದು ಗೊತ್ತಾದರೆ ಅವರಿಗೆ ಆಘಾತವೇ ಆಗುತ್ತದೆ.
- ಈ ಸಂಗತಿಯನ್ನು ಒಮ್ಮೆಲೇ ತಿಳಿಸಬೇಡ
- ಸರಿ , ಮೊದಲಿಗೆ ಅದು ಅವರ ಗಂಡ ಅಂತ ಹೇಳುತ್ತೀನಿ..

- ೮೭ -

- ಮದುವೆ ನಿಶ್ಚಯ ಆದ ಮೇಲೆ ನೀನೇಕೆ ಮದುವೆಯನ್ನು ರದ್ದು ಮಾಡಿದೆ ?
- ನಮ್ಮ ಸಂಸಾರಕ್ಕೆ ಅಂತ ಒಂದು ಬಾಡಿಗೆ ಮನೆ ನೋಡಿದಾಗ "ಮೂರು ಜನಕ್ಕೆ ಈ ಮನೆ ಸಣ್ಣದು " ಅಂತ ನನ್ನ ಅತ್ತೆ ಅಂದಳು.

- ೮೮ -

- ಮದುವೆ ಆಗದವನಿಗೆ ತನ್ನ ಕಷ್ಟ ಹಂಚಿಕೊಳ್ಳಲು ಯಾರೂ ಇರುವುದಿಲ್ಲ
- ಮದುವೆನೇ ಆಗದೋನಿಗೆ ಕಷ್ಟ ಏನ್ರೀ ಇರೋದು ?

Rating
No votes yet