ಯುಗಾದಿ ಕೊಡುಗೆ

ಯುಗಾದಿ ಕೊಡುಗೆ

ಯುಗಾದಿ ಕೊಡುಗೆ

ಹೊಸ ಸಂವತ್ಸರಕ್ಕೆ ನಾಂದಿ ಹಾಡುವ ಪ್ರಥಮ ದಿನ ಯುಗಾದಿ . ಹೊಸ ವರುಷದ ಮೊದಲನೆ ದಿನ ಬೇವು ಬೆಲ್ಲ ಸವಿದು ಸಿಹಿಯಾದ ಸುಖ, ಕಹಿ ಯಾದ ದುಃಖ ಸರಿಸಮಾನಾಗಿರಲಿ ಬಾಳಲ್ಲಿ ಎಂಬ ಅರಿವು ಮಾಡಿಕೊಳ್ಳುವ ಮಹಾಪರ್ವ ಯುಗಾದಿ . “ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತ್ತಿದೆ.” ಎಂಬ ವರಕವಿ ದ.ರಾ.ಬೇಂದ್ರೆಯವರ ವಿರಚಿತ ಕವನದ ಸುಂದರ ಸಾಲುಗಳು ಮತ್ತೆ ಕಿವಿಗೆ ಇಂಪು ನೀಡುತ್ತವೆ. ತಮ್ಮ ವಸ್ತುಗಳನ್ನು ಹೆಚ್ಚು ಹೆಚ್ಚು ಮಾರಾಟ ಮಾಡಲು ಹಾಗು ಅಧಿಕ ಗ್ರಾಹಕರನ್ನು ತಮ್ಮೆಡೆ ಸೆಳೆಯಲು ಪ್ರತಿಯೊಬ್ಬ ಮಾರಾಟಗಾರರು ಶಕ್ತಿ ಮೀರಿ ಪ್ರಯತ್ನ ನಡೆಸಿದ್ದಾರೆ . ದೂರದರ್ಶನ , ರೇಡಿಯೋ ಮೂಲಕ ” ಯುಗಾದಿ ಕೊಡುಗೆ” ಆಶೆ ತೋರಿಸಿ ಗ್ರಾಹಕರನ್ನು ತಮ್ಮ ಕಡೆಗೆ ಸೆಳೆಯುವ ಜಾಹಿರಾತು ಗಳನ್ನೂ ಪ್ರಸಾರ ಮಾಡುತ್ತಿದ್ದಾರೆ . ದಿನ ಪತ್ರಿಕೆ ಹಾಗು ವಾರ ಪತ್ರಿಕೆಗಳ ತುಂಬಾ ದಪ್ಪ ದಪ್ಪ ಅಕ್ಷರಗಳಲ್ಲಿ ಬಣ್ಣ ಬಣ್ಣದ, ಅಂದ ಚೆಂದ ” ಉಗಾದಿ ಕೊಡುಗೆ ” ಜಾಹಿರಾತುಗಳನ್ನು ಪ್ರಕಟಿಸುತ್ತಿದ್ದಾರೆ . ರಸ್ತೆ ಉದ್ದಕ್ಕೂ “ಯುಗಾದಿ ಕೊಡುಗೆ ” ಜಾಹಿರಾತಿನ ಪೋಸ್ಟರ್‌ಗಳು ಹಾಗು ಬ್ಯಾನರ್‌ಗಳು ಗೋಚರಿಸುತ್ತವೆ. ಸಮಸ್ತ ಜನರಿಗೆ ಯುಗಾದಿ ಹಬ್ಬದ ಶುಭಾಶಯಗಳನ್ನು ಕೋರುತ್ತಿರುವ ರಾಜಕಾರಣಿಗಳ ದೊಡ್ಡ ದೊಡ್ಡ ಪೋಸ್ಟರ್‌ಗಳು ರಾರಾಜಿಸುತ್ತವೆ.
ಒಬ್ಬಟ್ಟು ಅಥವ ಹೋಳಿಗೆ ಯುಗಾದಿಯ ವಿಶೇಷ ಸಿಹಿ ತಿನಿಸು. ಹೊಟ್ಟೆ ತುಂಬಾ ಉಟ ಮಾಡಿ ನಕ್ಕು ನಲಿಯುವ ಹಬ್ಬ ಯುಗಾದಿ . ಆದರೆ “ಯುಗಾದಿ” ಕೆಲವರ ಪಾಲಿಗೆ ಅದು “ತಗಾದಿ ” ಆಗಿದೆ. ನಮಗೆ ಅನ್ನ , ಹೋಳಿಗೆ ,ಪಲ್ಯಾ , ಬೆಲ್ಲಾ ಸವಿಯಲು ನೇರ ಕಾರಣಿಕರ್ತ ನಾದ ಅನ್ನದಾತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಸಾಲದ ಭಾದೆ ತಾಳಲಾರದೇ ನಮ್ಮ ನಾಡಿನ ರೈತ ನೇಣಿಗೆ ಶರಣಾಗುತ್ತಿದ್ದಾನೆ . ರೈತನ ಕುಟುಂಬದ ಸದಸ್ಯರು ದುಃಖದ ಮಡುವಿನಲ್ಲಿ ಮುಳುಗಿದ್ದಾರೆ. ಈ ಯುಗಾದಿಯಂದು ಅವರ ಪರಿವಾರದವರಿಗೆ “ಬೆಲ್ಲಕ್ಕಿಂತ ಬೇವೇ ಹೆಚ್ಚು. ” ಅವರಿಗೆಲ್ಲ ಕಹಿ ಯುಗಾದಿಅದೇ ಅವರಿಗೆ ಈ ಯುಗಾದಿ ಕೊಡುಗೆ . .
ಬಿಸಿಲಿನ ಬೇಗೆ ಅಗತ್ಯ ವಸ್ತುಗಳ ಬೆಲೇ ಏರಿಕೆ ತಾಪ ದಿಂದ ಸಾಮಾನ್ಯ ಜನರ ಮುಖದ ಮೇಲೆ ಯುಗಾದಿ ಹಬ್ಬದ ಉತ್ಸಾಹ , ಸಂತಸ ಕಾಣುತ್ತಿಲ .ನೂರೆಂಟು ಆಶೆ- ಆಕಾಂಕ್ಷೆಗಳನ್ನು
ಕಟ್ಟಿಕೊಂಡು ಬರುವ ಯುಗಾದಿ ಯನ್ನು ಎದುರು ನೋಡುತ್ತಿರುವ ನಾಡಿನ ಜನಸಾಮಾನ್ಯರ ಪಾಲಿಗೆ ಹೊಸದಾದ “ಯುಗಾದಿ ಕೊಡುಗೆ ” ಏನು ? ಎಂಬುದನ್ನು ಕಾದು ನೋಡಬೇಕಾಗಿದೆ. ಯುಗಾದಿ ಯಂದು ನಿಮ್ಮ ಮನೆಯಲ್ಲಿ ಮಾಡಿದ ಒಂದಿಷ್ಟೂ ಅನ್ನ , ಸಾರು, ಒಂದು ಒಬ್ಬಟ್ಟು ನಿಮ್ಮ ಸಮೀಪದ ಅನಾಥ ಆಶ್ರಮದ ಮಕ್ಕಳಿಗೆ “ಯುಗಾದಿ ಕೊಡುಗೆ” ಎಂದು ಭಾವಿಸಿ ನೀಡಿ .
ನಮ್ಮ ಉತ್ತರ ಕರ್ನಾಟಕದ ರೈತರು ಕಳಸಾ ಬಂಡೂರಿ, ಮಹಾದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದಾರೆ . ಕೇಂದ್ರ ಸರಕಾರ , ಕರ್ನಾಟಕ ಹಾಗು ಗೋವಾ ರಾಜ್ಯಸರಕಾರ ಮಹತ್ತರವಾದ ನಿರ್ಣಯ ಕೈಗೊಂಡು, ಆದಷ್ಟು ಬೇಗ ಮಹದಾಯಿ ನದಿ ಜೋಡಣೆಗೆ ಚಾಲನೆ ಕೊಡಲಿ . ಬರುವ ದುರ್ಮುಖಿ ನಾಮ ಸಂವತ್ಸರ ಉತ್ತರ ಕರ್ನಾಟಕದ ರೈತರ ಹಲವು ದಶಕದ ಕನಸು ನನಸಾಗಿಸಲಿ .ರಾಜ್ಯದ ರೈತರ ಬಾಳು ಹಸನಾಗಲಿ , ಇದೇ ನಮ್ಮ ಮಹದಾಶೆ .
। ಅನ್ನದಾತ ಸುಖಿನೋ ಭವ ।