ನಗೆಹನಿಗಳು ( ಹೊಸವು ?) - ಇಪ್ಪತ್ನಾಲ್ಕನೇ ಕಂತು

ನಗೆಹನಿಗಳು ( ಹೊಸವು ?) - ಇಪ್ಪತ್ನಾಲ್ಕನೇ ಕಂತು

-93-
- ಅಪ್ಪಾ , ಜಗತ್ತು ಗುಂಡಗೆ ಇದೆ ಅಂತೆ , ಹೌದಾ ?
- ಹೌದು, ಮಗೂ
- ಹಾಗಾದರೇ ನಾನು ಪೂರ್ವಕ್ಕೆ ಹೋಗಬೇಕಾದರೆ ಪಶ್ಚಿಮ ಕ್ಕೆ ಹೋದರೂ ಆದೀತು ಅಲ್ಲವೇ ?
-ಹೌದು.
-ಮತ್ತೆ ಉತ್ತರಕ್ಕೆ ಹೋಗಬೇಕಾದರೆ ದಕ್ಷಿಣ ದಿಕ್ಕಿನಿಂದಲೂ ಹೋಗಬಹುದು. ಅಲ್ಲವೇ ?
- ಖಂಡಿತ ನೀನು ದೊಡ್ಡವನಾದ ಮೇಲೆ ಆಟೋ ಡ್ರೈವರ್ ಆಗ್ತೀಯ !
-94-
ಅಪ್ಪ - ನಿಮ್ಮ ಟೀಚರ್ ನನಗೆ ಚೀಟಿ ಕಳಿಸಿದ್ದಾರೆ
ಮಗ - ಅಪ್ಪಾ, ನೀನೇನೂ ಚಿಂತಿಸಬೇಡ , ನಾನು ಯಾರಿಗೂ ಹೇಳುವದಿಲ್ಲ .
- ೯೫-
ಇತಿಹಾಸದ ತರಗತಿಯಲ್ಲಿ
- ಇತಿಹಾಸದಲ್ಲಿ ಮುಮ್ಮಡಿ ಕೃಷ್ಣದೇವನ ಕೊಡುಗೆ ಏನು ?
- ನಾಲ್ಮಡಿ ಕೃಷ್ಣದೇವ !
- ೯೬ -
ವ್ಯಾಕರಣದ ತರಗತಿಯಲ್ಲಿ
- ಈ ವಾಕ್ಯವನ್ನು ಸರಿಪಡಿಸು - "ಬೆಂಕಿಯನ್ನು ಹೆಚ್ಚಿನ ಹಾನಿ ಉಂಟು ಮಾಡುವ ಮೊದಲೇ ಅಗ್ನಿಶಾಮಕರು ಆರಿಸಿದರು"
- " ಅಗ್ನಿಶಾಮಕರು ಹೆಚ್ಚಿನ ಹಾನಿ ಉಂಟು ಮಾಡುವ ಮೊದಲೇ ಬೆಂಕಿಯನ್ನು ಆರಿಸಿದರು"

Rating
No votes yet