ನಗೆಹನಿಗಳು ( ಹೊಸವು ?) - ಮೂವತ್ತೊಂದನೇ ಕಂತು
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
-121-
-ನನಗೆ ಇನ್ನೊಮ್ಮೆ ಬಾಸ್-ನ ಮುಖಕ್ಕ ಹೊಡೆಯಬೇಕು ಎನ್ನಿಸಿತು
-ಏನು ? 'ಇನ್ನೊಮ್ಮೆ' ಅಂದೆಯಾ ?
-ಹೌದು, ಬೆಳಿಗ್ಗೆ ಒಮ್ಮೆ ಹಾಗೆ ಅನ್ನಿಸಿತ್ತು
-122-
ಬಾಸ್ - ನನ್ನ ಟೇಬಲ್ ಡ್ರಾವರ್ ನಲ್ಲಿದ್ದ 10,000 ರೂಪಾಯಿ ಅಲ್ಲಿ ಇಲ್ಲ. ನನ್ನ ಮತ್ತು ನಿಮ್ಮ ಹತ್ತಿರ ಮಾತ್ರ ಅದರ ಕೀಗಳು ಇದ್ದದ್ದು.
ಸಹಾಯಕ - ಸರ್, ಒಂದು ಕೆಲಸ ಮಾಡೋಣ. ನಾವಿಬ್ಬರೂ ತಲಾ 5000 ಹಾಕಿ ಸರಿಪಡಿಸೋಣ . ಯಾರಿಗೂ ಹೇಳದೆ ಸುಮ್ಮನಿದ್ದುಬಿಡೋಣ!
-೧೨೩ -
ಉದ್ಯೋಗ ಅರಸಿ ಬಂದವನಿಗೆ
- ಸರಿ , ನಿನಗೆ ಕೆಲಸ ಬೇಕಾಗಿದೆ , ಸುಳ್ಳು ಏನಾದರೂ ಹೇಳುವ ಅಭ್ಯಾಸ ಇದೆಯೇ?
- ಇಲ್ಲ ಸಾರ್, ಆದರೆ ಕಲಿತುಕೋತೀನಿ.
- ೧೨೪ -
ಹೊಸ ಉದ್ಯೋಗಿ ಬಾಸ್ ಗೆ ಹಿಂಜರಿಯುತ್ತ ಹೇಳಿದ. - ಸರ್, ನನಗೆ ಅನಿಸತ್ತೆ , ನಿಮಗೆ ಫೋನ್ ಇದೆ ಅಂತ.
ಬಾಸ್ - "ನಿನಗೆ ಅನಿಸುತ್ತೆ" ! ಏನು ಹಾಗ೦ದರೆ?
ಉದ್ಯೋಗಿ - ಸರ್ ಫೋನಿನಲ್ಲಿ ಆ ಕಡೆ ಇರೋರು ಅಂದರು , 'ಹಲೋ, ಅದು ನೀನೇನಾ ? ಮುದಿ ಮುಠ್ಠಾಳ ?'