ನಗೆಹನಿಗಳು ( ಹೊಸವು ?) - 33 ನೇ ಕಂತು
( ಇಂಗ್ಲೀಷ್ ನ ಜೋಕುಗಳ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮಗಾಗಿ ಕನ್ನಡಿಸುತ್ತಿದ್ದೇನೆ )
- ### -
ಸೀರೆ ಅಂಗಡಿಯಲ್ಲಿ
- ಒಳ್ಳೆಯ ಸೀರೆ ತೋರಿಸಿ
- ನಿಮ್ಮ ಶ್ರೀಮತಿಗಾ ? ಅಥವಾ ಇನ್ನೂ
ಚೆನ್ನಾಗಿರೋದನ್ನ ತೋರಿಸಲೇ ?
- ###-
- ಕ್ಯಾಶಿಯರ್ ಎಲ್ಲಿ?
- ರೇಸ್ ಗೆ ಹೋಗಿದ್ದಾರೆ
- ಏನು ? ಕಚೇರಿ ಹೊತ್ತಿನಲ್ಲಿ ರೇಸ್ ಗೆ ಹೋಗಿದ್ದಾರಾ ?
- ಹೌದು, ಕಚೇರಿಯ ಲೆಕ್ಕ ಸರಿದೂಗಿಸಲಿಕ್ಕೆ ಅವರಿಗೆ ಇದು ಕಡೆಯ ಅವಕಾಶ!
- ### -
- ಇವನನ್ನ ಏಕೆ ಕ್ಯಾಶಿಯರ್ ಕೆಲಸಕ್ಕೆ ಇಟ್ಟುಕೊಂಡಿರಿ? ಗಿಣಿ ಮೂಗು , ಆನೆಕಿವಿ , ಒಕ್ಕಣ್ಣ , ಕುಂಟ ಬೇರೆ.
- ಇವನೇನಾದರೂ ಓಡಿ ಹೋದರೆ ಪತ್ತೆ ಹಚ್ಚಲು ಸುಲಭ ಅಂತ
- ### -
ಒಬ್ಬಾತ ಪುಸ್ತಕದ ಅಂಗಡಿಗೆ ಟೆಲಿಗ್ರಾಂ ಕಳಿಸಿದ -ಸಜ್ಜನರು ಪುಸ್ತಕ ಹತ್ತು ಪ್ರತಿ ಕಳಿಸಿ.
- ಉತ್ತರ ಟೆಲಿಗ್ರಾಂನಲ್ಲಿ ಬಂದಿತು.' ಸಜ್ಜನರು ಈ ಊರಲ್ಲಿ ಇಲ್ಲ. ಬೇರೆ ಊರಿನಲ್ಲಿ ಹುಡುಕಿ ' ,
Rating