ಬಂದುಬಿಡಿ , ನಿಮ್ಮ ಅವಶ್ಯಕತೆ ಇದೆ.
ಮೊದಲು ಇದನ್ನು ಓದಿ....
ಜಗತ್ತು ಎಷ್ಟೊಂದು ಸುಂದರವಾಗಿ ಇದೆ !
ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ !
ಬಯಕೆಯ ಕಿಡಿಗಳು ಬೆಳಕನ್ನು ಮಾಡಿವೆ ,
ಬಾಳಿನುದ್ದ ನಿಮ್ಮೊಡನಿರಲು ನಾ ಬಂದೆನು.
ಎಷ್ಟು ಒಳ್ಳೆಯ ರಾತ್ರಿ ! ಏನು ಮುಹೂರ್ತ !
ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ !
ಹೀಗೆ ನೀವು ನಾಚದಿರಿ , ಹೀಗೆ ನನ್ನ ಕಾಡದಿರಿ
ಮುಸುಕು ತೆಗೆದುಬಿಡಿ , ಹರಡಲಿ ಹಾಲು ಬೆಳದಿಂಗಳು
ಚಂದ್ರನ ಅಗತ್ಯವಾದರೂ ಏನಿದೆ ?
ಬಂದುಬಿಡಿ ನಿಮ್ಮ ಅವಶ್ಯಕತೆ ಇದೆ !
---- ಇದು ಒಂದು ಹಿಂದಿ ಚಿತ್ರಗೀತೆಯ ಅನುವಾದ . ಹೇಮಂತ್ ಕುಮಾರ್ ಅವರು ಇದನ್ನು ಹಾಡಿದ್ದಾರೆ.
Rating