ನಗೆಹನಿಗಳು ( ಹೊಸವು ?) - 39 ನೇ ಕಂತು

ನಗೆಹನಿಗಳು ( ಹೊಸವು ?) - 39 ನೇ ಕಂತು

( ಇಂಗ್ಲೀಷ್ ನ ಜೋಕುಗಳ ಹಳೆಯ ಸಂಗ್ರಹವೊಂದನ್ನು ನಾನು ಈಗ ಓದುತ್ತಿದ್ದು ಅಲ್ಲಿ ನಾನು ಈ ತನಕ ಕೇಳಿರದ/ಓದಿರದ ಜೋಕುಗಳನ್ನು ನಿಮ್ಮ ಸಂತೋಷಕ್ಕಾಗಿ ಕನ್ನಡಿಸುತ್ತಿದ್ದೇನೆ
)
****
-ನಿಮ್ಮ ತಮ್ಮ ಸರಕಾರದ ನೌಕರಿಗಾಗಿ ಪ್ರಯತ್ನ ಮಾಡ್ತಾ ಇದ್ದನಲ್ಲ , ಅವನು ಈಗ ಏನು ಮಾಡುತ್ತಿದ್ದಾನೆ ?
- ಏನೂ ಮಾಡ್ತಾ ಇಲ್ಲ , ಆ ಕೆಲಸ ಸಿಕ್ಕಿದೆ.
****
- ಶಾಮಣ್ಣನಿಗೆ ಇಬ್ಬರು ಮಕ್ಕಳು. ಒಬ್ಬ ರಾಜಕಾರಣದಲ್ಲಿದ್ದಾನೆ , ಇನ್ನೊಬ್ಬ ಕೂಡ ಯಾತಕ್ಕೂ ಉಪಯೋಗವಿಲ್ಲ !
****
ರಾಜಕಾರಣಿ ಒಬ್ಬರನ್ನು ಭೇಟಿ ಆದವರು ಹೇಳಿದರು - ನಿಮ್ಮ ಬಗ್ಗೆ ಬಹಳಷ್ಟು ಕೇಳಿದ್ದೇನೆ
ರಾಜಕಾರಣಿ ಹೇಳಿದರು- ಅದನ್ನೆಲ್ಲ ಪ್ರೂವ್ ಮಾಡೋದಿಕ್ಕೆ ಸಾಧ್ಯವಿಲ್ರೀ
****
- ನಮ್ಮ ಅಭ್ಯರ್ಥಿ ಹೇಗಿರಬೇಕು ಅಂದರೆ ಎಡಪಂಥೀಯ ಇರಬಾರದು , ಹಾಗೆಯೇ ಬಲಪಂಥೀಯನೂ ಇರಕೂಡದು . ಮಧ್ಯಮಮಾರ್ಗಿ ಇರಬೇಕು
- ಹಾಗಾದರೆ ನಮ್ಮ ಡೇವಿಡ್ ಗೆ ಟಿಕೆಟ್ ಯಾಕೆ ಕೊಡಬಾರದು ? ಎಷ್ಟೋ ವರ್ಷಗಳಿಂದ ಬಸ್ ಡ್ರೈವರ್ ಆಗಿದ್ದಾನೆ. ಅವ ಯಾವಾಗಲೂ ರಸ್ತೆ ಮಧ್ಯದಲ್ಲೇ ಬಸ್ ಓಡಿಸೋದು !

Rating
No votes yet