UPI - ಹಣ ಪಡೆಯಲು,ಕೊಡಲು ಸುಲಭ ವಿಧಾನ

UPI - ಹಣ ಪಡೆಯಲು,ಕೊಡಲು ಸುಲಭ ವಿಧಾನ

ಈ ಬಗ್ಗೆ ಹೆಚ್ಚು ಜನಕ್ಕೆ ಗೊತ್ತಿಲ್ಲ. ಕನ್ನಡ ಪತ್ರಿಕೆಗಳಲ್ಲಿ ಬಂದ ಹಾಗ ಇಲ್ಲ. ಇಂಗ್ಲಿಷ್ ಪತ್ರಿಕೆಗಳಲ್ಲಿ ಅಷ್ಟಿಷ್ಟು ಮಾಹಿತಿ ಇದ್ದರೂ ಓದುಗರ ಗಮನಕ್ಕೆ ಬಂದಿರುವ ಸಾಧ್ಯತೆ ಕಡಿಮೆ.
ನೀವು ಇನ್ನೊಬ್ಬರಿಗೆ ಹಣ ಕೊಡಬೇಕು ಇಲ್ಲವೆ ಅವರಿಂದ ಪಡೆಯಬೇಕು, ಹೇಗೆ ಮಾಡುತ್ತೀರಿ ? ಇಬ್ಬರೂ ಒಂದೆಡೆ ಕಲೆತು , ನಗದಿನಲ್ಲಿ ವ್ಯವಹಾರ ಮಾಡುವಿರಾ ? ನಗದು ನಿಮ್ಮಲ್ಲಿರಬೇಕು , ಸರಿಯಾದ ಚಿಲ್ಲರೆ ಇರಬೇಕು , ಹರಕು , ಹೊಲಸು , ನಕಲಿ ನೋಟು ಇರಕೂಡದು . ಅಲ್ಲದೇ ? ಕಳ್ಳತನ ,ದರೋಡೆ , ಕಳೆದುಕೊಳ್ಳುವ ಸಾಧ್ಯತೆ ಬೇರೆ.
ಇದಕ್ಕೆ ಈಗಾಗಲೇ ಜಾರಿಗೆ ಬಂದಿರುವ ವ್ಯವಸ್ಥೆ UPI ಅಂದರೆ ಯೂನಿಫೈಡ್ ಪೇಮೆಂಟ್ ಇಂಟರ್ಫೇಸ್. ಏಕೀಕೃತ ಪಾವತಿ ವ್ಯವಸ್ಥೆ ಅಂತ ಕನ್ನಡದಲ್ಲಿ(?) ಅರ್ಥ ಮಾಡಿಕೊಳ್ಳಬಹುದು.
ಏನಿದು ? ನಮನಿಮಗೆ ಹೇಗೆ ಅನುಕೂಲ ಆದೀತು ನೋಡುವ ಬನ್ನಿ.
ನಿಮ್ಮ ಬಳಿ ಮೊಬೈಲ್ ಇದ್ದೇ ಇರುತ್ತದೆ . ಅದು ಸ್ಮಾರ್ಟ್ ಫೋನ್ ಆಗಿರುವ ಸಾಧ್ಯತೆಯೂ ಹೆಚ್ಚು. ಮತ್ತೆ ನಿಮಗೊಂದು ಬ್ಯಾಂಕ್ ಖಾತೆಯೂ ಇದೆ. ಆ ಬ್ಯಾಂಕ್ ನವರ ಹತ್ತಿರ ನಿಮ್ಮ ಮೊಬೈಲ್ ಸಂಖ್ಯೆಯೂ ಇದ್ದು ಅವರು ಅದನ್ನು ನಿಮ್ಮ ಖಾತೆಗೆ ತಳುಕು ಹಾಕಿದ್ದಾರೆ ಅಲ್ಲವೇ . ( ತಳುಕು ಹಾಕಿದ್ದಾರೆ ಅಂದರೆ ಲಿಂಕ್ ಮಾಡಿದ್ದಾರೆ ಅಂತ! ಮತ್ತೇ , ಗಮನಿಸಿ , ಅದು ತಳುಕು , ಅನೇಕರು ತಪ್ಪಾಗಿ ಬಳಸುವ 'ಥಳುಕು' ಅಲ್ಲ ! )
ಸರಿ ವಿಷಯಕ್ಕೆ ಬರುತ್ತೇನೆ. ಈಗ ನೀವು ನಿಮ್ಮ ಮೊಬೈಲಿಗೆ 'ಯಾವುದಾದರು ಬ್ಯಾಂಕಿನ ' ( ನಿಮ್ಮ ಖಾತೆ ಇರುವ ಬ್ಯಾಂಕ್ ನದ್ದೇ ಆಗಬೇಕೆಂದಿಲ್ಲ ) UPI app ಹಾಕಿಕೊಳ್ಳಿ.
ಅದನ್ನು ಶುರುಮಾಡಿ .. ಯಾವುದೇ UPI app ನಲ್ಲೂ ಮುಂದಿನ ಹೆಜ್ಜೆಗಳು ಹೆಚ್ಚೂಕಡಿಮೆ ಇವೇ ಇರುತ್ತವೆ… ನಿಮ್ಮ ಮೊಬೈಲ್ ನಂಬರ್ ಕೊಡಬೇಕು . ಈ app ಗೊಂದು ಪಾಸ್‌ವರ್ಡ್ ಇಟ್ಟುಕೊಳ್ಳಬೇಕು. ( ಮುಂದೆ ಎಂದಾದರೂ ಪಾಸ್‌ವರ್ಡ್ ಮರೆತರೆ ಅದನ್ನು ಪಡೆಯಲು ರಹಸ್ಯ ಪ್ರಶ್ನೆ, ಅದಕ್ಕೆ ನಿಮ್ಮ ಉತ್ತರ ಇತ್ಯಾದಿ ಆಯ್ಕೆ ಇರಬಹುದು )
ಈಗ ನಿಮ್ಮ ಖಾತೆಯ ವಿವರಗಳನ್ನು ಮತ್ತು ಅದಕ್ಕೊಂದು ನಿಮ್ಮ ಆಯ್ಕೆಯ virtual payment address ( ಉದಾಹರಣೆಗೆ ನಿಮ್ಮ ಹೆಸರು ರಮೇಶ ಆಗಿದ್ದು ನಿಮ್ಮ ಬ್ಯಾಂಕ್ sbi ಆಗಿದ್ದರೆ ಅದು ramesh@sbi ಆಗಿರಬಹುದು ) ಪಡೆಯಬೇಕು. ಈ ವರ್ಚುವಲ್ ವಿಳಾಸ ನಿಮಗೆ ಸಿಗುವ ಬಗ್ಗೆ app ತಿಳಿಸುತ್ತದೆ
ಈ ಹಂತದ ನಂತರ ನಿಮ್ಮ ಖಾತೆಗೆ ಒಂದು MMID ಸಂಖ್ಯೆ ಯನ್ನು ಇಟ್ಟುಕೊಳ್ಳಬೇಕು. ಇದಕ್ಕೆ ಆ app ನಲ್ಲೇ ಅನುಕೂಲ ಇರುತ್ತದೆ.
( ಇದೇ ರೀತಿ ನಿಮ್ಮ ಇನ್ನಷ್ಟು ಬ್ಯಾಂಕ್ ಖಾತೆಗಳನ್ನು ಸೇರಿಸಬಹುದು.)
ಇದೇ ರೀತಿ ನಿಮ್ಮೊಂದಿಗೆ ವ್ಯವಹಾರ ಇಟ್ಟುಕೊಂಡವರು ಇಂತಹ app ಹಾಕಿಕೊಂಡು virtual payment address ಮಾಡಿಕೊಂಡು ನಿಮಗೆ ಅಥನ್ನು ತಿಳಿಸಿದರೆ ನೀವು ನಿಮ್ಮ app ಮೂಲಕ ಅವರ ಖಾತೆಗೆ ಹಣ ಜಮಾ ಮಾಡಬಹುದು. ಅವರು ತಮ್ಮ ಖಾತೆ ಯಾವ ಬ್ಯಾಂಕಿನ ಯಾವ ಶಾಖೆಯಲ್ಲಿ ಇದೆ , ಅದರ ಬ್ರ್ಯಾಂಚ್ ಕೋಡ್ ಏನು , IFSC ಸಂಖ್ಯೆ ಏನು , ಖಾತೆಯ ಸಂಖ್ಯೆ ಏನು , ಯಾವ ಹೆಸರಿನಲ್ಲಿ ಇದೆ ಇವೆಲ್ಲ ವಿವರಗಳನ್ನು ತಿಳಿಸುವ ಅಗತ್ಯವೇ ಇಲ್ಲ. ಅವರೂ ಕೂಡ ನಿಮ್ಮ virtual payment address ಬಳಸಿ ನಿಮ್ಮ ಖಾತೆಗೆ ಹಣ ಜಮಾ ಮಾಡಬಹುದು.
ಈ ವರ್ಗಾವಣೆಯು ತಕ್ಷಣ ಆಗುತ್ತದೆ.
Mobile wallet ಗಳಂತೆ ಈ ವ್ಯವಸ್ಥೆ ಇಲ್ಲದೆ ಇದ್ದು ಇಲ್ಲಿ ನಿಮ್ಮ ಹಣ ನಿಮ್ಮ ಖಾತೆಗಳಲ್ಲಿಯೇ ಇರುತ್ತದೆ. . ( Mobile wallet ಗಳಲ್ಲಿ ನಿಮ್ಮ ಹಣ Mobile wallet ಕಂಪೆನಿಗಳ ಬಳಿ ಇರುತ್ತದೆ )
( ನಾನು ಮತ್ತು ಸಾವಿರ ಕಿ.ಮೀ. ದೂರ ಇರುವ ನನ್ನ ಗೆಳೆಯ ನಿನ್ನೆ SBI ನ SBI PAY app ಬಳಸಿ SBI ಮತ್ತು ICICI ಬ್ಯಾಂಕ್ ಖಾತೆಗಳ ನಡುವೆ ಹಣ ಕೊಟ್ಟು ಕೊಂಡೆವು )
ನಗದುಹಣ ರಹಿತ ಸಮಾಜ ನಿರ್ಮಾಣದತ್ತ ಇದು ಬಹಳ ಮಹತ್ವಪೂರ್ಣ ಹೆಜ್ಜೆ ಆಗಿದೆ.

Rating
Average: 5 (1 vote)