ಎಚ್ಚರಿಸಿದ ಮೌನ

ಎಚ್ಚರಿಸಿದ ಮೌನ

ಕವನ

ಮನವೆಂಬ ಆಗಸದಲ್ಲೀಗ
ಚಲಿಸಿತೊಂದು ಕಾರೂಮೋಡ
ಅಕ್ಷಿಯೆಂಬ ತಾಣವೆಲ್ಲೋ
ಕಂಗೆಡಿಸಿದ ಪ್ರತಿಬಿಂಬ
ಸೆರೆಹಿಡಿತೆನಾದರೂ ನಿಟ್ಟುಸಿರ-ನೀರವೇ?

ಗುರಿತಪ್ಪಿದಾಕಾರ್ಷಣೆಯಂತೆ ಆಯತಪ್ಪಿದೆ
ಭಾವ ಲಹರಿ
ನಗೆಯಂಬ ನಕ್ಷತ್ರವೂ ಜಾರಿದ
ಬುದ್ಧಿ ಜಗತಿಗೀಗ ಆವರಿಸದೆ
ಕೌತುಕವೆನಿಸುವ ಜ್ಞಾನದ ಮೌನ
ಮನಭಾರದ ಕುಸಿತಕಿಲ್ಲವಾದಾನೇ
ಸಾಂತ್ವನಿಸಲು ತಿಳುವಳಿಕೆಯ ಚಂದಿರ!

ಮನದಾವಾರಣದಲಿ ಮಾತಿನ ಸದ್ದಿಲ್ಲ
ಕೇಳಿದವಷ್ಟೇ ಬರಿ
ಮೋಡಗಳಾಡುವ ಪಿಸುಮಾತಿನ ಗುಡುಗು

ಗೊಂದಲಮಯವೆನಿಸಿತು ಚಿತ್ತ
ಆದರೂ ಮಿಂಚಲಿಲ್ಲ ಚಿಂತೆಯ ಫಲಕ
ಮಿಂಚಿದ ಕ್ಷಣಗಳಿಗೇಕೋ ಕಡೆಗಣಿಸಿದ ಕ್ಷಣಭಾವ

ಅಕಾಲಿಕ ತಾಪವೆನಿಸಿದರು ಬರಲಿಲ್ಲ
ತಡೆ ಒಡ್ಡಿರಲಿಲ್ಲ ಯಾವ ಭಾವ ಪರದೆಯು
ಬರಲೊಪ್ಪದೆನಿಸಿತು ಯಾವ ಮಳೆಯು
ಭ್ರಮಾಭಾಸದ ಪ್ರೀತಿಯ ಕೊರತೆಗೆ!!
~~ ಶಶಿ