ಹಂಬಲ ಹಣತೆ (5) ಮರಕಡಿವನೇ! ಆ ಮರವನುಳುಹು!

ಹಂಬಲ ಹಣತೆ (5) ಮರಕಡಿವನೇ! ಆ ಮರವನುಳುಹು!

ಕವನ

"ಮರಕಡಿವನೇ! ಆ ಮರವನುಳುಹು!
ಮಟ್ಟುದಿರದರೊಂದು ಕೊನೆಯ!
ಯೌವನದೊಳೆನ್ನ ಸಲಹಿ ತಾ ಮರವು,
ಸಲಹುವೆನು ಇಂದು ನಾನದನು!-"
 
ಹುಡುಗುತನದೆನ್ನ ಬಿಡುವಿಗಾಸರೆಯು,
ತಾನಾದು ದೀ ಮರವೆನಗೆ!
ಇದರಡಿಯೊಳಾಡದರು ಎನ್ನ
ಒಡನಾಡಿಗಳು ಸೋದರರು-
ಮಾತೆ ಮುದ್ದಿಸಿದಳೀ ಯೆಡೆಯೊಳನ್ನ,
ಅಪ್ಪಿದೆನು ತಾತನನು ಇಲ್ಲಿ!-
ತಿಳಿಗೇಡಿ ನನ್ನೆಳಲ ಮನ್ನಿಸುತ
ಉಳಿಸು ನೀನಾ ಮರವನು!"
 
"ಶತಮಾನಗಳ ಹೊಡೆತಗಳ ತಡೆದು
ತಿರೆಗೆ ಬಂಧಿಸುತ ತಾಯ್ಬೇರ
ನಂದಿರುವ ಮರವಿರಲಿ ಚಿರಕಾಲ-
ನೆಲೆಯು ತಾನಾಗಿ ಖಗಕುಲಕೆ!"
 
"ಕೂಗಿ ಕೋಗಿಲೆಯು ಬಾಗಿಸಲು ಕೊಂಬೆ,
ಮುದಿ ಮರವೆ ಆಳುಗಾಳಿಯನು!-
ನಾನೀಮರವ ತಡೆಯಲಿರುವನಕ,
ಕೊಡಲಿ ಘಾತಿಸದಿರಲೀ ಮರವನು!"