ಸ್ನೇಹದ ಸವಿ

ಸ್ನೇಹದ ಸವಿ

ಕವನ

ಸ್ನೇಹದ ಸವಿ
 
ಏಕಾಂಗಿಯಾಗಿ ನಾ ನಡೆಯುತಿದ್ದೆ ಈ ಬಾಳದಾರಿಯಲಿ ,
ನಸು ನಗುತ ನೀ ಬಂದೆ ಕೈ ಬಿಸಿ ಕರೆಯುತಲಿ ,
ಈ ಹೃದಯ ಧರಣಿಗೆ ಸ್ನೇಹ ಎಂಬ ಎರಡಕ್ಸರದ
ಸಿಹಿ ಸಿಂಚನವ ಚೆಲ್ಲಿ , ಅರಳಿಸಿದೆ ಆಸೆಗಳ , ಕಲ್ಪಿಸಿದೆ ಕನಸುಗಳ ,
ಮರೆಸಿದೆ ಮೌನಗಳ ಮಧುರವಾಗಿ ,
ಒಲವಿನೊಲುಮೆಯ ಒಡನಾಟದ ನೆನಪುಗಳುಳಿಯಲಿ
ನಿಮ್ಮ ಹೃದಯ ಸಾಗರ ಸಂಗಮದಲ್ಲಿ
ಈ ನನ್ನ ನೆನಪೊಂದು ನೋವಲ್ಲಿ ನಗುವಾಗಿ
ಕಣ್ಣಲ್ಲಿ ಕನಸಾಗಿ ಬದುಕಲ್ಲಿ ಬೆಳಕಾಗಿ
ಎಂದೆಂದೂ ಜೊತೆಗಿರ ಸ್ನೇಹಿತನ ಸವಿ ನೆನಪು  
 
ನವೀನ್ ಪಿ ಗೌಡ