ಸಿಡಿಲು
ನೆಟ್ಟಗೆ ನಿಂತ ಉದ್ದ ಮರವನ್ನು ಹುಡುಕಿ
ಬಡಿದ ಸಿಡಿಲು,,,,,,, ಸುಟ್ಟ ಸಿಡಿಲು,,,,,,,
ಚಿಕ್ಕ ಚಿಕ್ಕ ಗಿಡಗಳನ್ನು ಸುಮ್ಮನೆ ಬಿಟ್ಟಿದ್ದ್ಯಾಕೆ?
ಭೂಮಿಯ ಆಳದ ಪೋಷಕಾಂಶವನು,
ಕಷ್ಟಪಟ್ಟು ಹೀರಿ ಬೆಳೆಯಲಿಲ್ಲವೇ ಆ ಉದ್ದ ಮರ!
ಸಿಡಿಲಿಗ್ಯಾಕೆ ಆ ಉದ್ದ ಮರದ ಮೇಲೆ ಮಾತ್ರ ಕೋಪ ?
ತಂಪು ನೀಡುವ ಹಂಬಲದಿ ಬೆಳೆದಿತ್ತೇನೋ?
ಪ್ರಕೃತಿಯೂ ಎಷ್ಟು ತಾರತಮ್ಯ ಮಾಡುತ್ತಿದೆ.
ಕಷ್ಟ ಪಟ್ಟವನಿಗೆ ಗುದ್ದು ನೀಡುವುದ್ಯಾಕೆ?
ನಿತ್ಯ ನಿರಂತರ, ಇದೆ
ಸ್ವಂತಿಕೆಯ ಬೇರನ್ನು ಆಳಕ್ಕೆ ಬಿಟ್ಟು
ಮುಗಿಲೆತ್ತರ ಬೆಳೆದ ಮರಗಳೇ
ಚಾಚಿಕೊಳ್ಳಿ ನಿಮ್ಮ ಕೊಂಬೆಗಳನ್ನು ಭುವಿಯ ಅಗಲಕ್ಕೆ
ಸಿಡಿಲಿಗೂ ಒಂಚೂರು ಕರುಣೆ ಬರಬಹುದು
-G K Naveen