*"ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ.
*"ಹೆಣ್ಣು ಮಕ್ಕಳು ತವರಿಗ್ಯಾಕೆ ಬರುತ್ತಾರೆ...???"*
ಏನನ್ನೂ ಕೊಂಡುಹೋಗಲು
ಬರುವುದಿಲ್ಲ ಹೆಣ್ಣುಮಕ್ಕಳು.
ಅವರ ಬೇರುಗಳಿಗೆ
ನೀರೆರೆಯಲು ಬರುತ್ತಾರೆ
ಅಣ್ಣತಮ್ಮಂದಿರ ಸುಖ
ಸಂತೋಷವನ್ನು ನೋಡಿ
ಆನಂದಿಸಲು ..
ತಮ್ಮ ಮಧುರ ಬಾಲ್ಯವನ್ನು ಹುಡುಕಲು ಬರುತ್ತಾರೆ
ತವರು ಮನೆಯ ಅಂಗಳದಲ್ಲಿ ಸ್ನೇಹದ ದೀಪ ಬೆಳಗಿಸಿಡಲು ಬರುತ್ತಾರೆ.
ಯಾರ ಕೆಟ್ಟ ದೃಷ್ಟಿಯೂ ಬೀಳದಂತೆ
ಬಾಗಿಲಿಗೆ ರಕ್ಷೆ ಕಟ್ಟಲು
ಬರುತ್ತಾರೆ.
ಮಮತೆಯ ಝರಿಯಲ್ಲಿ
ಮಿಂದು ಹೋಗಲು ಬರುತ್ತಾರೆ.
ತಮ್ಮಲ್ಲಿರುವುದೇನನ್ನೋ
ಕೊಟ್ಟುಹೋಗಲು ಬರುತ್ತಾರೆ
ತಿರುಗಿ ಅತ್ತೆ ಮನೆಗೆ ಹೊರಟಾಗ
ಎಲ್ಲವನ್ನೂ ಅಲ್ಲೇ ಬಿಟ್ಟು
ಹೊರಡುತ್ತಾರೆ.
ಎಲ್ಲರ ಮಂಜಾದ ಕಣ್ಣುಗಳಲ್ಲಿ
ತಮ್ಮ ನಸುನಗೆಯನ್ನು
ಈಜಲು ಬಿಟ್ಟು ಹೋಗುತ್ತಾರೆ.
ಅತೀ ಚಂಚಲ, ಅತಿ ಉತ್ಸಾಹದ
ಚಿಲುಮೆ ಆಗಿರುತ್ತಾಳೆ ಮಗಳು.
ಕೋಮಲ ಮನಸ್ಸಿನ ಮುಗ್ಧ
ಮಗಳು.. ಮಾತು ಮಾತಿಗೂ
ಅಳುವವಳು,.
ದೇವರ ಕೃಪೆಯಿಂದಷ್ಟೇ
ಹುಟ್ಟುತ್ತಾಳವಳು.
ಅವಳ ನಗುವಿಂದಲೇ
ಮನೆ ಸುಗಂಧಿತ..
ಪರರ ಮನೆಗೆ ಕಳುಹಿಸುವಾಗ
ಏನೋ ವಿಚಿತ್ರ ಸಂಕಟ.
ಮನೆ ಭಣಗುಟ್ಟಿಸಿ
ಎಷ್ಟೊಂದು ಅಳಿಸಿ ಹೋಗುತ್ತಾರೆ
ತಾಯಿಯ ಪ್ರತಿಬಿಂಬ..
ತಂದೆಯ ಮುದ್ದಿನ
ಕಣ್ಮಣಿ...
ದೇವರೇ ಹೇಳುತ್ತಾನಂತೆ..
ತಾನು ಅತ್ಯಂತ ಸಂತೋಷದಿಂದಿರುವಾಗ
ಹುಟ್ಟುತ್ತಾರೆ ಹೆಣ್ಣುಮಕ್ಕಳು.