ಬೆಂಡೆಕಾಯಿಯ ಚಟ್ನಿ
ಬೇಕಿರುವ ಸಾಮಗ್ರಿ
ಬೆಂಡೆಕಾಯಿ 150 ಗ್ರಾಮ್, ಬೆಳ್ಳುಳ್ಳಿ 4-5 ಎಸಳು, ಹಸಿ ಮೆಣಸಿನಕಾಯಿ 3-4 (ಖಾರ ಬೇಕಾದಲ್ಲಿ ಹೆಚ್ಚಿಗೆ ಹಾಕಿ), ಬೆಲ್ಲ ಚಿಕ್ಕ ನಿಂಬೆ ಹಣ್ಣಿನ ಗಾತ್ರ (ಬೆಲ್ಲ ಕುಟ್ಟಿ ಪುಡಿ ಮಾಡಿಕೊಳ್ಳಿ), ಕೊತ್ತಂಬರಿ ಸೊಪ್ಪು 5-6 ಕಡ್ಡಿ, ಉಪ್ಪು ರುಚಿಗೆ ಬೇಕಾಗುವಷ್ಟು.
ತಯಾರಿಸುವ ವಿಧಾನ
ಬೆಂಡೆಕಾಯಿಯನ್ನು ಬಿಲ್ಲೆ (ಅರ್ಧ ಇಂಚು ದಪ್ಪ) ಆಕಾರದಲ್ಲಿ ಹೆಚ್ಚಿಕೊಂಡು, ಬಾಣಲೆಯಲ್ಲಿ 4 ಟೀ ಚಮಚ ಎಣ್ಣೆಯೊಂದಿಗೆ ಹುರಿಯಿರಿ. ಬೆಂಡೆಕಾಯಿ ಸ್ವಲ್ಪ ಕಪ್ಪು ಆಗುವ ರೀತಿ. ನಂತರ ಹಸಿ ಮೆಣಸಿನಕಾಯಿಯನ್ನು ಅದೇ ರೀತಿ ಹುರಿದು ಕೊಳ್ಳಿ. ಬೆಂಡೆಕಾಯಿ ಒಂದನ್ನು ಬಿಟ್ಟು ಮೇಲೆ ಹೇಳಿದ ಎಲ್ಲ ಪದಾರ್ಥಗಳನ್ನು ಮಿಕ್ಸರ್ ಗೆ ಹಾಕಿ ರುಬ್ಬಿಕೊಳ್ಳಿ ನಂತರ ತಣ್ಣಗಾದ ಹುರಿದ ಬೆಂಡೆಕಾಯಿಯನ್ನು ಸೇರಿಸಿ ಸ್ವಲ್ಪ ಮಾತ್ರವೇ ರುಬ್ಬಿಕೊಳ್ಳಿ. ಈಗ ಬೆಂಡೆಕಾಯಿ ಚಟ್ನಿ ಸವಿಯಲು ಸಿದ್ಧ. ಚಪಾತಿ ಹಾಗು ರೊಟ್ಟಿಯೊಂದಿಗೆ ತುಂಬಾ ರುಚಿಯಾಗಿರುತ್ತದೆ.
Comments
ಉ: ಬೆಂಡೆಕಾಯಿಯ ಚಟ್ನಿ
ಮನೆಯಲ್ಲಿ ಮಾಡಿ ನೋಡಿದ್ದು ಏನನ್ನಿಸುತ್ತದೆ -
ಉ: ಬೆಂಡೆಕಾಯಿಯ ಚಟ್ನಿ
ಪ್ರಯತ್ನಿಸಿ ನೋಡಬೇಕು.