ಗೆಲುವು ನನ್ನದೆ
ಕವನ
ಬಹುದೂರದ ದಾರಿ ಸಾಗಿಬಂದೆ
ಈಗ ಒಬ್ಬಂಟಿಯಾಗಿ ನಿಂತಿರುವೆ
ಸಾವಿರ ದಾರಿ ನನ್ನ ಕಣ್ಣ ಮುಂದೆ
ಯಾವುದನ್ನ ಆರಿಸಲಿ ಓ ದೇವರೇ
ಏನು ಮಾಡಲೆಂದೇ ಗೊತ್ತಾಗದೆ
ಮುಂದೆ ಮುಂದೆ ಇಟ್ಟಿಹೆನು ನಡಿಗೆ
ಸಾಗುವ ದಾರಿಯಲ್ಲಿ ಕಲ್ಲು-ಮುಳ್ಳಿನಂತಹ ಜನರಿಗೆ
ಮುಂದಿನ ಹೆಜ್ಜೆ ಇಡಲು ಈ ಮನ ಹೆದರಿದೆ
ಜೊತೆಯಲ್ಲೇ ತಂದೆ-ತಾಯಿ ಇರುವಾಗೆ
ಇನ್ನು ಹೆಜ್ಜೆ ಇಡಲು ಹೆದರಬೇಕೇ
ಒಂದಲ್ಲ ಎರಡು ದೇವರು ಇರುವರು ನನ್ನ ಜೊತೆಯಲ್ಲೇ
ಅಂದ ಮೇಲೆ ಗೆಲುವು ಇನ್ನು ಮುಂದೆ ನನ್ನದೇ