ಹಣ್ಣು ಕೊಯ್ಯಲು ಕೊಕ್ಕೆಚೀಲ
ಮಾವು, ಗೇರು, ಚಿಕ್ಕು, ಪೇರಲೆ, ನೇರಳೆ, ಗೇರು, ಬುಗರಿ, ರಾಂಬುಟಾನ್, ಪ್ಯಾಷನ್ ಹಣ್ಣು ಇಂತಹ ಹಣ್ಣುಗಳನ್ನು ಸುಲಭವಾಗಿ ಕೊಯ್ಯಲು ಈ ಕೊಕ್ಕೆಚೀಲ ಸೂಕ್ತ ಸಾಧನ. ಈ ಹಣ್ಣುಗಳನ್ನು ಕೊಕ್ಕೆಕೋಲಿನಿಂದ ಕೊಯ್ಯುವಾಗ ಅವು ಕೆಳಕ್ಕೆ ಬಿದ್ದು ಹಾಳಾಗುತ್ತವೆ. ಈ ಕೊಕ್ಕೆಚೀಲದಿಂದ ಕೊಯ್ಯುವಾಗ ಹಣ್ಣುಗಳು ಚೀಲದೊಳಗೆ ಬೀಳುವ ಕಾರಣ ಅವಕ್ಕೆ ಏಟಾಗುವುದಿಲ್ಲ.
ಹಣ್ಣಿನ ಮರದ ವ್ಯಾಪ್ತಿಯಿಂದ ಹೊರಗೆ ನಿಂತು ಕೊಯ್ಯುವಾಗ, ಈ ಕೊಕ್ಕೆಚೀಲದೊಳಗೆ ಹಣ್ಣು ಇರುವಂತೆ ಹಿಡಿದುಕೊಂಡು, ಕೊಕ್ಕೆಚೀಲವನ್ನು ಹಣ್ಣಿನ ಮರದಿಂದ ದೂರಕ್ಕೆ ಎಳೆಯಬೇಕು. ಆಗ, ಕೊಕ್ಕೆಚೀಲದ ಕಬ್ಬಿಣದಸರಳಿನ ಬಾಯಿಯ ಬಾಗಿರುವ ತುದಿಗೆ ಸಿಲುಕಿ, ಹಣ್ಣಿನ ತೊಟ್ಟು ತುಂಡಾಗಿ, ಹಣ್ಣು ಚೀಲದೊಳಕ್ಕೆ ಬೀಳುತ್ತದೆ.
ಹಣ್ಣಿನ ಮರದ ವ್ಯಾಪ್ತಿಯೊಳಗೆ ನಿಂತು ಕೊಯ್ಯುವಾಗ, ಈ ಕೊಕ್ಕೆಚೀಲದೊಳಗೆ ಹಣ್ಣು ಇರುವಂತೆ ಹಿಡಿದುಕೊಂಡು, ಕೊಕ್ಕೆಚೀಲವನ್ನು ಮುಂದಕ್ಕೆ ತಳ್ಳಬೇಕು. ಆಗ, ಕೊಕ್ಕೆಚೀಲದ ಕಬ್ಬಿಣದ ಸರಳಿನ ಬಾಯಿಯ ಬುಡದಲ್ಲಿರುವ ಮೂರು ಕಬ್ಬಿಣದ ಸರಳುತುಂಡುಗಳಿಗೆ ಸಿಲುಕಿ, ಹಣ್ಣಿನ ತೊಟ್ಟು ತುಂಡಾಗಿ, ಹಣ್ಣು ಚೀಲದೊಳಕ್ಕೆ ಬೀಳುತ್ತದೆ.
ಇದನ್ನು ವಿನ್ಯಾಸಗೊಳಿಸಿ ಮಾರಾಟ ಮಾಡುವ ಘಟಕ: ಪಿಲಿಪ್ಸ್ ಮಲ್ಟಿ ಪರ್ಪಸ್ ಅಗ್ರೋ ಸ್ಪ್ರೇಯರ್, ಉರಿಮಜಲು, ಅಂಚೆ ಇಡ್ಕಿದು, ವಯಾ ಪುತ್ತೂರು, ದಕ್ಷಿಣ ಕನ್ನಡ 574220. ಇವರಲ್ಲಿ ರಾಸಾಯನಿಕ ಸಿಂಪಡಿಸುವ ಸ್ಪ್ರೇಯರ್ ಕಂಟ್ರೋಲ್ ಲಭ್ಯವಿದೆ (೧೮ ಅಡಿ, ೩೦ ಅಡಿ ಮತ್ತು ೪೦ ಅಡಿ ಉದ್ದ) ಮೊಬೈಲ್ 9449992021 ಹಾಗೂ 9448824094 Email: philipssprayer@gmail.com