ಹೊಸ ವರ್ಷ - ಹಳೇ ಮನಸ್ಸು !
ಕವನ
ಹೊಸ ವರ್ಷ ಹೊಸ ಬೆಳಕು
ಹoಬಲಿಸಿದೆ ಈ ಮನ
ನವೋದಯದ ಆಶಾಕಿರಣ
ಬಾಳಿಗೊoದು ನವಾಭರಣ
ವಾಸ್ತವ ಸoಗತಿಯ ಅರಿವು
ಅದೇ ಹಳೇ ಮನಸ್ಸು
ರಾಗ-ದ್ವೇಷ ಲೋಭ ಕ್ರೋಧ
ಸಿಡಿದೆದ್ದಿವೆ ಹಳೇ ನೆನಪು
ಕಹಿ ನಿರಾಸೆಯ ಛಾಯೆ
ಹೊಸ ವರುಷದ ಅರ್ಥ ಅನಿಸಿಕೆ
ಆಗದಿರಲಿ ಗೋಡೆ ಮೇಲಿನ ಕಾಲಚಕ್ರ ಕಾಗದ
ಅಳಿಯಲಿ ಹಳೇ ಮನಸ್ಸು- ಕಲ್ಮಶ
ಉದಯಸಲಿ ಹೊಸ ಮನಸ್ಸು- ಉಲ್ಲಾಸ
ಸಾತ್ವಿಕತೆಯ ತoಗಾಳಿಯಲಿ
ಪ್ರೀತಿ ಶಾoತಿಯ ಹೂ ಬನದಲಿ
ನಿತ್ಯ ನೂತನ ಚೇತನದಲಿ !
ಶ್ರೀ ನಾಗರಾಜ. 10/1/17
- Log in to post comments