#ಹೀಗೊಂದು_ಮಾತು ...

#ಹೀಗೊಂದು_ಮಾತು ...

 
#ಹೀಗೊಂದು ಮಾತು
 
ಹೆಚ್ಚಿನ ರಾಜಕಾರಣಿಗಳು ಕೆಟ್ಟ ರಾಜಕೀಯ ಮಾಡುತ್ತಾ ಜನರನ್ನು ವಿಭಜಿಸುತ್ತಿದ್ದಾರೆ. ಜನರ ಆಶೋತ್ತರಗಳಿಗೆ ಸ್ಪಂದಿಸಬೇಕಾದ ಜನಪ್ರತಿನಿಧಿಗಳು ಕಾಲಹರಣ ಮಾಡುತ್ತಾ ಕೆಸರೆರಚಾಟದಲ್ಲಿ ಮುಳುಗಿದ್ದಾರೆ. ಇನ್ನು ಮಾಧ್ಯಮಗಳು(ಪೇಡ್) ಹೇಗೆ ನಂಬಿಕೆ ಉಳಿಸಿಕೊಳ್ಳುವ ಕೆಲಸ ಮಾಡುತ್ತಿದೆ ಎನ್ನುವುದು ಜನಸಾಮಾನ್ಯರಿಗೂ ಮನದಟ್ಟಾಗಿದೆ. ನಮ್ಮಂಥಹ ಜನಸಾಮಾನ್ಯರು ಉಣ್ಣಲೂ ಆಗದೆ ಉಗುಳಲೂ ಆಗದೆ ಈ ಬದಲಾವಣೆಯ ಬವಣೆಗೆ ಮೂಕಪ್ರೇಕ್ಷಕರಾಗಿದ್ದೇವೆ. ಅಲ್ಲವೇ...???.....
ಹೌದಪ್ಪಾ ಹೌದು......ಈಗ ಸದ್ಯಕ್ಕೆ ಇವೆಲ್ಲಾ ಮರೆತು ಬಿಡಿ ....ಅದಕ್ಕಿಂತಲೂ ಮುಖ್ಯವಾದ ವಿಷಯವಿದೆ... ಮಾರ್ಚ್ ತಿಂಗಳು, ಇದು ಪರೀಕ್ಷೆಯ ಕಾಲ... ಈ ತಿಂಗಳಿಗೂ, ಪರೀಕ್ಷೆಗೂ ಬಿಡಿಸಲಾರದ ನಂಟು. ನಮ್ಮ ದಿನನಿತ್ಯದ ಹತಾಶೆ, ಪರೀಕ್ಷೆ ಎದುರಿಸಲು ಸನ್ನದ್ಧರಾಗುತ್ತಿರುವ ಮಕ್ಕಳ ದಾರಿ ತಪ್ಪಿಸದಿರಲಿ... 
ಈ ದಿಸೆಯಲ್ಲಿ ಮಕ್ಕಳ ಓದಿಗೆ ಸಹಾಯವಾಗುವಂಥ ಕೆಲ ಸಲಹೆಗಳು, ಮಕ್ಕಳಿಗಾಗಿ, ಹೆತ್ತವರಿಗಾಗಿ....
ಗಮನಿಸಿ :
 
1. ಮಕ್ಕಳ ಓದಿನ ವೇಳಾ ಪಟ್ಟಿ ತಯಾರಿಸಿ. 
2. ತಿಂಡಿ, ಊಟ ಇವುಗಳ ಮೇಲೆ ಗಮನ ಇರಲಿ. ಎಣ್ಣೆ ಪದಾರ್ಥ , ಹೋಟೆಲ್, ಬೇಕರಿ ತಿಂಡಿ ಕೊಟ್ಟು ಆರೋಗ್ಯ ಹಾಳು ಮಾಡಬೇಡಿ. 
3. ಹಾಲು, ಹಣ್ಣು -ಹಂಪಲು, ಹಸಿರು ತರಕಾರಿಗಳು ಅವರ ನೆನಪಿನ ಶಕ್ತಿಗೆ ಬಹಳ ಮುಖ್ಯ.
4. ಬೇಗ ಎದ್ದು , ಬೇಗ ಮಲಗುವಂತೆ ನೋಡಿಕೊಳ್ಳಿ. 
5. ದಿನವೂ ದೇವರ ಪ್ರಾರ್ಥನೆ ಮಾಡಿಸಿ. 
6. ಸಕಾರಾತ್ಮಕ ಯೋಚನೆಗಳನ್ನು ತುಂಬುತ್ತ ಮನಸ್ಸನ್ನು ಧೃಢ ಗೊಳಿಸಿ. 
7. ಅಭ್ಯಾಸ - ಮನನ - ಬರವಣಿಗೆ ಸರಿಯಾದ ಕ್ರಮ. 
8. ನಿಮ್ಮ ಮಕ್ಕಳ ಒಳ್ಳೆಯ ಅಂಕಗಳನ್ನೂ , ಅವರ ಸಾಧನೆಯನ್ನೂ ಚಿತ್ರಿಸಿಕೊಳ್ಳಲು(Visualizing) ತಿಳಿಸಿ.
9. ಮಕ್ಕಳಲ್ಲಿ ಆತ್ಮವಿಶ್ವಾಸ ತುಂಬಿ.
10. ದಿನವೂ ಯೋಗ, ಪ್ರಾಣಾಯಾಮ ಇಲ್ಲದಿದ್ದರೆ ಶಾರೀರಕ ವ್ಯಾಯಾಮ ಅತ್ಯಗತ್ಯ. 
11. ಸ್ವಲ್ಪ ದಿನಗಳ ಮಟ್ಟಿಗೆ ಮನೆಯ ಸದಸ್ಯರೆಲ್ಲರೂ ಟಿವಿ(ಧಾರಾವಾಹಿಗಳಿಂದ)ಯಿಂದ ಮುಕ್ತರಾಗಿ ಮಕ್ಕಳ ಓದಿಗೆ ಪ್ರೋತ್ಸಾಹಿಸಿ.

ಭಾವೀ ಭಾರತದ ಪ್ರಜೆಗಳನ್ನು ರೂಪಿಸಲು ಸ್ವಲ್ಪ ಶ್ರಮ ಹಾಕಲೇಬೇಕಲ್ಲವೇ .... ಪರೀಕ್ಷೆ ಎದುರಿಸುತ್ತಿರುವ ಒಂದನೇ ತರಗತಿಯಿಂದ ೧೦ನೆ ತರಗತಿ ಹಾಗೂ ೨ ನೇ ಪಿ ಯು ಸಿ ಮಕ್ಕಳಿಗೂ, ICSE, CBSE, State Board ಎಲ್ಲಾ ಮಕ್ಕಳಿಗೂ ಶುಭವಾಗಲಿ...