ಪಂಜಾಬ್ - ಗುರುದಾಸ್ ಮಾನ್ ರ ಹೊಸ ಗೀತೆ
ತುಂಬಾ ವರ್ಷಗಳ ಹಿಂದೆ ಕೇಳುತ್ತಿದ್ದ ಗುರುದಾಸ್ ಮಾನ್ ರ ಹೊಸ ಗೀತೆಯ ವಿಡಿಯೋ ಯೂಟ್ಯೂಬ್ ನಲ್ಲಿ ಶಿಫಾರಸುಗಳಲ್ಲಿ ನೋಡಿದಾಗ ಕೇಳೋಣ ಎಂದೆನಿಸಿತು. ರಾಷ್ಟ್ರಕ್ಕಾಗಿ ಪ್ರಾಣ ಬಿಟ್ಟ ಭಗತ್ ಸಿಂಗ್ ನನ್ನ ಆತ ಪ್ರೀತಿಸಿದ ಪಂಜಾಬ್ ಇಂದು ಏನಾಗಿದೆ ಎಂದು ತೋರಿಸಲು ಕಾಲ ಕರೆದುಕೊಂಡು ಬರುತ್ತಾನೆ. ಹೋಗುವ ಮುನ್ನ ಇಂದಿನ ಪಂಜಾಬ್ ನೋಡಿ ಇತಿಹಾಸ ಬದಲಿಸುವ ಮನಸ್ಸು ಮಾಡುವುದಿಲ್ಲ ಎಂದು ಭಗತ್ ಸಿಂಗ್ ನಿಂದ ಮಾತು ಪಡೆದು ಕರೆದುಕೊಂಡು ಹೋಗುತ್ತಾನೆ. ನಂತರ ಇಂದಿನ ಪಂಜಾಬ್ ನಲ್ಲಿ ಯುವಕರು ಅರ್ಥವಿಲ್ಲದ ವಿಷಯಗಳಿಗೆ ದಾಸರಾಗಿರುವುದನ್ನ ವಿಧವಿಧವಾಗಿ ತೋರಿಸುತ್ತಾ ಹೋಗುತ್ತಾನೆ. ಈ ವಿಡಿಯೋ ಇಷ್ಟವಾಗುವುದು ಯಾಕೆಂದರೆ ಪಂಜಾಬಿನ ಸಮಸ್ಯೆಗಳು ಎಂದು ತೋರಿಸುವ ಎಲ್ಲ ಸಮಸ್ಯೆಗಳು ನಮ್ಮ ಎಲ್ಲ ರಾಜ್ಯಗಳಲ್ಲಿ ಇರುವಂಥವೇ. ನಾವು ದಿನ ನಿತ್ಯ ನೋಡುವ ಅನೇಕ ಸಮಸ್ಯೆಗಳನ್ನ ಸಮಾಜದಿಂದ ಒಂದು ಕ್ಷಣ ಹೊರಗೆ ನಿಂತು ನೋಡಿದಾಗ ನಮ್ಮ ನಾಗರೀಕತೆ ಎತ್ತ ಸಾಗುತ್ತಿದೆ ಎನ್ನುವ ಪ್ರಶ್ನೆ ಹುಟ್ಟುಹಾಕುತ್ತದೆ.
ಒಮ್ಮೆ ಆ ವಿಡಿಯೋ ನೋಡಿ. ಹಾಡು ಅರ್ಥ ಮಾಡಿಕೊಳ್ಳಲು ಇಂಗ್ಲಿಷ್ ಸಬ್ ಟೈಟಲ್ ಇದೆ.
https://www.youtube.com/watch?v=m60bi4SqQ1U