ನಗೆಹನಿಗಳು - 49 ನೇ ಕಂತು
ಹೆಂಡತಿ ಊರಿಗೆ ಹೋಗುವಾಗ ಬಹುತೇಕ ಗಂಡಸರು ಅವಳನ್ನು ಬೀಳ್ಕೊಡಲು ರೈಲು ನಿಲ್ದಾಣಕ್ಕೆ ಹೋಗುತ್ತಾರೆ …. ಅವಳು ಹೋದುದನ್ನು ಖಚಿತಪಡಿಸಿಕೊಳ್ಳಲು !
------------
- ಅಜ್ಜಿ , ನೀನು ಪತ್ರಿಕೆಯ ಶ್ರದ್ದಾಂಜಲಿ , ಚಿರಸ್ಮರಣೆ ಜಾಹೀರಾತುಗಳನ್ನೇ ಯಾಕೆ ಓದೋದು ?
- ಚಿಂತಿಸಬೇಡ ,ಮಗೂ. ಯಾರ್ಯಾರೆಲ್ಲ ಮತ್ತೆ ಒಬ್ಬಂಟಿಗರಾದರು ಅಂತ ತಿಳಿದುಕೊಳ್ಳಲು , ಅಷ್ಟೇ !
------------
ನೆರೆಮನೆಯವ ಬಂದು ಹೇಳಿದ -"ನಿಮ್ಮ ನಾಯಿ ನನ್ನ ಅತ್ತೆಯನ್ನು" ಕಚ್ಚಿದೆ"
ಮನೆಯಾತ ಗಾಬರಿಯಾಗಿ ಕ್ಷಮೆ ಬೇಡುತ್ತ ಕೇಳಿದ - "ನೀವು ಬಹುಶಃ ಹಣಕಾಸಿನ ಪರಿಹಾರ ಬಯಸುತ್ತೀರಾ, ಅಲ್ಲವೇ?"
ನೆರೆಮನೆಯವ - "ಖಂಡಿತ ಇಲ್ಲ , ನಿಮ್ಮ ನಾಯಿಯನ್ನು ನನಗೆ ಮಾರುತ್ತೀರಾ ಅಂತ ಕೇಳಲು ಬಂದೆ "
------------
ಮದುವೆಯಾಗುವ ತನಕ ನಿಜವಾದ ಸಂತೋಷ ಏನೆಂದು ಗಂಡಸಿಗೆ ಗೊತ್ತು ಇರುವುದಿಲ್ಲ.
ಆದರೆ ಅಷ್ಟು ಹೊತ್ತಿಗಾಗಲೇ ತುಂಬಾ ತಡವಾಗಿ ಹೋಗಿರುತ್ತದೆ!
Rating