ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ

ಮೈಕ್ರೋಸಾಫ್ಟಿನಿಂದ ಕನ್ನಡದ ಕೊಲೆ

ಸ್ನೇಹಿತರೆ,

ನಾನು ಸಂಪದದ ಒಬ್ಬ silent ಓದುಗ. ಇದು ನನ್ನ ಮೊದಲ ಗಳಹುವಿಕೆ.

ನಾನೊಬ್ಬ ಕನ್ನಡ ಸಾಫ್ಟ್ ವೇರ್ ತಜ್ಞ. ನಮ್ಮ ಕಂಪೆನಿಯಲ್ಲಿ MSDN subscription ತೆಗೆದುಕೊಂಡಿದ್ದಾರೆ. ನಾನು ಅದರ download ವಿಭಾಗದಲ್ಲಿ ಬೇರೇನೋ ಹುಡುಕುತ್ತಿದ್ದಾಗ ಅದರ ಪ್ರಥಮ ಪುಟದಲ್ಲೇ ನೀಡಿರುವ ಕನ್ನಡ ಮತ್ತು ಹಿಂದಿ glossary ನನ್ನ ಗಮನ ಸೆಳೆಯಿತು. ಅವರ ಪ್ರಕಾರ ಈ ಗ್ಲಾಸರಿಗಳು (ಇದಕ್ಕೆ ಕನ್ನಡ ಪದ ಏನು?) ವಿಂಡೋಸ್ ಮತ್ತು ಆಫೀಸ್ LIPಗಳಲ್ಲಿ ಬಳೆಕಯಾಗಿವೆ. ನೋಡೋಣವೆಂದು ಅವುಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಹಿಂದಿಯ ಗ್ಲಾಸರಿ ಚೆನ್ನಾಗಿಯೇ ಇದೆ. ಆದರೆ ಕನ್ನಡದ ವಿಷಯಕ್ಕೆ ಬಂದಾಗ ಮಾತ್ರ ಹೊಟ್ಟೆಯಲ್ಲಿ ಚಾಕು ಇರಿದಂತಾಯಿತು. ಅದು ತುಂಬ ಕೆಟ್ಟದಾಗಿದೆ. ಯಾರೋ ಕನ್ನಡ ಗೊತ್ತಿಲ್ಲದವರು ಡಿಕ್ಶನರಿ ನೋಡಿ ಪದಗಳನ್ನು ಜೋಡಿಸಿದಂತಿದೆ. ಉದಾಹರಣೆಗೆ "estimated time left" ಎಂಬುದನ್ನು "ಎಡಕ್ಕೆ ಸಮಯ ಅಂದಾಜು" ಎಂದು ಅನುವಾದಿಸಿದ್ದಾರೆ. ಇದರ ಬಗ್ಗೆ ಯಾರಿಗೆ ದೂರು ಕೊಡಬೇಕು ಎಂದು ತಿಳಿಯುತ್ತಿಲ್ಲ.

ಸಂಪದದಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಇರುವುದನ್ನು ಗಮನಿಸಿದ್ದೇನೆ. ಉದಾ -ಅನಂತ ಮೂರ್ತಿ, ಓ ಎಲ್ ಎನ್, ಇಸ್ಮಾಯಿಲ್, ಶ್ರೀವತ್ಸ ಝೊಶಿ, ಪವನಜ, ... ದಯವಿಟ್ಟು ನೀವೆಲ್ಲ ಸೇರಿ ಈ ಕನ್ನಡದ ಕೊಲೆಯನ್ನು ತೀವ್ರವಾಗಿ ಪ್ರತಿಭಟಿಸಬೇಕಾಗಿ ಕೇಳೀಕೊಳ್ಳುತ್ತೇನೆ.

Rating
No votes yet

Comments