ಬಿ.ಎಂ.ಗಿರಿರಾಜರ ಕನ್ನಡ ನಾಟಕದಲ್ಲಿ - ಇರಾನಿನ "ಜಾಫರ್ ಪನಾಹಿ"

ಬಿ.ಎಂ.ಗಿರಿರಾಜರ ಕನ್ನಡ ನಾಟಕದಲ್ಲಿ - ಇರಾನಿನ "ಜಾಫರ್ ಪನಾಹಿ"

      ಇತಿಹಾಸ ನಮಗೆ ಏನನ್ನೋ ಹೇಳಲು ಬಯಸುತ್ತಿರುತ್ತದೆ, ಆದರೆ ರಾಜಕಾರಣಿಗಳು ನಮಗೆ ಇತಿಹಾಸವನ್ನು ಅರ್ಥೈಸಿಕೊಂಡು, ಬದುಕಲು ಬಿಡುವುದಿಲ್ಲ, ಬದಲಾಗಿ ಇತಿಹಾಸಕ್ಕೆ ನಮ್ಮ ಈಗಿನ ಭಾವನೆಗಳ ಲೇಪ ಹಚ್ಚಿ ನಮ್ಮಲಿ ಒಂದು ರೀತಿಯ ಕರುಣೆಯನ್ನೋ, ದ್ವೇಷವನ್ನೋ ಹುಟ್ಟುಹಾಕಿ, ಭಾವೋದ್ರೇಕಗೊಳಿಸಿ, ಆ ಭಾವೋದ್ರೇಕದಿಂದ ಉಂಟಾದ ಬೆಂಕಿಯಲ್ಲಿ, ಅವರ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ,,,,,,,,, 
 
   ನಾವು ಅಣುಜೀವಿಯಿಂದ ಮಾನವರಾಗಿ ಅದೆಷ್ಟೋ ವರ್ಷಗಳಾದರೂ, ಮಾನವರಾಗಿ ಹೆಸರು ಪಡೆದಿದ್ದೇವೆಯೇ ವಿನಃ, ನೈಜ ಮಾನವರಾಗುವುದರಲ್ಲಿ ಸೋತಿದ್ದೇವೆ,,,,,,,,,,,,,,ಕ್ರೋಧದ ಪಾತ್ರೆಯಲ್ಲಿ ಬೇಯುತ್ತಾ ಬೇಯುತ್ತಾ, ನಮ್ಮನ್ನ ಇನ್ನ್ಯಾರಿಗೋ ಆಹಾರವಾಗಿ ಮಾಡಿಕೊಳ್ಳುತ್ತಿದ್ದೇವೆ,,,,,,, ಎಂದೋ, ಯಾರೋ ಕಿಡಿಗೇಡಿಗಳಿಂದ ಇತಿಹಾಸದಲ್ಲಿ  ನಡೆದ ತಪ್ಪಿಗೆ ಇಂದು ನಾವು ಇನ್ಯಾರನ್ನೋ ಶಿಕ್ಷಿಸಲು ಹೊರಡುತ್ತಿದ್ದೇವೆ, ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎನ್ನುವ ಗಾದೆಯ ಹಾಗೆ, ಮುಂದೊಂದು ದಿನ ನಮ್ಮ ಕ್ರೌರ್ಯಗಳೂ ಇತಿಹಾಸವಾಗುತ್ತವೆ, ಅದರ 
ಭಯಂಕರ ಪರಿಣಾಮಗಳ ಅರಿವು ನಮಗಿಲ್ಲ, 
 
        ಶಾಲೆ-ಕಾಲೇಜುಗಳಲ್ಲಿ ನಾವು ಇತಿಹಾಸವನ್ನು ಓದಿ ಬಹಳವಾಗಿ ತಿಳಿದುಕೊಂಡಿದ್ದೇವೆ ಎಂದರೆ ಅದು ತಪ್ಪು,,,,,,,, ಶಾಲೆಯಲ್ಲೇ ಆಗಲಿ, ಕಾಲೇಜಿನಲ್ಲೇ ಆಗಲಿ, ಮೇಲಿನ ಕೆಲವರು,,,,, ಮಕ್ಕಳೇ ನೀವು ಇದೆ ದಿಕ್ಕಿನಲ್ಲಿ ಸಾಗಿ ಎನ್ನುವ ಒಂದು ನಿರ್ಮಿತ ದಾರಿಯನ್ನು ಸೃಷ್ಟಿಸಿರುತ್ತಾರೆ, ನಾವು ಆ ಹಾದಿಯಲ್ಲಿ ಹಾದುಬಂದು ನಮ್ಮ ಶಿಕ್ಷಣ ಮುಗಿದಿದೆ ಎನ್ನುವ ಕಲ್ಪನಾ ಸಾಗರದಲ್ಲಿ ವಿಹರಿಸುತ್ತಿರುತ್ತೇವೆ, ಆದರೆ ನಿಜವಾಗಿ ನಾವು ಏನು ಓದಬೇಕಿತ್ತು, ಯಾವ ಇತಿಹಾಸ, ಯಾವ ಸಮಾಜ ಶಾಸ್ತ್ರಗಳು, ಯಾವ ವಿಜ್ಜ್ಞಾನ? ಗೊತ್ತಿಲ್ಲ, ಏಕೆಂದರೆ ಸತ್ಯ ಕಡಲ ಅಲೆಯಷ್ಟು ಪರಿಣಾಮಕಾರಿ, ಆದ್ದರಿಂದ ಯಾರೊಬ್ಬನೂ ಅದರ ಹತ್ತಿರ ಸುಳಿಯುವ ಪ್ರಯತ್ನ ಮಾಡಲಾರ, ಮುಳುಗಬಹುದೆಂಬ ಭಯದಲ್ಲಿ,,, ಒಂದು ವೇಳೆ ಯಾವನಾದರೂ ಸತ್ಯದ ಪರ ನಿಂತರೂ, ಬಹುಜನದಿಂದ ಒಪ್ಪಲ್ಪಟ್ಟ ಸುಳ್ಳೊ-ಂದು ಸತ್ಯದ ವೇಷ ಹಾಕಿ ನಿಂತಿರುತ್ತದೆ, ಅದರ ಎದುರು ಸತ್ಯ ಸವಕಲಾಗಿ ಕಾಣುತ್ತದೆ,,,,,,,
 
      ಒಪ್ಪಿತವಲ್ಲದ ಭಾವಗಳನ್ನು ಹೇರುವುದು ಒಂತರ ಅತ್ಯಾಚಾರವೇ ಆಗಿರುತ್ತದೆ, ನಾವೆಲ್ಲಾ ಒಂಥರಾ ಅತ್ಯಾಚಾರಕ್ಕೆ ಒಳಗಾದವರೇ, ಆದರೆ ನಾವದನ್ನೇ ಸುಖ ಎಂದು ಸುಖಿಸುತ್ತಿದ್ದೇವೆ, ಈ ಅತ್ಯಾಚಾರವನ್ನು ಸಹಿಸದೆ ಪ್ರಶ್ನಿಸಿದವನು, ಬಂಧನಕ್ಕೊಳಗಾಗುತ್ತಾನೆ,,,,,,,,, ದೈಹಿಕ ಬಂಧವನ್ನು ತಡೆದುಕೊಳ್ಳಬಹುದು, ಆದರೆ ಮಾನಸಿಕ ಬಂಧವನ್ನು !!!!!!!!!
      
     ಈಗ್ಗೆ ಕೆಲವೇ ವರ್ಷಗಳ ಹಿಂದೆ ಸತ್ಯದೆಡೆಗಿನ ಪ್ರಶ್ನೆ ಎಸೆದ ನಿರ್ದೇಶಕನೊಬ್ಬ ಜೈಲು ಪಾಲಾಗಿದ್ದ, ಹೆಸರು "ಜಾಫರ್ ಪನಾಹಿ". ಇರಾನಿನ ಹೆಸರಾಂತ ನಿರ್ದೇಶಕ, ಅವನ "ದಿ ವೈಟ್ ಬಲೂನ್" ಚಿತ್ರ ನೋಡಿ ಕಣ್ತುಂಬಿ ಆಳದವರು ಯಾರೂ ಇಲ್ಲ,,,,,,,,, ಆತ ಜನ ನಂಬಿದ ಸುಳ್ಳುಗಳ್ಳನ್ನು ದಿಕ್ಕರಿಸಿ ಸತ್ಯದ ಕಡೆಗೆ ಜಿಗಿದ, ಈ ಜಾಫರ್ ಪನಾಹಿ ಈಗ, ಬಿ.ಎಂ. ಗಿರಿರಾಜರ "ಸುಗಂಧದ ಸೀಮೆಯಾಚೆ" ನಾಟಕದಲ್ಲಿ ಒಂದು ಪಾತ್ರವಾಗಿ ಬರುತ್ತಿದ್ದಾನೆ,,,,,,, ಅದನ್ನು ನಟಿಸುವ ಜವಾಬ್ಧಾರಿ ಹೊತ್ತವರು ಕನ್ನಡದ ಹೆಸರಾಂತ ಚಿತ್ರ ನಿರ್ದೇಶಕ "ಶಿವಮಣಿ" ಸಾರ್ ಅವರು,
 
     ಇದರ ಬಗ್ಗೆ ಇಂದಿನ (೨೯-ಜನವರಿ-೨೦೧೮) ಉದಯವಾಣಿಯಲ್ಲಿ ಒಂದು ವರದಿ ಇದೆ, ತಪ್ಪದೆ ಓದಿ,,,,,
 
       ಜೊತೆಗೆ ನಾಟಕದ ಮೊದಲ ರಂಗ ಪ್ರಯೋಗ, ದಿನಾಂಕ ೧೦-ಫೆಬ್ರುವರಿ-೨೦೧೮ ರಂದು ಬೆಂಗಳೂರಿನ ಹನುಮಂತನಗರದ "ಕೆ.ಹೆಚ್ ಕಲಾಸೌಧದಲ್ಲಿ",,,,,,,,, ಖಂಡಿತಾ ಬನ್ನಿ,,,,,, ಗಿರಿರಾಜರು ಬಹಳ  ಆಸ್ಥೆಯಿಂದ ಸಜ್ಜುಗೊಳಿಸಿದ ಹೊಸ ತಂಡದ ಪ್ರಯತ್ನ,,,,,,,,, (ಸಮಯ ಸಧ್ಯದಲ್ಲೇ ತಿಳಿಸುತ್ತೇವೆ)
 
      ಜೊತೆಯಾಗಿ,,,,, ಅಂದು, ನಮ್ಮೊಂದಿಗೆ,,,,,,,,,,,,, 
 
-ಜಿ.ಕೆ. ನವೀನ್ ಕುಮಾರ್