ನೆನಪಿನ ಹಂಬಲಿಕೆ

Submitted by ಅಜ್ಞಾತ on Fri, 02/02/2018 - 00:07

ತಿಳಿ ನೀರಲಿ ನಿನ್ನ ಪ್ರತಿಬಿಂಬ ಕಾಣುವೆ ದಿನ
                      ಕದಡಿತು ಸುಳಿಯೊಂದು ,
ಮರೆಯಾಯಿತು ಮೆಲ್ಲಗೆ ಇನ್ನು ಹೇಗೆ ಹಿಡಿದಿಡಿಲಿ ಆ ನೆನಪು.   (೧)
 
ಮರಳಿನ ಮೇಲೆ ಹೆಜ್ಜೆಯ ಗುರುತು ಮೂಡಲು
                     ಬಿರುಗಾಳಿಯು ಬೀಸಿತು
ಗುರುತೆಲ್ಲವ ಅಳಸಿತು  ಇನ್ನು ಹೇಗೆ ಹಿಂಬಾಲಿಸಲಿ ನಿನ್ನನು    (೨)
 
ಸುಳಿಮಿಂಚಿಗೆ ಚಂಗನೆ ಹೊಳೆಯುವ ಮನಸಾಯಿತು
                     ಕಾರ್ಮೋಡದ ಆ ಸದ್ದಿಗೆ
ಉಸಿರಾಟ ತಾಳ ತಪ್ಪಿತು ಇನ್ನು ಹೇಗೆ ಸುದಾರಿಸುವುದು ಈ ಜೀವ  (೩)
 
ಅಲೆಯೊಂದಿಗೆ ಹೊಯ್ದಾಟಕೆ ದೋಣಿಯೊಂದು ಓಲಾಡಿತು
                     ಎದ್ದಿತು ಭಾರೀ ಅಲೆ,
ಹಿಡಿತಕ್ಕೆ ಸಿಗದಾಯಿತು ನೌಕೆ ಇನ್ನು ಹೇಗೆ ದಡ ಸೇರುವುದು  ನಾ  (೪)
 
ಪ್ರತಿರಾತ್ರಿಯೂ ಎಣಿಸುವೆ ನೀ ಬರುವೆ ಕನಸಲ್ಲಿ ಎಂದು
                       ದುಸ್ವಪ್ನದ ಕನಸಲ್ಲಿ ನೀ ಹೇಳದೆ ಹೋದೆ ಎಲ್ಲಿಗೆ
ಕಣ್ಣಲ್ಲಿ ಇನ್ನು ತೇವವಿದೆ ಬಿಡದೆ ಹುಡುಕುವೆ ನಿನ್ನನು  (೫)