ಬುರುಡಾಲಜಿ - ತಪ್ಪುಗಳ ಬೆನಟ್ಟಿ

ಬುರುಡಾಲಜಿ - ತಪ್ಪುಗಳ ಬೆನಟ್ಟಿ

ಬರಹ

ನಮಗೇಕೆ ತಪ್ಪುಗಳು ಇನ್ನೊಬ್ಬರಲ್ಲಿ ಮಾತ್ರ ಕಾಣುತ್ತವೆ ? ನಮ್ಮಲ್ಲೇಕೆ ಕಾಣುವುದಿಲ್ಲ?
ಮಾನವ ಹುಟ್ಟುತಲೇ ಸ್ವಾರ್ಥಿ. ಸತ್ಯದ ಹುಡುಕಾಟದಲ್ಲಿ ತನಗೆ ಸರಿ ತೋಚಿದನ್ನೇ ಅಧಮ್ಯ ಸತ್ಯವೆಂದು (ಅಲ್ಟಿಮೇಟ್ ಟ್ರುಥ್) ನಂಬುವುದು ಅವನ ಗುಣ. ಹುಟ್ಟಿದಾತ ಬೆಳೆದೇ ಬೆಳೆಯುತ್ತಾನೆ, ಹೀಗೆ ಬೆಳೆಯುತ್ತಾ ತಾನು ಗ್ರಹಿಸುವ ಅರಿವನ್ನು ತನ್ನ ನಂಬಿಕೆಯಾಗಿ ಬದಲಾಯಿಸುತ್ತಾ ಹೋಗುತ್ತಾನೆ. ಇದಕ್ಕೆ ಸಹಕರಿಸುವುದು ತಾನು ಕಂಡುಕೊಂಡ ಅರಿವಿಗೆ ಸರಿ ಹೊದುವಂತೆ ಮರುಕಳಿಸುವ ಘಟನೆಗಳು. ಈ ರೀತಿಯ ಘಟನೆಗಳು ಹೆಚ್ಚು ಹೆಚ್ಚು ಮರುಕಳಿಸಲು ತಾನು ಕಂಡುಕೊಂಡ ಅರಿವನ್ನು ಕ್ರಮೇಣ ತನ್ನ ನಂಬಿಕೆಯಾಗಿ ಬದಲಾಯಿಸುತ್ತಾನೆ. ಒಮ್ಮೆ ನಂಬಿಕೆಯಾಗಿ ಬದಲಾದ ಅರಿವು ಕ್ರಮೇಣ ಅವನ ನಡವಳಿಕೆ ಎನ್ನಿಸಿಕೊಳ್ಳುತ್ತದೆ. ಈ ನಡವಳಿಕೆ ಒಬ್ಬನ ಮೂಲಕ ಆಚರಣೆಗೆ ಬರುತ್ತದೆ. ಹಾಗಾಗಿ ವ್ಯಕ್ತಿಯ ನಡವಳಿಕೆಯಲ್ಲಿ ಬಹಳ ಮುಕ್ಯ ಪಾತ್ರ ವಹಿಸುವುದು ತಾನು ಗ್ರಹಿಸುವ ಅರಿವು. ದಯವಿಟ್ಟು ತಾಳ್ಮೆ ಕಳೆದುಕೊಳ್ಳಬೇಡಿ ಇಲ್ಲಿ ಇನ್ನೊಬ್ಬರ ತಪ್ಪಿಗೂ ಅರಿವಿಗೂ ಏನು ಸಂಭಂಧ, ಈ ವಯ್ಯ ಬುರುಡೆ ಬಿಡ್ತಾನೆ ಅಂತ ಹೇಳಿ, ಹಳಿ ಇಲ್ದಲೆ ಇರ್ಲಿ, ರೈಲೂ ಇಲ್ದಂಗ್ ಬಿಡ್ತಿದ್ದಾನಲ್ಲ ಅಂದ್ಕೋಬೇಡಿ. ನಾನು ಹೇಳುತ್ತಿರುವುದು ಕೂಡ ತಪ್ಪಿರಬಹುದು, ಆದರೆ ಇದು ನಾನು ಗ್ರಹಿಸಿರುವ ಅರಿವು ಎಂದಷ್ಟೇ ನಾನು ಹೇಳಬಹುದು. ಇದೆ ಅಲ್ಟಿಮೇಟ್ ಟ್ರುಥ್ ಅಥವ ಅಧಮ್ಯ ಸತ್ಯವೆಂದರೆ ನನ್ನ ಮಾತಿಗೆ ನಾನೇ ಕೊಂಟ್ರಡಿಕ್ಟ್ ಮಾಡಿದಂಗಾತ್ತದೆ. ಸೊ ನಾನು ಹಾಗೆ ಮಾಡುವುದಿಲ್ಲ. ಇದನ್ನು ಓದಿ ನಿಮ್ಮ ನಿಮ್ಮ ಅರಿವಿಗೆ ಸರಿಯೆನಿಸಿದರೆ ಮಾತ್ರ ಒಪ್ಪಿ. ಸೊ, ಕಮಿಂಗ್ ಟು ದಿ ಪಾಯಂಟ್,  ಫಾರ್ ಎಗ್ಸ್ಯಾಂಪಲ್, ತನಗೆ ಎದುರಾಗುವ ವ್ಯಕ್ತಿ ತನ್ನ ನಂಬಿಕೆಗಳಿಗೆ ವಿರುಧ್ಧವಾಗಿ ನಡೆದುಕೂಂಡಾಗ ಏನಾಗುತ್ತದೆ ಎಂದು ಗಮನಿಸಿ? ತಾನು ಕಂಡುಕೊಂಡಿರುವ ಸತ್ಯಕ್ಕೆ , ತನ್ನ ಅರಿವಿಗೆ , ತನ್ನ ತತ್ವಕ್ಕೆ, ತನ್ನ ನಡುವಳಿಕೆಗೆ ಇದು ಒಪ್ಪುವುದಿಲ್ಲ. ಸೊ ತಾನಲ್ಲದ ಆ ಇನ್ನೊಬ್ಬ ಮಾಡಿದ್ದು ತಪ್ಪಾಗಿ ಕಾಣುತ್ತದೆ. ಅವನನ್ನು ತನ್ನದಲ್ಲದ ಭಾಗವಾಗಿ ವರ್ಗೀಕರಿಸಿ ನೋಡಲಾಗುತ್ತದೆ. ಯಾವುದು ತನ್ನದಲ್ಲವೋ ಅದೆಲ್ಲವೂ ತನಗೆ ತ್ರೆಟ್ ಎಂದು ನಂಬುವುದು ಕೂಡ ಮಾನವನ ಒಂದು ಸ್ವಾರ್ಥ ಗುಣ. ಹಾಗಾಗಿ ಕಲಹಗಳು ಉಂಟಾಗುತ್ತವೆ. ಇಲ್ಲಿ ಬಹುತೇಕರು  ಮಾಡುವ ಇನ್ನೊಂದು ತೀವ್ರವಾದ ಪ್ರತಿಕ್ರಿಯೆಎಂದರೆ, ತನ್ನ ಅರಿವಿನ ಮೂಲಕ ಇನ್ನೊಬ್ಬರನ್ನು ಅಳೆದು ತೂಗುವುದು. ಸರಿ ತಪ್ಪಿನ ಗೋಜಲಿಗೆ ಇಳಿದು ರಾಡಿ ಮಾಡಿ, ನೀರನ್ನು ಕಲಕಿ ಗಬ್ಬಡ ಮಾಡಿ ದ್ವೇಷದ ಸೂಟ್ಕೇಸೆ ಕೀಲಿ ಓಪನ್ ಮಾಡಿ ಒಳಗೆ ಕೂತುಬಿಡುವುದು.
ಇನ್ನು ಕಮಿಂಗ್ ಟು ದಿ ಸೆಕೆಂಡ್ ಕ್ವೆಶ್ಚನ್ ನಮ್ಮಲೆಕೆ ತಪ್ಪುಗಳು ಕಾಣುವುದಿಲ್ಲ? ನಮಗೆ ನಾವುಗಳು ಯಾವಾಗಲು ಸರಿಯೇ. ಏಕೆಂದರೆ ನಮ್ಮ ನಮ್ಮ ತತ್ವಗಳು ಎಷ್ಟು ಸರಿಯೆಂದು ನಮಗೆ ಹೇಗೆ ಗೊತ್ತಾಗಬೇಕು ? ನಾವುಗಳು ಗ್ರಹಿಸುರುವ ಅರಿವುಗಳು ಎಷ್ಟು ಸತ್ಯ ವೆಂದು ಹೇಗೆ ತಿಳಿಯಬೇಕು ? ಒಂದು ವೇಳೆ ಇದು ತಿಳಿದಿದ್ದರೆ ಎಲ್ಲರಿಗೂ ೧೦೦/೧೦೦ ನೂರು ಸಿಗಬೇಕಿತ್ತು ಜೀವನದ ಎಲ್ಲ ಪರೀಕ್ಷೆಗಳಲ್ಲಿ. ಅದಕ್ಕೆ ನಮ್ಮ ಸರಿ ತಪ್ಪುಗಳನ್ನು ಇವಾಲುವೆಟ್ ಮಾಡಲು ನಮ್ಮಿಂದಲೇ ಸಾದ್ಯವಿಲ್ಲ. ಇನ್ನೊಬ್ಬರಿಗೂ ಸಾಧ್ಯವಿಲ್ಲ.  ಸೊ, ಇನ್ನೊಬ್ಬರನ್ನು ತಪ್ಪು ಎನ್ನುವ ಮೊದಲು ನೀವೆಷ್ಟು ಸರಿ ಎಂದು ಇವಾಲುವೇಟ್ ಮಾಡಿಕೊಳ್ಳಿ ಅಥವಾ ಅದರ ಗೋಜಲಿಗೆ ಬೀಳದೆ ಅವರವರು ಇರುವಂತೆ ಆಕ್ಸೆಪ್ಟ್ ಮಾಡಿಬಿಡಿ. ರಾಯರು ಹೇಳುವಂತೆ, ನೆಮ್ಮದಿ ಜೀವನಕ್ಕೆ ನೂರೊಂದು ಸೂತ್ರಗಳು ಅಂತಾರಲ್ಲ ಅಂತ ಮಾತು.

ತಪ್ಪುಗಳ ಹುಡುಕಿದೆ ಜಗವೆಲ್ಲ
ಯಾರೋ ಸರಿಯೆಂದು ಕಾಣಲಿಲ್ಲ
ಹುಡುಕಿದೆ ನನ್ನಲಿ
ಎಲ್ಲ ತಪ್ಪುಗಳ ಮೂಲವು
ನಾನೇ ಆಗಿರುವೆ ಎಂದು ತಿಳಿಯಿತು
 
- ಬುರುಡೆದಾಸ
(ಚಿತ್ರ ಕೃಪೆ - ಗೂಗಲ್ ಇಮೇಜ್ - ಪಿನ್ತ್ರೆಸ್ಟ್ )

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet