ನೀ ಬಾಲಕೃಷ್ಣ

ನೀ ಬಾಲಕೃಷ್ಣ

ಕವನ

ಹೊನ್ನ ಕಿರಣದಿ ಮಿಂದು 
ತಂಪಾದ ಗಾಳಿಯನು ಸವಿದು 
 
ನೆನಹು ಮನದಾಗ ಅರಳಿ 
ಪ್ರೀತಿ ಎದೆಯಾಗ ತುಂಬಿ 
 
ನೀ ನಡೆವಾಗ ನುಡಿವಾಗ 
ನಗುವಾಗ ಅಳುವಾಗ 
 
ಜೇನು ಹನಿ ತೊಟ್ಟಿಕ್ಕಿ 
ಬಾಳ ಕೊಡ ತುಂಬಿ ಉಕ್ಕಿ..
 
ಕಂದ ನೀ ಬಂದೆ ಬಾಳಲ್ಲಿ 
ಮುಂಜಾನೆ ರವಿಕಿರಣದಂತೆ!!

Comments